spot_img
spot_img

ನಿನ್ನ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮೆರವಣಿಗೆ ಮಾಡಿಸ್ತೀನಿ ಎಂದ ಕಾಂಗ್ರೇಸ್‌ ಶಾಸಕ..! ಅದೇನು ಬಾಯೋ ಕೊಳಚೆಯೋ ಎನ್ನುತ್ತಿರುವ ಪ್ರಜೆಗಳು..!

spot_img
spot_img

Share post:

ಬೆಳಗಾವಿ: ಅಭಿವೃದ್ಧಿ ಕೆಲಸಗಳು ಮಾಡುವುದು ಮೊದಲೇ ಗೊತ್ತಿಲ್ಲ, ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ (Controversy Statement) ನಮ್ಮ ರಾಜ್ಯದ ಹಲವು ಶಾಸಕರು (MLA), ಸಚಿವರು (Ministers) ಸುದ್ದಿಯಾಗ್ತಾರೆ.

ಈ ಸಾಲಿಗೆ ಬೆಳಗಾವಿ (Belagavi) ಜಿಲ್ಲೆಯ ಕಾಗವಾಡ (Kagawada) ಕ್ಷೇತ್ರ ಕಾಂಗ್ರೆಸ್ ಶಾಸಕ (Congress MLA) ರಾಜು ಕಾಗೆ (Raju Kage) ಸೇರುತ್ತಾರೆ. ಇದೀಗ ಇದೇ ರಾಜು ಕಾಗೆ ವಿವಾದಾತ್ಮಕ ಹೇಳಿಕೆ ನೀಡಿ, ಮತ್ತೆ ಸುದ್ದಿಯಾಗಿದ್ದಾರೆ. ಅದು ಅಂತಿಂತಾ ಹೇಳಿಕೆ ಅಲ್ಲಾ, ಒಬ್ಬರ ಮಾನವನ್ನ ಹಾನಿ ಮಾಡುವಂತಹ ಹೇಳಿಕೆ, ನಮ್ಮ ನಾಯಕರೇ ಈ ರೀತಿಯ ಹೇಳಿಕೆಗಳನ್ನ ಕೊಟ್ಟರೆ ಸಾರ್ವಜನಿಕರು ಹೇಗೆಲ್ಲಾ ಮಾಡನಾಡಬಹುದು ಎಂಬ ಕನಿಷ್ಠ ಬುದ್ದಿ ಶಾಸಕ ರಾಜು ಕಾಗೆಗೆ ಇಲ್ಲ ಅನ್ಸುತ್ತೆ ಅಂತ ಅನ್ನುತ್ತಿದ್ದಾರೆ ಪ್ರಭುದ್ಧ ಪ್ರಜೆಗಳು.

ಇದನ್ನೂ ಓದಿ : KPSC ಮರುಪರಿಕ್ಷೆಯಿಂದ ಸರ್ಕಾರಕ್ಕೆ ನಷ್ಟ ಆಗುವುದು ಇಷ್ಟು ಕೋಟಿ..!? ಅಭ್ಯರ್ಥಿಗಳಿಗೆ ಟೆನ್ಶನ್‌ ಮತ್ತೆ ಶುರು..!?

“ನನ್ನ ತಂಟೆಗೆ ಬಂದ್ರೆ ನಿನ್ನ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮೆರವಣಿಗೆ ಮಾಡ್ತೀನಿ” ಅಂತ ರಾಜು ಕಾಗೆ ನಾಲಿಗೆ ಹರಿ ಬಿಟ್ಟಿದ್ದಾರೆ! ಮಾಜಿ ಶಾಸಕ ಶ್ರೀಮಂತ ಪಾಟೀಲ್ (Shrimant Patil) ವಿರುದ್ಧ ಹರಿಹಾಯುವ ಭರದಲ್ಲಿ ರಾಜು ಕಾಗೆ ಲಘು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಶಾಸಕರ ಉಡಾಫೆ ಮಾತಿಗೆ ಇದೀಗ ಸಾರ್ವಜನಿಕ ವಲಯದಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅವರವರ ರಾಜಕೀಯ ಲಾಭಕ್ಕಾಗಿ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮೆರವಣಿಗೆ ಮಾಡ್ತೀನಿ ಅಂತ ಹೇಳಿಕೆಗಳ ಬರುವುದರಿಂದಲೇ ಸಾರ್ವಜನಿಕ ವಲಯದಲ್ಲಿ ಈ ರೀತಿಯ ಘಟನೆಗಳು ಮರಕಳಿಸುತ್ತಲೇ ಇವೆ.

ಇದನ್ನೂ ಓದಿ : ಆಸ್ತಿ ವಿವರ ಸಲ್ಲಿಸದ 13 ಲಕ್ಷ ಸರ್ಕಾರಿ ನೌಕರರ ವೇತನ ತಡೆ ಹಿಡಿದ ಉತ್ತರ ಪ್ರದೇಶ ಸರ್ಕಾರ

ಬೆಳಗಾವಿಯ ಸುತಗಟ್ಟಿಯ ಪ್ರಕರಣದಲ್ಲಿ ಲವ್‌ ಮಾಡಿದ ಹುಡುಗ ಹುಡುಗಿ ಓಡಿ ಹೋದಾಗ, ಹುಡುಗನ ತಾಯಿಯ ಬಟ್ಟೆ ಹರಿದು ವಿವಸ್ತ್ರ ಮಾಡಿದ್ದು ಎಲ್ಲರಿಗೂ ನೆನಪಿದೆ, ಇಂತಹ ಐಡಿಯಾ ಬರೋದೇ ನಮ್ಮನ್ನಾಳುವ ರಾಜಕಾರಣಿಗಳು ಇಂತಹ ಹೇಳಿಕೆ ಕೊಡುವುದರಿಂದ, ನ್ಯಾಯಾಲಯಗಳು ಈ ರೀತಿಯ ಹೇಳಿಕೆಗಳನ್ನ ಗಂಭೀರವಾಗಿ ಪರಗಣಿಸಿ ರಾಜಕಾರಣಿಗಳ ಬಾಯಿಗೆ ಬೀಗ ಹಾಕುವುದಕ್ಕೆ ಮುಂದಾಗಬೇಕಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಇದನ್ನೂ ಓದಿ : ಗೌರಿ ಗಣೇಶ ಹಬ್ಬದ ನಿಮಿತ್ತ ಪ್ರಯಾಣಿಕ ಅನುಕೂಲಕ್ಕೆ KSRTC ಶುಭ ಸುದ್ದಿ : ಹಬ್ಬದ ಪ್ರಯುಕ್ತ ಹೆಚ್ಚುವರಿಯಾಗಿ ವಿಶೇಷ ಬಸ್ಸಿನ ವ್ಯವಸ್ತೆ..!

ಬೆಳಗಾವಿಯಲ್ಲಿ ಮಾಜಿ ಶಾಸಕ ಮತ್ತು ಹಾಲಿ ಶಾಸಕರ ನಡುವೆ ಟಾಕ್ ವಾರ್ ಜೋರಾಗಿದೆ. ಮಾಜಿ ಶಾಸಕ, ಬಿಜೆಪಿಯ ಶ್ರೀಮಂತ ಪಾಟೀಲ್ ಹಾಗೂ ಹಾಲಿ ಶಾಸಕ, ಕಾಂಗ್ರೆಸ್ಸಿನ ರಾಜು ಕಾಗೆ ವಾರ್ ಜೋರಾಗಿದೆ. ವಾಗ್ದಾಳಿ ನಡೆಸುವ ಭರದಲ್ಲಿ ಶಾಸಕ ರಾಜು ಕಾಗೆ ನಾಲಿಗೆ ಹರಿಬಿಟ್ಟಿದ್ದಾರೆ. ಈ ರೀತಿಯ ಹೇಳಿಕೆಗಳು ಒಬ್ಬ ಶಾಸಕ ಇನ್ನೊಬ್ಬ ಮಾಜಿ ಶಾಸಕನಿಗೆ ಹೇಳುತ್ತಿರುವಾಗ, ಕೆಲ ಹಿಂದುಳಿದ ಹಳ್ಳಿಗಳಲ್ಲಿ ಈ ರೀತಿಯ ಘಟನೆಯಾದರೆ ಯಾರು ಹೊಣೆ..? ರಾಜಕಾರಣಿಗಳು ತಮ್ಮ ಸಾಮಾಜಿಕ ಬದ್ಧತೆ ಮರೆತು ಈ ರೀತಿಯ ಹೇಳಿಕೆಗಳನ್ನ ಕೊಡುವುದರಿಂದ ಸಮಾಜಕ್ಕೆ ಯಾವ ರೀತಿಯ ಸಂದೇಶ ಹೊಗುತ್ತಿದೆ ಎಂಬುದು ಯೋಚನೆ ಮಾಡಬೇಕಾದ ಅಗತ್ಯವಿದೆ. ಅವರ ಗೌರವಕ್ಕೆ ಅವರೇ ಹಾನಿ ಉಂಟು ಮಾಡಿಕೊಳ್ಳುತ್ತಿದ್ದಾರೆ.
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...