ಸುಧಾ ಮೂರ್ತಿಯವರು ಮಕ್ಕಳ ಜೊಗೆಗಿನ ಸಂದರ್ಶನದಲ್ಲಿ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರಗಳ ಬಗ್ಗೆ ಹೇಳುತ್ತಾರೆ .
ಮಕ್ಕಳ ಸೂಕ್ಷ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡುವಲ್ಲಿ ಪೋಷಕರು ಏನೆಲ್ಲಾ ಮಾಡಬೇಕು ಮತ್ತು ಮಕ್ಕಳಿಗೆ ಪೋಷಕ ಜೊತೆಗಿನ ಬಾಂಧವ್ಯ ಹೇಗಿರಬೇಕು ಇತ್ಯಾದಿಗಳ ಬಗ್ಗೆ ವಿವರಿಸುತ್ತಾರೆ.
ಸುಧಾ ಮೂರ್ತಿಯವರು ಕೇವಲ ಸಮಾಜಸೇವಕಿ ಮಾತ್ರವಲ್ಲದೆ, ಇವರು ದೊಡ್ಡ ಬಿಸಿನೆಸ್ ಮಹಿಳೆಯೂ ಹೌದು. ಅದರ ಜೊತೆಗೆ ಅವರು ಪೇರೆಂಟಿಂಗ್ ಕೋಚ್ ಕೂಡಾ ಹೌದು.
ಸುಧಾ ಅವರು ಹೇಳುವ ಪ್ರಕಾರ ಮಕ್ಕಳ ಪೋಷಣೆ ಯಾವ ರೀತಿಯಿಂದ ಆಗಿರುತ್ತದೆ ಎನ್ನುವುದೂ ಅವರ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುತ್ತಾರವರು.
ಮಕ್ಕಳ ಜೊತೆಗಿನ ಒಂದು ಸಂದರ್ಶನದಲ್ಲಿ ಮಾತನಾಡುತ್ತಾ ಮಕ್ಕಳು ತಂದೆ ತಾಯಿಯರೊಡನೆ ಹೇಗೆ ಎಲ್ಲವನ್ನೂ ಹಂಚಿಕೊಳ್ಳ ಬಹುದು ಮತ್ತು ತಂದೆ ತಾಯಿಯರನ್ನು ಮಕ್ಕಳು ತಮ್ಮ ಯೋಚನೆಗಳನ್ನು ಒಪ್ಪಿಕೊಳ್ಳುವಂತೆ ಹೇಗೆ ಮಾಡಬಹುದು ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಅವರು ಹೇಳುತ್ತಾರೆ ಮಕ್ಕಳು ಯಾವುದೇ ವಿಷಯವನ್ನು ತಂದೆತಾಯಿಯರಿಂದ ಮುಚ್ಚಿಡಬಾರದೆನ್ನುತ್ತಾರೆ.
ಅಲ್ಲದೆ ತಮ್ಮ ಮತ್ತು ಮಗಳ ಉದಾಹರಣೆಯನ್ನು ಕೊಡುತ್ತಾ ಮಕ್ಕಳು ಮತ್ತು ತಂದೆತಾಯಿಗಳ ನಡುವೆ ಯಾವುದೇ ಮುಚ್ಚುಮರೆಯಿರಬಾರದು. ಇದು ಇದ್ದಲ್ಲಿ , ಸಂಬಂಧವನ್ನು ದೂರ ಮಾಡುತ್ತದೆ. ಮತ್ತು ತಂದೆತಾಯಿಗಳೂ ಕೂಡಾ ಮಕ್ಕಳನ್ನು ಅರಿತು ಅವರ ಭಾವನೆಗಳಿಗೆ ಬೆಲೆಕೊಡಬೇಕು ಮತ್ತು ಮಕ್ಕಳು ಏನೇ ಹೇಳಿದರೂ ಅದನ್ನು ಸರಿಯಾಗಿ ಕೇಳಿ ಅವರಿಗೆ ಸೂಕ್ತ ಸಲಹೆ ನೀಡಬೇಕು. ಎನ್ನುತ್ತಾ ಅವರು ಮಕ್ಕಳ ಪೋಷಣೆಯ ಬಗ್ಗೆ ಈ ಸಲಹೆ ನೀಡುತ್ತಾರೆ.
ಸುಧಾ ಮೂರ್ತಿಯವರು ಪೋಷಕರಿಗೆ ಸಲಹೆ ನೀಡುತ್ತಾ ಪೋಷಕರು ಮಕ್ಕಳ ಜೊತೆಗೆ ಮಾತನಾಡುವ ಅವಕಾಶವನ್ನು ಎಂದಿಗೂ ತಪ್ಪಿಸಬಾರದು ಎನ್ನುತ್ತಾರೆ . ನಿಮ್ಮ ಮಗು ನಿಮ್ಮಲ್ಲಿ ಮಾತನಾಡಲು ಭಯ ಪಡುತ್ತಿದೆ ಎಂದಾದರೆ ಅದಕ್ಕಿಂತ ದುರಾದೃಷ್ಟ ಇನ್ನೊಂದಿಲ್ಲ. ಆದ್ದರಿಂದ ಪೋಷಕರು ಮಕ್ಕಳಿಗೆ ಮಾತನಾಡಲು ಅವಕಾಶಕೊಡಬೇಕು ಮತ್ತು ಅದಕ್ಕಾಗಿ ಅವರಿಗೆ ಸಮಯ ಕೊಡುವುದು ಅತ್ಯಗತ್ಯವಾಗುತ್ತದೆ.