Shirdi, Maharashtra News:
ಸಿಂಬಾ ಬಿಡಿಡಿಎಸ್ ತಂಡ ಸೇರಿದ್ದು, ತರಬೇತಿ ನಂತರ ಶೀಘ್ರದಲ್ಲೇ SHIRDI SAI TEMPLE SECURITY TEAMದಲ್ಲಿ ನಿಯೋಜನೆಯಾಗಲಿದೆ. ಅಷ್ಟಕ್ಕೂ ಯಾರೀ ಸಿಂಬಾ? ತಿಳಿಯಲು ಈ ಸುದ್ದಿ ಓದಿ ಇದು ಶಿರಡಿಯ ಸಾಯಿ ಬಾಬಾ ದೇಗುಲದ ಭದ್ರತಾ ಪಡೆಗೆ ಸಿಂಬಾ ಎಂಬ ಹೊಸ ಶ್ವಾನವೊಂದು ಸೇರ್ಪಡೆಗೊಂಡಿದೆ. ಇದುವರೆಗೂ ವರ್ಧನ್ ಎಂಬ ಶ್ವಾನ ದೇಗುಲದ ಭದ್ರತೆಯಲ್ಲಿ ತನ್ನದೇ ಸೇವೆಯನ್ನು ಸಲ್ಲಿಕೆ ಮಾಡುತ್ತಿತ್ತು. ಕಳೆದ 10 ವರ್ಷಗಳ ಕಾಲ ಸತತವಾಗಿ ಇಲ್ಲಿನ ಭದ್ರತೆಯಲ್ಲಿ ಕಾರ್ಯ ನಿರ್ವಹಿಸಿದ್ದು, ಈಗ ನಿವೃತ್ತಿಯಾಗಿದೆ. ಹೀಗಾಗಿ ವರ್ಧನ್ ಸ್ಥಾನಕ್ಕೆ ಇದೀಗ 3 ತಿಂಗಳ ಸಿಂಬಾ ಹೊಸ ಸೇರ್ಪಡೆಯಾಗಿದೆ.
From now on Simba will shoulder the responsibility of:
ದೇಶದ ಪ್ರಮುಖ ಧಾರ್ಮಿಕ ಕೇಂದ್ರದಲ್ಲಿ ಒಂದಾಗಿರುವ ಶಿರಡಿಗೆ, ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇದರ ಜೊತೆಗೆ ವಿವಿಐಪಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿಬಾಬಾ ದರ್ಶನಕ್ಕೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಸಾಯಿ ದೇಗುಲದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಿಶೇಷ ಬಿಡಿಡಿಎಸ್ ತಂಡ ವಹಿಸಿದೆ. SHIRDI SAI TEMPLE SECURITY TEAM ಸಾಯಿ ಬಾಬಾ ದೇಗುಲದ ಪೊಲೀಸ್ ಆಡಳಿತ ಮುನ್ನೆಚ್ಚರಿಕೆ ನೀಡಲು ಹಾಗೂ ಆಗಬಹುದಾದದ ಅನಾಹುತ ತಡೆಯಲು ವರ್ಧನ್ ಜಾಗದಲ್ಲಿ ಸಿಂಬಾ ನೇಮಕ ಮಾಡಿಕೊಂಡಿದೆ. ಸಿಂಬಾ ಬಾಂಬ್ ಪತ್ತೆ ಮತ್ತು ನಿಷ್ಕ್ರೀಯ ತಂಡದಲ್ಲಿ ಕಾರ್ಯ ನಿರ್ವಹಿಸಲಿದೆ. ಸದ್ಯ ಸಿಂಬಾ ಬಿಡಿಡಿಎಸ್ ತಂಡ ಸೇರಿದ್ದು, ತರಬೇತಿ ಪಡೆದ ಬಳಿಕ, ಶೀಘ್ರದಲ್ಲೇ ಸಾಯಿ ದೇಗುಲದ ಭದ್ರತಾ ತಂಡದಲ್ಲಿ ಸೇರ್ಪಡೆಯಾಗಿ ತನ್ನ ಕೆಲಸ ಆರಂಭಿಸಲಿದೆ.
erification by BDDS Team:
ದೇಗುಲದ ಕಕಡ್ ಆರತಿ, ಮಧ್ಯಾಹ್ನದ ಆರತಿ, ದುಪ ಆರತಿ ಹಾಗೇ ರಾತ್ರಿ ಶೆಜಾ ಆರತಿ ಸಮಯದಲ್ಲಿ ಬಿಡಿಡಿಎಸ್ ತಂಡ ದೇಗುಲದ ಮೂಲೆ ಮೂಲೆ ಸೇರಿದಂತೆ ಸಾಯಿ ಸಮಾಧಿ ಸುತ್ತ ಕಟ್ಟುನಿಟ್ಟಿನ ಪರಿಶೀಲನೆ ಮಾಡಲಾಗುತ್ತದೆ. ಈ ಮೊದಲು ಬಿಡಿಡಿಎಸ್ ತಂಡ ವರ್ಧನ್ ಎಂಬ ಶ್ವಾನದ ಸೇವೆಯನ್ನು ಪಡೆದುಕೊಳ್ಳುತ್ತಿತ್ತು. ಇದು ನಿವೃತ್ತಿಯಾದ ಬಳಿಕ ಸಿಂಬಾ ಈ ತಂಡವನ್ನು ಸೇರ್ಪಡೆಗೊಂಡಿದೆ. ಸಿಂಬಾ ಶೀಘ್ರದಲ್ಲೇ ಪುಣೆ ಸಿಐಡಿ ತರಬೇತಿ ನೀಡಲಿದೆ ಎಂದು ಸಾಯಿ ದೇಗುಲದ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಘೋಟೆಕರ್ ತಿಳಿಸಿದ್ದಾರೆ.
Farewell to Vardhan:
ಕಳೆದ 10 ವರ್ಷಗಳಿಂದ ವರ್ಧನ್ ಇಂದು ಸೇವೆಯಿಂದ ನಿವೃತ್ತಿಗೊಂಡಿದ್ದಾನೆ. ಅದಕ್ಕೆ ಬಿಡಿಡಿಎಸ್ ತಂಡ ಭಾವಪೂರ್ವಕ ಬೀಳ್ಕೊಡುಗೆ ನೀಡಿದೆ. ಅದಕ್ಕೆ ಶಾಲು ಮತ್ತು ಹೂವಿನ ಹಾರ ಹಾಕಿ ಅದರ ಸೇವೆಯನ್ನು ಭದ್ರತಾ ಪಡೆ ಸಿಬ್ಬಂದಿ ಸ್ಮರಿಸಿಕೊಂಡರು.
ಇದನ್ನು ಓದಿರಿ : KUD SYLLABUS ISSUE : ಧಾರವಾಡ ಕವಿವಿ ಪಠ್ಯ ವಿವಾದ; ತಜ್ಞರ ಸಮಿತಿ ರಚನೆ