ನವದೆಹಲಿ: ಡಿಗ್ರಿ ಮುಗಿಸಿ ಉದ್ಯೋಗ ಸಿಗದ ಯುವಜನರಿಗೆ ಅಗತ್ಯ ಉದ್ಯೋಗ ಕೌಶಲ್ಯ ಒದಗಿಸುವ ಗುರಿಯೊಂದಿಗೆ ಇಂಟರ್ನಶಿಪ್ ಸ್ಕೀಮ್ ಚಾಲನೆಗೊಳ್ಳುತ್ತಿದ್ದು, ಅಕ್ಟೋಬರ್ 12ರಿಂದ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳಿಂದ ಅವಕಾಶ ನೀಡಲಾಗುತ್ತಿದೆ.
ಕಡಿಮೆ ಕೌಶಲ್ಯ ಹೊಂದಿರುವ ಉದ್ಯೋಗವಕಾಶ ಕಲ್ಪಿಸುವ ಉದ್ದೇಶದಿಂದ ಯುವಕರಿಗೆ ನೈಜ ಕೆಲಸದ ಅನುಭವ ಮತ್ತು ಅಗತ್ಯ ಕೌಶಲ್ಯ ಒದಗಿಸಲು ಇಂಟರ್ನ್ಶಿಪ್ ಸ್ಕೀಮ್ ಆರಂಭಿಸಲಾಗಿದೆ. ದೇಶದ ಅಗ್ರಮಾನ್ಯ 500 ಕಾರ್ಪೊರೇಟ್ ಕಂಪನಿಗಳಲ್ಲಿ ಯುವಕ ಮತ್ತು ಯುವತಿಯರು ಒಂದು ವರ್ಷ ಇಂಟರ್ನ್ಶಿಪ್ ಮಾಡಬಹುದು.
ಹತ್ತನೇ ತರಗತಿ ತೇರ್ಗಡೆಯಾಗಿರುವ 21 ವರ್ಷದಿಂದ 24 ವರ್ಷದ ವಯಸ್ಸಿನ ಯುವಕ ಮತ್ತು ಯುವತಿಯರು ಈ ಸ್ಕೀಮ್ಗೆ ಅರ್ಹರಿರುತ್ತಾರೆ. ಐಐಟಿಯಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರು, ಚಾರ್ಟರ್ಡ್ ಅಕೌಂಟೆಂಟ್ಸ್ ವೃತ್ತಿಪರ ಪದವಿ, ಸರ್ಕಾರಿ ಉದ್ಯೋಗದಲ್ಲಿರುವವರ ಕುಟುಂಬದವರು, ವರ್ಷಕ್ಕೆ 8 ಲಕ್ಷ ರೂಗಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬದವರಿಗೆ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಈ ಇಂಟರ್ನ್ಶಿಪ್ ಸ್ಕೀಮ್ನಲ್ಲಿ ಸರ್ಕಾರದಿಂದ ಇಂಟರ್ನ್ಶಿಪ್ ಅಭ್ಯರ್ಥಿಗಳಿಗೆ ಏಕಕಾಲದ 6,000 ರೂ ಹಣ ನೀಡಲಾಗುತ್ತದೆ. ಮಾಸಿಕವಾಗಿ 5,000 ರೂ ಸ್ಟೈಪೆಂಡ್ ನೀಡಲಾಗುತ್ತದೆ.
ಇಂಟರ್ನಿಗಳಿಗೆ ಸರ್ಕಾರದಿಂದ ಮಾಸಿಕ 4,500 ರೂ, ಇದಲ್ಲದೆ ಕಂಪನಿಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಉಪಕ್ರಮಗಳ ಭಾಗವಾಗಿ ಒದಗಿಸುವ 500 ರೂ ಹೆಚ್ಚುವರಿ ಸ್ಟ್ಪೈಫಂಡ್ ದೊರೆಯುತ್ತದೆ.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗಳಂತಹ ಕಾರ್ಯಕ್ರಮಗಳ ಅಡಿಯಲ್ಲಿ ಇಂಟರ್ನ್‌ಗಳು ವಿಮೆ ಮಾಡಿರುವುದನ್ನು ಸರ್ಕಾರವು ಖಚಿತಪಡಿಸುತ್ತದೆ. ಸರ್ಕಾರವು ವೆಚ್ಚವನ್ನು ಭರಿಸುತ್ತದೆ.
ಇಂಟರ್ನ್ಶಿಪ್ ಪಡೆಯಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು, ನಿಗದಿತ ಪೋರ್ಟಲ್ (www.pminternship.mca.gov.in)ನಲ್ಲಿ ನೊಂದಾಯಿಸಿಕೊಳ್ಳಬೇಕು. ಆಧಾರ್ ದಾಖಲೆಗಳ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ, ತಮ್ಮ ಪ್ರೊಫೈಲ್ ರಚಿಸಬೇಕು. ಅಭ್ಯರ್ಥಿಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ, ಪೋರ್ಟಲ್ ಮೂಲಕ ರೆಸ್ಯೂಮ್ ಅನ್ನು ರಚಿಸಲಾಗುತ್ತದೆ. ಈ ಇಂಟರ್ನ್‌ಶಿಪ್‌ಗಳು 12 ತಿಂಗಳ ಅವಧಿಗೆ ಇರುತ್ತದೆ.