ಹೊಸಪೇಟೆ (ವಿಜಯನಗರ) : ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್‌ಗೇಟ್ ಅಳವಡಿಸಲು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯ ಸರಕಾರಗಳ ಅನುಮತಿ ಸಿಕ್ಕರೆ ಮುಂದಿನ ಬೇಸಿಗೆಗೆ ಅಳವಡಿಸುವ ಸಾಧ್ಯತೆ ಇದೆ.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಮತ್ತು ಕೇಂದ್ರ ಜಲ ಸಂಪ್ಮನೂಲ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಸದಸ್ಯರಾಗಿದ್ದಾರೆ.
ತಾಂತ್ರಿಕ ತನಿಖಾ ಸಮಿತಿಯ ವರದಿ ಜತೆಗೆ ಹೊಸ ಕ್ರಸ್ಟ್‌ಗೇಟ್ ಅಳವಡಿಸುವ ಕುರಿತು ಕೆಲವು ಅಂಶಗಳನ್ನು ಸೇರಿಸಿ ಅನುಮೋದನೆಗಾಗಿ ತುಂಗಭದ್ರಾ ಮಂಡಳಿ ಕಾಯುತ್ತಿದೆ.
ಕಳೆದ ಎರಡು ತಿಂಗಳ ಹಿಂದೆ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕಳಚಿ ಬಿದ್ದ ಪರಿಣಾಮ ಹಳೆಯ ಕ್ರಸ್ಟ್‌ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್ ಅಳವಡಿಸಲು ಯಾವುದೇ ಅಡ್ಡಿ ಇಲ್ಲದೆ ಶೀಘ್ರ ಅನುಮತಿ ಸಿಗಲಿದೆ.
ಗೇಟ್‌ಗಳನ್ನು ಬದಲಿಸುವ ಪ್ರಕ್ರಿಯೆ ಒಂದು ತಿಂಗಳಲ್ಲಿ ಪೂರ್ಣಗೊಳಿಸಬಹುದಾಗಿದೆ.
ಈಗಿರುವ 45 ಟನ್ ತೂಕದ 20 ಅಡಿ ಎತ್ತರದ ಹಳೆಯ ಗೇಟ್‌ಗಳನ್ನು ಎರಡು ತುಂಡುಗಳ ರೂಪದಲ್ಲಿ ವೆಲ್ಡಿಂಗ್ ಮಾಡಲಾಗಿದೆ.
ಇದೇ ರೀತಿ ಎರಡು ತುಂಡುಗಳನ್ನು ಸೇರಿಸಿ ಗೇಟ್ ನಿರ್ಮಿಸಿ ಅಳವಡಿಸುವ ಕುರಿತು ಗಂಭೀರ ಚಿಂತನೆ ನಡೆದಿದೆ.
ಏಪ್ರಿಲ್ ವೇಳೆಗೆ ಜಲಾಶಯದ ನೀರಿನ ಮಟ್ಟ ಅತಿ ಕಡಿಮೆ ಮಟ್ಟಕ್ಕೆ ಇಳಿದಿರುತ್ತದೆ. ಹಾಗಾಗಿ ಜುಲೈವರೆಗೂ ಕಾಮಗಾರಿ ನಡೆಸಲು ಕಾಲಾವಕಾಶ ದೊರಕುತ್ತದೆ.
ಮುಂಗಾರಿನಲ್ಲಿ ಗಾಳಿಯಿಂದ ಸೃಷ್ಟಿಯಾಗುವ ಅಲೆಗಳ ಹೊಡೆತಕ್ಕೂ ಈ ಗೇಟ್‌ಗಳ ಸಾಮರ್ಥ್ಯ ಕುಂದಿದೆ ಎಂಬುದು ತಜ್ಞರು ತಿಳಿಸಿದ್ದಾರೆ.
ಸುರಕ್ಷತೆ ದೃಷ್ಟಿಯಿಂದ 1632 ಅಡಿಗಿಂತ ಕಡಿಮೆ ಮಟ್ಟ ಕಾಪಾಡಲಾಗುತ್ತಿದೆ. ಕ್ರಸ್ಟ್‌ಗೇಟ್ ಬದಲಿಸುವ ವೇಳೆ ಸ್ಟಾಪ್‌ಲಾಗ್ ಅಳವಡಿಕೆ ಅವಶ್ಯಕತೆ ಇಲ್ಲ ಎನ್ನಲಾಗಿದೆ.
ಒಂದು ಕ್ರಸ್ಟ್‌ಗೇಟ್ ನಿರ್ಮಾಣ ಮತ್ತು ಅಳವಡಿಕೆಗೆ 3 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
ರಾಜ್ಯ ಸರಕಾರ ಮನಸ್ಸು ಮಾಡಿದರೆ ಮಾತ್ರ ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಲಕ್ಷಾಂತರ ರೈತರು, ನೂರಾರು ಉದ್ಯಮಿಗಳ ಬಾಳಲ್ಲಿಹೊಸ ಭರವಸೆ ಮೂಡಲಿದೆ.
ತುಂಗಭದ್ರಾ ಜಲಾಶಯದ ಹಳೆಯ ಕ್ರಸ್ಟ್‌ಗೇಟ್‌ಗಳನ್ನು ಬದಲಿಸಿ, ಹೊಸ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಲು ಅನುಮೋದನೆ ಸಿಕ್ಕ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಓ.ಆರ್.ಕೆ. ರೆಡ್ಡಿ ಅವರು ತಿಳಿಸಿದ್ದಾರೆ.