spot_img
spot_img

ಮದ್ಯಪ್ರಿಯರಿಗೆ ಶಾಕಿಂಗ್​ ವಿಚಾರ: ರಾಜ್ಯ ಸರ್ಕಾರದಿಂದ ಬಿಯರ್​ ಬೆಲೆ ಮತ್ತೆ ಏರಿಕೆ..!?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ಮಧ್ಯಪ್ರಿಯರಿಗೆ ಭಾರಿ ಸಂಕಷ್ಟದ ಸುದ್ದಿ, ಕಚ್ಚಾ ವಸ್ತುಗಳ ಬೆಲೆಯೆರಿಕು ನೆಪ ನೀಡಿ ರಾಜ್ಯ ಸರ್ಕಾರ ದರ ಹೆಚ್ಚಿಗೆ ಮಾಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಗದ್ದುಗೆ ಏರಿದ ಮೇಲೆ ಬಿಯರ್ ದರ 50ರಿಂದ 60 ರೂ.ವರೆಗೆ ಏರಿಕೆಯಾಗಿದೆ.

ಕಳೆದ ಒಂದು ವರೆ ವರ್ಷದಲ್ಲಿ ಬಿಯರ್​ ಬೆಲೆಯನ್ನು 5ನೇ ಬಾರಿಗೆ ಹೆಚ್ಚಿಗೆ ಮಾಡಲಾಗಿದೆ. ಬಿಯರ್ ಬೆಲೆ 10 ರಿಂದ 20 ರೂಪಾಯಿ ಏರಿಕೆ ಮಾಡಲಾಗಿದೆ. ಕಂಪನಿಗಳು ಒಂದು ತಿಂಗಳ ಹಿಂದೆಯಷ್ಟೆ ಬಿಯರ್ ದರ ಹೆಚ್ಚಿಸಿದ್ದವು, ಇದೀಗ ಮತ್ತೆ ಬೆಲೆ ಏರಿಕೆ ಮಾಡುವ ಮೂಲಕ ಬಿಯರ್​ ಪ್ರಿಯರಿಗೆ ಶಾಕ್​ ನೀಡಿದೆ.

ಸರ್ಕಾರ ಈ ಹಿಂದೆ ಬಿಯರ್‌ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಆ ನಂತರ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಿಯರ್ ಕಂಪನಿಗಳು ಫೆಬ್ರವರಿ ತಿಂಗಳಲ್ಲಿ ಬಿಯರ್​ ಬೆಲೆ 10 ರೂ.ವರೆಗೆ ಏರಿಕೆ ಮಾಡಿತ್ತು. ಈಗ ಕಂಪನಿಗಳು ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ ನೀಡಿ ಬಿಯರ್ ದರ ಏರಿಕೆ ಮಾಡಿವೆ. ಈ ಮೂಲಕ 15 ತಿಂಗಳ ಅಂತರದಲ್ಲಿ ಬಿಯರ್‌ ಬೆಲೆ ಸುಮಾರು 50 ರಿಂದ 60 ರೂ. ವರೆಗೆ ಹೆಚ್ಚಳವಾದಂತಾಗಿದೆ.

ಕೆಲವು ಕಂಪನಿಗಳ ಬಿಯರ್​ ದರ ಕಳೆದ ಗುರುವಾರದಿಂದ ಏರಿಕೆಯಾಗಿದೆ. ಇನ್ನು ಕೆಲವು ಕಂಪನಿಗಳ ಪರಿಷ್ಕೃತ ದರ ಮಂಗಳವಾರ, ಬುಧವಾರದಿಂದ ಜಾರಿಯಾಗಲಿದೆ. ಎಲ್ಲ ಬ್ರ್ಯಾಂಡ್​ಗಳ ಬಿಯರ್ ಬೆಲೆ ಪ್ರತಿ ಬಾಟಲಿಗೆ 10 ರಿಂದ 20 ರೂಪಾಯಿವರೆಗೆ ಹೆಚ್ಚಳವಾಗಿದೆ.

ಇದರಿಂದ ಮದ್ಯಪ್ರೀಯರು ಸಂಕಷ್ಟಪಡುವಂತಾಗಿದೆ, ಹೆಂಡತಿಗೆ ಗೃಹಲಕ್ಷ್ಮೀ ಹಣ ನೀಡಿ ಅದೇ ಹಣ ಗಂಡನ ಜೇಬಿನಿಂದ ಸರ್ಕಾರ ಕಸೆದುಕೊಳ್ಳುತ್ತಿದೆ ಎಂದು ಸಾರ್ವಜನಿಕರು ಗುಸುಗುಸು ಮಾತನಾಡುತ್ತಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img

Related articles

ರೈತ ಬೆಳೆದ ರೈತ ಫುಲ್‌ ಖುಷ್‌! ಕಲಬುರಗಿಯಲ್ಲಿ ಹೆಚ್ಚಿನ ಖರೀದಿ ಕೇಂದ್ರ ತೆರೆಯಲು ರೈತರ ಆಗ್ರಹ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ 12 ಹತ್ತಿ ಖರೀದಿ ಕೇಂದ್ರ ತೆರೆಯಲಾಗಿದೆ. ನ. 8 ರಿಂದ ಹತ್ತಿ ಖರೀದಿ ಆರಂಭ ಮಾಡಲಾಗಿದ್ದು, ನವೆಂಬರ್ 19 ರ...

ಬೆಂಗಳೂರಿನ ಹೊಸ ಹಳ್ಳಿಗಳ ವ್ಯಾಪ್ತಿಯಲ್ಲಿ ಕಾವೇರಿ ನೀರು ಸಂಪರ್ಕ ಪಡೆಯಲು ನಿರಾಸಕ್ತಿ

ಬೆಂಗಳೂರು: ಸಾರ್ವಜನಿಕರಲ್ಲಿ ಕೆಲವು ಪ್ರಶ್ನೆಗಳು, ಗೊಂದಲಗಳಿವೆ. ಸದ್ಯ ನಮಗೆ ನೀರಿಗೆ ತೊಂದರೆ ಇಲ್ಲಎಂಬ ಭಾವನೆಗಳು ಇವೆ. ಹಾಗಾಗಿ, ಜಾಗೃತಿ ಮೂಡಿಸಿದಾಗ್ಯೂ ಸಂಪರ್ಕ ಪಡೆಯಲು ಹಿಂದೇಟು...

ಬಿಗ್ ಬಾಸ್ ಮನೆಯಲ್ಲಿ ಮತ್ತೆ ಕೆರಳಿದ ಚೈತ್ರಾ ಕುಂದಾಪುರ.. ಎಲ್ಲರ ಮುಂದೆಯೇ ಶಿಶಿರ್‌ ಅಣ್ಣನಿಗೆ ಸವಾಲು;

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 11 ದಿನಕೊಂದು ಹೊಸ ರೂಪ ಪಡೆದುಕೊಳ್ಳುತ್ತಿದೆ. ಬಿಗ್​ಬಾಸ್ ಮನೆಗೆ ಬಂದ ಇಬ್ಬರು ವೈಲ್ಡ್​ ಕಾರ್ಡ್​ ಸ್ಪರ್ಧಿಗಳು...

ಜಾತಿ ತಾರತಮ್ಯ ತೀವ್ರವಾಗಿದ್ದು, ನಿರ್ದೇಶಕರನ್ನು ವಜಾಗೊಳಿಸಿ: ವಿದ್ಯಾರ್ಥಿಗಳ ಆಗ್ರಹ

ಬೆಂಗಳೂರು:ಅಖಿಲ ಭಾರತ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಂಘ (AIOBCSA), ಡಾ ಬಿಆರ್ ಅಂಬೇಡ್ಕರ್ ಅಸೋಸಿಯೇಷನ್ ​​ಆಫ್ ಇಂಜಿನಿಯರ್ಸ್ (BANAE), ಮತ್ತು ಒಬಿಸಿ ಫೆಡರೇಶನ್...