spot_img
spot_img

ಕಿಂಗ್​ಫಿಶರ್ ಟವರ್​ನಲ್ಲಿ ಖರೀದಿ : ನಾರಾಯಣಮೂರ್ತಿ

spot_img
spot_img

Share post:

ಇನ್ಫೋಸಿಸ್ ಸಹ ಸಂಸ್ಥಾಪಕ ಇನ್ಫೋಸಿಸ್ ನಾರಾಯಣಮೂರ್ತಿಯವರು ಹೊಸದಾಗಿ ಒಂದು ಬಂಗಲೆಯನ್ನು ಖರೀದಿ ಮಾಡಿದ್ದಾರೆ ಅದರ ಮೊತ್ತ ಬರೋಬ್ಬರಿ 50 ಕೋಟಿ ರೂಪಾಯಿ. ಕಿಂಗ್ ಫಿಶರ್ ಟವರ್​ನಲ್ಲಿ 4 ಬೆಡ್​ರೂಮ್​ಗಳ ಬಂಗಲೆಯನ್ನು ಖರೀದಿ ಮಾಡಿದ್ದಾರೆ ಇನ್ಫೋಸಿಸ್ ನಾರಾಯಣ ಮೂರ್ತಿ.

ಕಿಂಗ್​ ಫಿಶರ್ ಟವರ್​ನಲ್ಲಿ 16ನೇ ಅಂತಸ್ತಿನಲ್ಲಿ ಮನೆ ಖರೀದಿಸಿದ್ದಾರೆ ನಾರಾಯಣ ಮೂರ್ತಿ. ಈ ಒಂದು ಬಂಗಲೆ ಸುಮಾರು 8,400 ಸ್ಕ್ವೇರ್​ಫೀಟ್​ ಅಳತೆಯಲ್ಲಿ ಹರಡಿಕೊಂಡಿದೆ. 4 ಬೆಡ್​ರೂಮ್​ಗಳು ಹಾಗೂ 5 ಪಾರ್ಕಿಂಗ್ ಮೀಸಲುಗಳು ಸೌಕರ್ಯವನ್ನು ಹೊಂದಿದೆ.

ಈ ಒಂದು ಬಂಗಲೆ ಖರೀದಿ ವೇಳೆ ಪ್ರತಿ ಸ್ಕ್ವೇರ್ ಫೀಟ್​ಗೆ 59,500 ರೂಪಾಯಿ ದರ ನಿಗದಿಯಾಗಿತ್ತಂತೆ. ಈ ಒಂದು ಕಿಂಗ್​ ಫಿಶರ್​ ಟವರ್​ನ್ನು ಮದ್ಯದ ದೊರೆ ವಿಜಯ ಮಲ್ಯ ಅವರು ನಿರ್ಮಿಸಿದ್ದು 34 ಮಹಡಿಗಳ ಈ ಅಪಾರ್ಟ್​ಮೆಂಟ್​ನಲ್ಲಿ ಒಟ್ಟು 81 ಬಂಗಲೆಗಳು ಇವೆ ಎನ್ನಲಾಗಿದೆ.

ಇದೇ ಮೊದಲ ಬಾರಿಗೆ ನಾರಾಯಣ ಮೂರ್ತಿ ಫ್ಯಾಮಿಲಿ ಕಿಂಗ್​ಫಿಶರ್ ಟವರ್​ಗೆ ಹೋಗುತ್ತಿಲ್ಲ. ನಾಲ್ಕು ವರ್ಷಗಳ ಹಿಂದೆ ಸುಧಾ ಮೂರ್ತಿಯವರು 23ನೇ ಮಹಡಿಯಲ್ಲಿ 29 ಕೋಟಿ ರೂಪಾಯಿ ನೀಡಿ ಒಂದು ಫ್ಲ್ಯಾಟ್​ನ್ನು ಖರೀದಿಸಿದ್ದರು.

ಸಚಿವ ಕೆ.ಜೆ.ಜಾರ್ಜ್​ ಅವರ ಪುತ್ರ ರಾನಾ ಜಾರ್ಜ್​ ಕೂಡ 35 ಕೋಟಿ ರೂಪಾಯಿ ಕೊಟ್ಟು ಇದೇ ಕಿಂಗ್​ಫಿಶರ್ ಟವರ್​ನಲ್ಲಿ ಫ್ಯಾಟ್ ಖರೀದಿ ಮಾಡಿದ್ದರು. ಈ ಕಿಂಗ್​ ಫಿಶರ್ ಟವರ್ 2010ರಲ್ಲಿ ಲಾಂಚ್ ಆಗಿತ್ತು. ಪ್ರತಿ ಸ್ಕ್ವೇರ್ ಫೀಟ್​ಗೆ 22 ಸಾವಿರ ರೂಪಾಯಿಗೆ ಈ ಅಪಾರ್ಟ್​ಮೆಂಟ್​ನ್ನು ಖರೀದಿಸಲಾಗಿತ್ತು. ಸದ್ಯ ಅದರ ದರ ಡಬಲ್ ಆಗಿದ್ದು. ಐಷಾರಾಮಿ ಬಂಗಲೆ ಕೊಂಡುಕೊಳ್ಳಬೇಕು ಎಂದು ಕನಸು ಕಂಡವರು ಕಿಂಗ್ ಫಿಶರ್ ಟವರ್​ನತ್ತ ದೃಷ್ಟಿ ಬೀರುತ್ತಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...