spot_img
spot_img

ರೈಲುಗಳು, ಪ್ಲಾಟ್ ಫಾರಂಗಳಲ್ಲಿ ಮನೆಬಿಟ್ಟು ಬಂದ 253 ಮಕ್ಕಳ ರಕ್ಷಣೆ :ಆರ್ ಆರ್ ಎಫ್ ಕಾರ್ಯಾಚರಣೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಡಿಸೆಂಬರ್‌ ನಲ್ಲಿ ಈ ಸಂಖ್ಯೆ ಹೆಚ್ಚಾಗಿದೆ. 2023ರ ಜನವರಿಯಿಂದ ಡಿಸೆಂಬರ್‌ವರೆಗೆ 50 ಬಾಲಕಿಯರು ಸೇರಿದಂತೆ ಒಟ್ಟು 237 ಮಕ್ಕಳನ್ನು ರಕ್ಷಿಸಲಾಗಿತ್ತು.

RPF ಹಿರಿಯ ವಿಭಾಗೀಯ ಭದ್ರತಾ ಕಮಿಷನರ್ ಶ್ರೇಯನ್ಸ್ ಚಿಂಚವಾಡೆ ಮಾತನಾಡಿ, “ರೈಲ್ವೆ ರಕ್ಷಣಾ ಪಡೆ, ಸರ್ಕಾರಿ ರೈಲ್ವೆ ಪೊಲೀಸರು ಬಚಾಪನ್ ಬಚಾವೋ ಆಂದೋಲನದೊಂದಿಗೆ ಮಕ್ಕಳ ಸುರಕ್ಷಿತ ಸಂಚಾರಕ್ಕಾಗಿ ರೈಲುಗಳು ಮತ್ತು ನಿಲ್ದಾಣದಲ್ಲಿ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ತೊಂದರೆಯಲ್ಲಿರುವ ಯಾವುದೇ ಮಕ್ಕಳಿಗೆ ತಿಳಿಸಲು ರೈಲ್ವೆ ಸಹಾಯವಾಣಿ 139 ಲಭ್ಯವಿದೆ ಎಂದು ತಿಳಿಸಿದರು.

2024 ರಲ್ಲಿ ರೈಲ್ವೆ ರಕ್ಷಣಾ ಪಡೆಯ ಮಕ್ಕಳ ಕಳ್ಳಸಾಗಣೆ ವಿರೋಧಿ ಘಟಕದಿಂದ 49 ಬಾಲಕಿಯರು ಸೇರಿದಂತೆ ಒಟ್ಟು 253 ಮಕ್ಕಳನ್ನು ಸಂಭಾವ್ಯ ಶೋಷಣೆಯಿಂದ ರಕ್ಷಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸುವ ದುರ್ಬಲ ಮಕ್ಕಳ ಸುರಕ್ಷತೆ ಖಾತ್ರಿ ನಿಟ್ಟಿನಲ್ಲಿ ಈ ವಿಶೇಷ ಪಡೆ, ‘ನನ್ಹೆ ಫರಿಷ್ಟೆಯನ್ನು (‘Nanhe Farishteh) ಮೇ 2018 ರಲ್ಲಿ ಭಾರತೀಯ ರೈಲ್ವೆಯಾದ್ಯಂತ ಸ್ಥಾಪಿಸಲಾಯಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಡಿಸೆಂಬರ್‌ ನಲ್ಲಿ ಈ ಸಂಖ್ಯೆ ಹೆಚ್ಚಾಗಿದೆ.

2023ರ ಜನವರಿಯಿಂದ ಡಿಸೆಂಬರ್‌ವರೆಗೆ 50 ಬಾಲಕಿಯರು ಸೇರಿದಂತೆ ಒಟ್ಟು 237 ಮಕ್ಕಳನ್ನು ರಕ್ಷಿಸಲಾಗಿತ್ತು.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಬೆಂಗಳೂರು ಹೆಚ್ಚುವರಿ ವಿಭಾಗೀಯ ರೈಲ್ವೆ ಮ್ಯಾನೇಜರ್, ಪರೀಕ್ಷಿತ್ ಮೋಹನ್‌ಪುರಿಯಾ, ಈ 253 ಮಕ್ಕಳನ್ನು ಸಂಭಾವ್ಯ ಶೋಷಣೆಯಿಂದ ರಕ್ಷಿಸಲಾಗಿದೆ.

ಈ ಮಕ್ಕಳ ಪೈಕಿ ಬಹುಪಾಲು ಮಕ್ಕಳನ್ನು ಬಾಲಕಾರ್ಮಿಕತೆ, ವೇಶ್ಯಾವಾಟಿಕೆ ಮತ್ತಿತರ ಹೀನ ಕೆಲಸಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಕೆಲ ಮಕ್ಕಳು ಪೋಷಕರೊಂದಿಗ ಸಣ್ಣ ಜಗಳ ಅಥವಾ ಪರೀಕ್ಷೆಗಳಲ್ಲಿ ಕಳಪೆ ಸಾಧನೆ ನಂತರ ಮನೆ ಬಿಟ್ಟು ಬರುತ್ತಿದ್ದಾರೆ ಎಂದು ಮತ್ತೋರ್ವ ಅಧಿಕಾರಿ ತಿಳಿಸಿದರು.

ರಕ್ಷಣಾ ಕ್ರಮಗಳ ಬಗ್ಗೆ ವಿವರಿಸಿದ ಮೋಹನ್ ಪುರಿಯಾ, ರಕ್ಷಿಸಿದ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮತ್ತು ಎನ್ ಜಿಒಗಳಿಗೆ ಹಸ್ತಾಂತರಿಸಲಾಗುತ್ತದೆ. ನಂತರ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಲಾಗುತ್ತದೆ. ಈ ಸಮಿತಿಗಳು ಸಮಾಲೋಚನೆ ನಡೆಸಿದ ಬಳಿಕ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಈ ಘಟಕಗಳು ಮಕ್ಕಳ ರಕ್ಷಣೆ ಮತ್ತು ಕಳ್ಳಸಾಗಣೆ ಪ್ರಕರಣಗಳನ್ನು ಪತ್ತೆಹಚ್ಚಲು ವಿಶೇಷವಾಗಿ ತರಬೇತಿ ಪಡೆದಿದ್ದು, ವಾರದ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ ಎಂದು ADRM ಮಾಹಿತಿ ನೀಡಿದರು.

ಆರ್‌ಪಿಎಫ್ ಬೆಂಗಳೂರು ವಿಭಾಗ ಎಂಟು ಮೀಸಲಾದ ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳನ್ನು ನಿರ್ವಹಿಸುತ್ತದೆ.

ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್, ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್, ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣ, ಬೈಯಪ್ಪನಹಳ್ಳಿ, ಬಂಗಾರಪೇಟೆ, ಮಂಡ್ಯ, ಧರ್ಮಪುರಿ ಮತ್ತು ಹಿಂದೂಪುರದಲ್ಲಿ ತಲಾ ಒಬ್ಬರು ಯುವ ಅಧಿಕಾರಿ ಮತ್ತು ಇಬ್ಬರು ಸಿಬ್ಬಂದಿ ಇದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

C T RAVI ARREST ISSUE – ಸಿ.ಟಿ ರವಿ ಫೇಕ್ ಎನ್ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತಾ?

Hubli News: "ತರಾತುರಿಯಲ್ಲಿ ಸಿ. ಟಿ. ರವಿ‌ ವಿರುದ್ಧ ಎಫ್​ಐಆರ್ ಮಾಡಲಾಗಿದೆ. ಕಾಮನ್ ಸೆನ್ಸ್ ಬೇಡ್ವಾ ಬೆಳಗಾವಿ ಕಮಿಷನರ್​ಗೆ. ಬೆಳಗಾವಿ ಕಮಿಷನರ್ ಅನ್​ಫಿಟ್ ಇದ್ದಾರೆ" ಎಂದು...

PM MODI TO ATTEND CHRISTMAS – ಪ್ರಧಾನಿ ಮೋದಿ ನಾಳೆ ಕ್ರಿಸ್ಮಸ್ ಆಚರಣೆಯಲ್ಲಿ ಭಾಗಿ

New Delhi News: ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಕ್ರಿಸ್​ಮಸ್ ಆಚರಣೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಸೋಮವಾರ ಸಂಜೆ...

BANDIPUR FOREST – ಬಂಡೀಪುರ ರಾತ್ರಿ ಸಂಚಾರ ನಿಷೇಧ ಸಮಸ್ಯೆ

BANDIPUR NEWS : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (BTR) ಮೂಲಕ ಹಾದು ಹೋಗುವ 24.7 ಕಿ.ಮೀ ವ್ಯಾಪ್ತಿಯಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ಸಂಬಂಧಿಸಿದ ಸಮಸ್ಯೆಗಳು...

JAYADEVA HOSPITAL – ನೂತನ ಜಯದೇವ ಆಸ್ಪತ್ರೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ

Kalaburagi News: ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸುವ ಮುನ್ನ ಸಿದ್ದರಾಮಯ್ಯ, ಆಸ್ಪತ್ರೆಯ ನೀಲಿ ನಕಾಶೆಯನ್ನು ವೀಕ್ಷಿಸಿದರು. ಆಸ್ಪತ್ರೆಯನ್ನು ವಿಕ್ಷೀಸಿದ ಸಿದ್ದರಾಮಯ್ಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರೊಂದಿಗೆ...