ಬೆಂಗಳೂರು: ಸಾರ್ವಜನಿಕರಲ್ಲಿ ಕೆಲವು ಪ್ರಶ್ನೆಗಳು, ಗೊಂದಲಗಳಿವೆ. ಸದ್ಯ ನಮಗೆ ನೀರಿಗೆ ತೊಂದರೆ ಇಲ್ಲಎಂಬ ಭಾವನೆಗಳು ಇವೆ. ಹಾಗಾಗಿ, ಜಾಗೃತಿ ಮೂಡಿಸಿದಾಗ್ಯೂ ಸಂಪರ್ಕ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
ಈ ವರೆಗೆ ಕೇಲ 1596 ಅರ್ಜಿಗಳು ಸಲ್ಲಿಕೆ ಆಗಿವೆ. ಸಂಪರ್ಕ ಹೆಚ್ಚಿಸಲು 110 ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದ್ದು ಈ ವ್ಯಾಪ್ತಿಯಲ್ಲಿ4 ಲಕ್ಷ ಸಂಪರ್ಕಗಳ ಗುರಿಯಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ 1 ಲಕ್ಷ ಸಂಪರ್ಕ ನೀಡುವ ಗುರಿಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾವೇರಿ 5ನೇ ಹಂತದ ಯೋಜನೆ ಉದ್ಘಾಟನೆಗೊಂಡು ತಿಂಗಳಾದರೂ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಂದ ನೀರಿನ ಸಂಪರ್ಕಕ್ಕೆ ಕೇಧಿವಲ 1596 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿದ್ದು, ನಾನಾ ಕಾರಣಗಳಿಂದ ಸಾರ್ವಜನಿಕರು ಸಂಪರ್ಕ ಪಡೆಯಲು ನಿರಾಸಕ್ತಿ ತೋರುತ್ತಿದ್ದಾರೆ.
ಈ ಯೋಜನೆಯಡಿ ಸಿಗುವ 775 ದಶಲಕ್ಷ ಲೀಟರ್ ನೀರನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲು ಉತ್ಸುಕವಾಗಿರುವ ಬೆಂಗಳೂರು ಜಲಮಂಡಳಿಗೆ ನಿರೀಕ್ಷಿತ ಪ್ರಮಾಣದಲ್ಲಿಅರ್ಜಿಗಳು ಬರುತ್ತಿಲ್ಲ.
ಒಟ್ಟಾರೆ ನಗರದಲ್ಲಿ ಹೊಸ ಸಂಪರ್ಕಕ್ಕಾಗಿ ಸುಮಾರು 30 ಸಾವಿರ ಅರ್ಜಿಗಳು ಬಂದರೆ, 110 ಹಳ್ಳಿಗಳ ವ್ಯಾಪ್ತಿಯಿಂದ ಕೇವಲ 1596 ಅರ್ಜಿಗಳು ಬಂದಿವೆ. ಇವುಗಳನ್ನು ಪರಿಶೀಲಿಸಿ 1121 ಅರ್ಜಿಗಳಿಗೆ ಬೇಡಿಕೆ ಟಿಪ್ಪಣಿ ನೀಡಿದೆ.
759 ಅರ್ಜಿಗಳಿಗೆ ಸಂಪರ್ಕ ಮಂಜೂರು ಮಾಡಿದ್ದು, 475 ಅರ್ಜಿಗಳು ಬಾಕಿ ಇವೆ.
ಈಗಾಗಲೇ ಇಲ್ಲಿನ ಜನರಿಗೆ ಕೊಳವೆಬಾವಿಗಳ (ಸಿಎಂಸಿ) ಮೂಲಕ ಉಚಿತ ನೀರು ಪೂರೈಕೆಯಾಗುತ್ತಿದೆ. ಅಲ್ಲದೆ, ಸಾಕಷ್ಟು ಮಂದಿ ವೈಯಕ್ತಿಕವಾಗಿ ಅಥವಾ ಬಡಾವಣೆಯ ಸಂಘ-ಸಂಸ್ಥೆಯ ಕೊಳವೆಬಾವಿಯ ನೀರನ್ನು ಬಳಕೆ ಮಾಡುತ್ತಿದ್ದಾರೆ. ಆದ ಕಾರಣ ಜನರಿಗೆ ಕಾವೇರಿ ನೀರಿನ ಅವಶ್ಯಕತೆ ಕಂಡು ಬರುತ್ತಿಲ್ಲ.
ಇನ್ನು ಒಮ್ಮೆ ಸಂಪರ್ಕ ಪಡೆದು, ಮೀಟರ್ ಅಳವಡಿಕೆಯಾದರೆ ಕಾವೇರಿ ನೀರನ್ನು ಬಳಸದಿದ್ದರೂ ನೀರಿನ ಮಾಸಿಕ ಶುಲ್ಕ ಪಾವತಿಸಲೇಬೇಕು. ಈ ಕಾರಣದಿಂದ ಜನರು ಸಂಪರ್ಕ ಪಡೆಯಲು ಮುಂದಾಗುತ್ತಿಲ್ಲ.
ಸದ್ಯ ನೀರಿಗೆ ತೊಂದರೆಯಿಲ್ಲ.
ಬೇಸಿಗೆಯ ಮೂರ್ನಾಲ್ಕು ತಿಂಗಳು ನೀರಿನ ಸಮಸ್ಯೆ ಉದ್ಭವಿಸಿದರೆ ಟ್ಯಾಂಕರ್ ಮೊರೆ ಹೋದರಾಯಿತು ಎಂಬ ಮನೋಭಾವನೆಯೂ ಜನರಲ್ಲಿದೆ. ಇನ್ನು ಒಂದೇ ಬಾರಿಗೆ ಸಾವಿರಾರು ರೂಪಾಯಿ ಪ್ರೊರೇಟಾ ಶುಲ್ಕ ಪಾವತಿ ಮಾಡಬೇಕಿರುವುದು ಕೂಡ ಅನೇಕರಿಗೆ ಕಷ್ಟ ಎಂಬ ಕಾರಣದಿಂದಲೂ ಆಸಕ್ತಿ ತೋರುತ್ತಿಲ್ಲ.
”ಸಾರ್ವಜನಿಕರಲ್ಲಿ ಕೆಲವು ಪ್ರಶ್ನೆಗಳು, ಗೊಂದಲಗಳಿವೆ. ಸದ್ಯ ನಮಗೆ ನೀರಿಗೆ ತೊಂದರೆ ಇಲ್ಲಎಂಬ ಭಾವನೆಗಳು ಇವೆ. ಹಾಗಾಗಿ, ಜಾಗೃತಿ ಮೂಡಿಸಿದಾಗ್ಯೂ ಸಂಪರ್ಕ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು 120ಕ್ಕೂ ಹೆಚ್ಚು ಫ್ಲ್ಯಾಟ್ ಹೊಂದಿರುವ ಅಪಾರ್ಟ್ಮೆಂಟ್ಗಳು ಎಸ್ಟಿಪಿ ಹೊಂದಿರಬೇಕು.
ಶೇ.30ರಷ್ಟು ಸಂಸ್ಕರಿಸಿದ ನೀರು ಮರುಬಳಕೆ ಮಾಡಬೇಕೆಂದು ಎನ್ಜಿಟಿ ನಿಯಮ ಪಾಲನೆಯ ಕಡ್ಡಾಯ ಷರತ್ತಿದೆ. ಹಾಗಾಗಿ, ನಿರೀಕ್ಷಿತ ಪ್ರಮಾಣದ ಅರ್ಜಿಗಳು ಬರುತ್ತಿಲ್ಲ” ಎನ್ನುತ್ತವೆ ಜಲಮಂಡಳಿ ಮೂಲಗಳು.
110 ಹಳ್ಳಿಗಳ ವ್ಯಾಪ್ತಿಯಲ್ಲಿಸೇವಾ ಠಾಣೆಗಳ ಸ್ಥಾಪನೆ, ಸಿಬ್ಬಂದಿಗಳ ನೇಮಕಕ್ಕೆ ಸಜ್ಜಾಗುತ್ತಿರುವ ಜಲಮಂಡಳಿಗೆ ನಿರೀಕ್ಷಿತ ಪ್ರಮಾಣದಲ್ಲಿಸಾರ್ವಜನಿಕರು ಸಂಪರ್ಕ ಪಡೆಯಲು ಮುಂದಾಗದಿರುವುದು ನಿಧಿರಾಸೆ ಮೂಧಿಡಿಧಿಸಿಧಿದೆ.
ಜನರಿಗೆ ನೀರು ಪೂರೈಸುವ ನಿಟ್ಟಿನಲ್ಲಿಉತ್ತಮ ಸೇವೆ ನೀಡುವುದು ಎಷ್ಟು ಮುಖ್ಯವೋ, ನಿರ್ವಹಣೆಗೆ ಆದಾಯವೂ ಅಷ್ಟೇ ಮುಖ್ಯವಾಗಿದೆ.
ಈ ವ್ಯಾಪ್ತಿಯಲ್ಲಿ20 ಸೇವಾಠಾಣೆ ತೆರೆಯಲು ಮತ್ತು 417 ಮಂದಿ ಸಿ ಮತ್ತು ಡಿ ಗ್ರೂಪ್ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿನೇಮಿಸಿಕೊಳ್ಳಲು ನಿರ್ಧರಿಸಿರುವ ಜಲಮಂಡಳಿ, ಸೇವಾಠಾಣೆಗಳ ನಿರ್ವಹಣೆ ಮತ್ತು ಸಿಬ್ಬಂದಿಯ ಸಂಬಳಕ್ಕೆ ಆದಾಯವನ್ನೂ ಈ ಮುಖೇನ ಪಡೆಯಬೇಕಿದೆ.