spot_img
spot_img

ಟೆಕ್ ಸಮ್ಮಿಟ್ 2024 : ‘ಕರ್ನಾಟಕದ ಐಟಿ ರತ್ನ’ ಪ್ರಶಸ್ತಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ರಾಜ್ಯದ ವಿವಿಧ ಐಟಿ ಕಂಪನಿಗಳಿಗೆ ಭಾರತೀಯ ಸಾಫ್ಟ್​​ವೇರ್​​ ಪಾರ್ಕ್​ಗಳ ಕೂಟ (ಎಸ್.ಟಿ.ಪಿ.ಐ) ನೀಡುವ ಪುರಸ್ಕಾರ ನೀಡಲಾಯಿತು.

ಅತ್ಯುತ್ತಮ ಸಾಧನೆ ಮಾಡಿರುವ ಇನ್ಫೋಸಿಸ್​​ ಕಂಪನಿಗೆ ‘ಕರ್ನಾಟಕದ ಐಟಿ ರತ್ನ’, ಅತ್ಯುತ್ತಮ ಐಟಿ ರಫ್ತು ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​, ರಾಬರ್ಟ್​ ಬಾಷ್, ಇಂಟೆಲ್​ ಮುಂತಾದ ಕಂಪನಿಗಳಿಗೆ ಎಸ್​.ಟಿ.ಪಿ.ಐ-ಐಟಿ ಪ್ರಶಸ್ತಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರದಾನ ಮಾಡಿದರು.

ರಫ್ತು ವಹಿವಾಟಿನಲ್ಲಿ ಗಮನಾರ್ಹ ಸಾಧನೆ ಮಾಡಿರುವ ರಾಜ್ಯದ ವಿವಿಧ ಐಟಿ(ಮಾಹಿತಿ ತಂತ್ರಜ್ಞಾನ) ಕಂಪನಿಗಳಿಗೆ ಭಾರತೀಯ ಸಾಫ್ಟ್​​ವೇರ್​​ ಪಾರ್ಕ್​ಗಳ ಕೂಟ (ಎಸ್.ಟಿ.ಪಿ.ಐ) ನೀಡುವ ಪುರಸ್ಕಾರವನ್ನು ಬುಧವಾರ ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಪ್ರದಾನ ಮಾಡಲಾಯಿತು.

ಅಮೆಜಾನ್ ಡೆವಲಪ್ಮೆಂಟ್ ಸೆಂಟರ್, ಜೆ.ಪಿ.ಮಾರ್ಗನ್ ಸರ್ವೀಸಸ್, ಗೋಲ್ಡನ್ ಸ್ಯಾಕ್ಸ್, ಸ್ಯಾಮ್ಸಂಗ್ ಆರ್ ಆ್ಯಡ್ ಡಿ, ಕ್ವಾಲ್ಕಾಂ ಇಂಡಿಯಾ, ಸ್ನೀಡರ್​ ಎಲೆಕ್ಟ್ರಿಕ್​, ಅಲ್ಟ್ರಾನ್​ ಟೆಕ್​​ ಇಂಡಿಯಾ, ಸ್ಯಾಪ್​ ಲ್ಯಾಬ್ಸ್​​, ವಿಎಂವೇರ್​ ಸಾಫ್ಟ್ವೇರ್ಸ್​​,ಆಕ್ಸೆಂಚರ್ ಸೊಲ್ಯೂಷನ್ಸ್ ಪರವಾಗಿ ಸಂಸ್ಥೆಗಳ ಉನ್ನತಾಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು.

ಬಳಿಕ ಮಾತನಾಡಿದ ಬೃಹತ್​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್​, “ಉದ್ಯಮಿಗಳು ಕೇವಲ ವಾಣಿಜ್ಯ ದೃಷ್ಟಿಯ ಲಾಭವನ್ನು ಮಾತ್ರ ನೋಡುತ್ತಿರುವುದಿಲ್ಲ.

ತಮ್ಮ ಪರಿಶ್ರಮ ಮತ್ತು ಬದ್ಧತೆಗಳ ಮೂಲಕ ತಂತ್ರಜ್ಞಾನದ ಭವಿಷ್ಯವನ್ನು ಕೂಡ ನಿರ್ಧರಿಸುತ್ತಾರೆ. ಇದರ ಲಾಭ ಕೊನೆಗೆ ಸಮಾಜಕ್ಕೆ ಸಿಗುತ್ತದೆ.

ರಾಜ್ಯದಲ್ಲಿ ನೆಲೆಯೂರಿರುವ ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳು ಈ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿವೆ” ಎಂದು ಅಭಿಪ್ರಾಯಪಟ್ಟರು.

“ಎಸ್.ಟಿ.ಪಿ.ಐ. ಏಳು ವರ್ಷಗಳ ಹಿಂದೆಯೇ ರಾಜ್ಯ ಸರಕಾರದ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಸ್ಮಾರ್ಟ್​(ಸೆಮಿಕಂಡಕ್ಟರ್ ಮೆಷರ್ಮೆಂಟ್ ಅನಾಲಿಸಿಸ್ ಆ್ಯಡ್ ರಿಲಾಯಬಿಲಿಟಿ ಟೆಸ್ಟ್) ತೆರೆದಿದೆ.

ಇದರಿಂದ ದೇಶದ ಸೆಮಿಕಂಡಕ್ಟರ್ ಮತ್ತು ಇಎಸ್​ಡಿ‌ಎಂ ವಲಯಗಳ ಕಾರ್ಯ ಪರಿಸರ ಸುಧಾರಿಸಿದೆ. ಜೊತೆಗೆ ನವೋದ್ಯಮಗಳು ಮತ್ತು ಸೆಮಿಕಂಡಕ್ಟರ್ ಕಂಪನಿಗಳು ವಿನ್ಯಾಸವನ್ನು ರೂಪಿಸಲು ತೆಗೆದುಕೊಳ್ಳುತ್ತಿದ್ದ ದೀರ್ಘ ಸಮಯಕ್ಕೆ ತೆರೆ ಬಿದ್ದಿದೆ” ಎಂದು ವಿವರಿಸಿದರು.

ಎಸ್.ಟಿ.ಪಿ.ಐ. ರಾಜ್ಯ ರಾಜಧಾನಿಯಲ್ಲಿ ಸಿಒಇ- ಐಒಟಿ ಓಪನ್-ಲ್ಯಾಬ್ ಕೂಡ ಆರಂಭಿಸಿದೆ. ಇದರಡಿಯಲ್ಲಿ 130 ನವೋದ್ಯಮಗಳು ಆಯ್ಕೆಯಾಗಿದ್ದು, ಈಗಾಗಲೇ 67 ಉದ್ಯಮಗಳ ಕಾರ್ಯ ಚಟುವಟಿಕೆ ಆರಂಭಿಸಿವೆ. ಇದು ದೇಶದ ಐಒಟಿ ವಲಯವನ್ನು ಹೊಸ ದಿಕ್ಕಿಗೆ ಕೊಂಡೊಯ್ಯಲಿದೆ.

ಐಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಎಸ್​ಟಿಪಿಐ ಅಧ್ಯಕ್ಷ ಸಂಜಯ್ ತ್ಯಾಗಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಹೊನ್ನಾವರ ಪಾವಿನಕುರ್ವೆಯಲ್ಲಿ ಸರ್ವ ಋತು ಬಂದರು

ಉತ್ತರ ಕನ್ನಡ: ಕರ್ನಾಟಕ ಜಲಸಾರಿಗೆ ಮಂಡಳಿ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪಾವಿನಕುರ್ವೆಯಲ್ಲಿ ಖಾಸಗಿ ಸಹಭಾಗಿತ್ವದಡಿಯಲ್ಲಿ 14 MTPA ಸಾಮರ್ಥ್ಯದ ಸರ್ವಋತು...

ಸ್ಟೀಲ್ ನಟ್​ಗಳಲ್ಲಿ ಅರಳಿದ ಆದಿಯೋಗಿಯ ವಿಗ್ರಹ : ಉಡುಪಿ ಕಲಾವಿದನ ಕೈಚಳಕ

ಉಡುಪಿ: ಉಡುಪಿಯ ಮಟ್ಟು ಗ್ರಾಮದ ಡಿಪ್ಲೋಮಾ ಪದವೀಧರರೊಬ್ಬರು ಮೈಲ್ಡ್ ಸ್ಟೀಲ್ ನಟ್ಸ್​ಗಳಿಂದ 58 ಕೆ.ಜಿ. ತೂಕದ ಆದಿಯೋಗಿಯ ವಿಗ್ರಹ ತಯಾರಿಸಿ ಇಂಡಿಯನ್ ಬುಕ್ ಆಫ್...

ಭರತನಾಟ್ಯದ 52 ಮುದ್ರೆ 3 ವರ್ಷದ ಮಗು ಪ್ರದರ್ಶನ : ಗಿನ್ನಿಸ್ ದಾಖಲೆ ನಿರ್ಮಾಣ

ಕೇರಳ: ಭರತನಾಟ್ಯದ ಎಲ್ಲ 52 ಮುದ್ರೆಗಳನ್ನು ಪ್ರದರ್ಶಿಸುವ ಮೂಲಕ ಕೇರಳದ 3 ವರ್ಷದ ಪುಟ್ಟ ಮಗುವೊಂದು ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ದಾಖಲೆ ನಿರ್ಮಿಸಿದೆ. "ನನ್ನ...

ಅಂಚೆ ಚೀಟಿ ಸಂಗ್ರಹ : ಗಿನ್ನೆಸ್​ ಬುಕ್​ ಆಫ್​ ರೆಕಾರ್ಡ್ ನಿಮಿಸಿದ ನಿವೃತ್ತ ನೌಕರ

ಉಡುಪಿ: ಕೆಲವೊಮ್ಮೆ ವ್ಯಕ್ತಿಗಳ ಹವ್ಯಾಸವೇ ಅವರನ್ನು ದೊಡ್ಡ ಸಾಧನೆಯತ್ತ ಕೊಂಡೊಯ್ಯುತ್ತದೆ. ಅದರಂತೆ ಕಾಲೇಜೊಂದರ ನಿವೃತ್ತ ಕಚೇರಿ ಸಹಾಯಕ ಡೇನಿಯಲ್​ ಮೊಂತೇರೊ ಅವರು ಅಂಚೆ ಚೀಟಿ...