ಮೈಸೂರು: ಮೈಸೂರು ಅರಮನೆಯ ಪ್ರಸಿದ್ಧ ಚಿನ್ನದ ಅಂಬಾರಿಯ ವೀಕ್ಷಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. 750 ಕೆ.ಜಿ ತೂಕದ ಈ ಅಂಬಾರಿಯ ಕೆಳಭಾಗ ಮತ್ತು ಹಿಂಭಾಗದ ಮರ ಹಾಳಾಗಿದ್ದು, ಇದರ ಕೆಲಸ ಸೇರಿದಂತೆ ಹಲವು ರಿಪೇರಿ ಕಾರ್ಯಗಳು ನಡೆಯುತ್ತಿರುವುದರಿಂದ ಡಿ.6 ರಿಂದ ವೀಕ್ಷಣೆಗೆ ಬ್ರೇಕ್ ಹಾಕಲಾಗಿದೆ ಎಂದು ಅರಮನೆ ಮೂಲಗಳಿಂದ ತಿಳಿದುಬಂದಿದೆ.
ವಿವಿಧ ರಿಪೇರಿ ಕಾರ್ಯ ನಡೆಯುತ್ತಿರುವ ಹಿನ್ನೆಲೆ ಮೈಸೂರು ಅರಮನೆಯ ಚಿನ್ನದ ಅಂಬಾರಿ ವೀಕ್ಷಣೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ.
ಅಂಬಾರಿ ವೀಕ್ಷಣೆ ನಿಲ್ಲಿಸಿದಿದ್ದು, ಪ್ರವಾಸಿಗರಿಗೆ ನಿರಾಸೆಯನ್ನುಂಟು ಮಾಡಿದೆ. “ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಹಾಗೂ ಶಾಲಾ ಮಕ್ಕಳು ಪ್ರವಾಸಕ್ಕೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಚಿನ್ನದ ಅಂಬಾರಿ ವೀಕ್ಷಣೆಗೆ ಅಲಭ್ಯವಿರುವುದು ಪ್ರವಾಸಿಗರಲ್ಲಿ ನಿರಾಸೆ ಮೂಡಿಸಿದೆ” ಎಂದು ಅರಮನೆಯ ಗೈಡ್ವೊಬ್ಬರು ತಿಳಿಸಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now