spot_img
spot_img

ಜನರ ಬದುಕು ಕಿತ್ತುಕೊಂಡ ಕರೆಂಟ್‌

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಳಗಾವಿ: ಜಾಗೃತಿ ಕೊರತೆ ಹಾಗೂ ನಿರ್ಲಕ್ಷದಿಂದ ವಿದ್ಯುತ್‌ ಅವಘಡಕ್ಕೆ ಬಲಿಯಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಜನರ ಬದುಕಿಗೆ ಬೆಳಕಾಗಬೇಕಿರುವ ವಿದ್ಯುತ್‌ ಹಲವರ ಪಾಲಿನ ಮೃತ್ಯುಕೂಪವಾಗಿದೆ. ಹೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ 631 ಜನ ವಿದ್ಯುತ್‌ ತಗುಲಿ ಮೃತಪಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಗೆ ವಿದ್ಯುತ್‌ ಸರಬರಾಜು ಮಾಡುವ ಮೂಲಕ ರಾಜ್ಯದಲ್ಲೇ ಅತೀ ಹೆಚ್ಚು ವ್ಯಾಪ್ತಿ ಹೊಂದಿದ ವಿದ್ಯುತ್‌ ನಿಗಮವಾಗಿದೆ. ಈ ಏಳು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ವಿದ್ಯುತ್‌ ಅವಘಡದಿಂದ 631 ಜನರು ಮೃತಪಟ್ಟಿದ್ದಾರೆ.

ಅದೇ ರೀತಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ 732 ಜಾನುವಾರುಗಳು ಕರೆಂಟ್‌ ಶಾಕ್‌ನಿಂದ ಮೃತಪಟ್ಟಿವೆ. ಹಲವಷ್ಟು ವಿದ್ಯುತ್‌ ಅವಘಡ ಪ್ರಕರಣಗಳಿಗೆ ಹೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿ ನಿರ್ಲಕ್ಷ ಕಾರಣ ಎಂಬುದು ಸಾರ್ವಜನಿಕರ ಆರೋಪ.

ಬಿದ್ದಿರುವ ವಿದ್ಯುತ್‌ ತಂತಿ ತುಳಿಯುವುದು, ವಿದ್ಯುತ್‌ ವಾಹಕ ಮಾರ್ಗಗಳ ಬಳಿ ಕಬ್ಬಿಣದ ವಸ್ತು ಸ್ಪರ್ಶ, ವಿದ್ಯುತ್‌ ಹರಿಯುತ್ತಿರುವ ತಂತಿ ಸ್ಪರ್ಶಿಸುವುದು, ತಿಳಿವಳಿಕೆಯಿಲ್ಲದೆ ವಿದ್ಯುತ್‌ ಉಪಕರಣ ಬಳಸುವುದು, ಅನಧಿಕೃತವಾಗಿ ವಿದ್ಯುತ್‌ ಕೆಲಸಗಳಲ್ಲಿ ತೊಡಗುವುದರಿಂದ ಬಹುತೇಕ ಅವಘಡಗಳು ಸಂಭವಿಸುತ್ತವೆ.

ಭಾರಿ ಮಳೆ- ಗಾಳಿಯಿಂದ ಕಂಬಗಳು ಬಾಗಿ, ಅಡ್ಡಪಟ್ಟಿ ಸಡಿಲಗೊಂಡು ಅಥವಾ ತಂತಿ ಹರಿದು ಬಿದ್ದು ಹೆಚ್ಚಿನ ದುರಂತಗಳು ನಡೆದಿವೆ. ಅಲ್ಲದೇ ವಿದ್ಯುತ್‌ ಮಾರ್ಗಗಳಿಂದ ಸೂಕ್ತ ಅಂತರ ಕಾಪಾಡಿಕೊಳ್ಳದೇ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವಾಗಲೂ ಅವಘಡಗಳು ಸಂಭವಿಸಿ ಸಾವು- ನೋವು ಉಂಟಾಗಿವೆ ಎನ್ನುತ್ತಾರೆ ಹೆಸ್ಕಾಂ ಅಧಿಕಾರಿಗಳು.

ಹೆಸ್ಕಾಂನಿಂದ ಸಾರ್ವಜನಿಕರಲ್ಲಿ ವಿವಿಧ ಜಾಗೃತಿ ಅಭಿಯಾನ ಹಮ್ಮಿಕೊಂಡರೂ ಅವಘಡಗಳ ಸಂಖ್ಯೆ ತಗ್ಗುತ್ತಿಲ್ಲ. ಹಳೆಯ ವಿದ್ಯುತ್‌ ಕಂಬ, ತಂತಿಗಳನ್ನು ಬದಲಿಸಬೇಕು. ಲೈನ್‌ ಮನ್‌ಗಳ ಸುರಕ್ಷತೆಗೂ ಹೆಚ್ಚಿನ ಕಾಳಜಿ ವಹಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ವಿದ್ಯುತ್‌ ಅವಘಡಗಳು ಹೆಚ್ಚುತ್ತಿದ್ದರೂ ಸರಕಾರ ಪರಿಹಾರದ ಮೊತ್ತವನ್ನು ಮಾತ್ರ ಹೆಚ್ಚಿಸಿಲ್ಲ. ಇಲಾಖೆ ನೀಡುವ ಬಿಡಿಗಾಸು ಪರಿಹಾರಕ್ಕಾಗಿ ಸಂತ್ರಸ್ತರು ಕಚೇರಿಗೆ ಅಲೆದಾಡುವುದು ಸಾಮಾನ್ಯವಾಗಿದೆ. ಮನುಷ್ಯ ಮೃತಪಟ್ಟರೆ ಮತ್ತು ಅಥವಾ ಶಾಶ್ವತ ಪೂರ್ಣ ಅಂಗವಿಕಲತೆಗೆ ಒಳಗಾದರೆ 5 ಲಕ್ಷ ರೂ., ಭಾಗಶಃ ಅಂಗವಿಕಲತೆಗೆ ಕನಿಷ್ಠ 1ರಿಂದ 5 ಲಕ್ಷ ರೂ. ವರೆಗೆ ಪರಿಹಾರ ಧನವನ್ನು ಇಂಧನ ಇಲಾಖೆ ನೀಡುತ್ತಿದೆ. ಕಳೆದ ಐದು ವರ್ಷಗಳಿಗೆ ವಿದ್ಯುತ್‌ ಅವಘಡಗಳ ಸಂಖ್ಯೆ ಸಾವಿರ ದಾಟಿದ್ದರೂ ಪರಿಹಾರ ವಿತರಣೆ ಮಾಡಿದ್ದು ಕೇವಲ 445 ಅವಘಡ ಪ್ರಕರಣಗಳಿಗೆ ಮಾತ್ರ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಹಿಂದುಳಿದ ವರ್ಗಗಳ ಮೀಸಲಾತಿಗೆ ಆಗ್ರಹ : ಪಂಚಮಸಾಲಿಗರ ಹೋರಾಟ ತೀವ್ರ!

ಬೆಂಗಳೂರು: ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿ ಚಾರ್ಜ್ ವಿರೋಧಿಸಿ ಸುವರ್ಣಸೌಧದ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಎದುರು ವಿಪಕ್ಷ ನಾಯಕ ಆರ್, ಅಶೋಕ್ ನೇತೃತ್ವದಲ್ಲಿ...

ಆಸ್ತಿ ತೆರಿಗೆ ಕಟ್ಟಲು ನಿರಾಕರಣೆ : ರಸ್ತೆ ಸರಿಪಡಿಸಿದ ಪಂಚಾಯಿತಿ ಸದಸ್ಯರು

ಬೆಂಗಳೂರು: ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂಬ ನಾಗರಿಕರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹಾಲನಾಯಕನಹಳ್ಳಿ ಪಂಚಾಯಿತಿಯ 15 ಸದಸ್ಯರು ತಮ್ಮ ಜೇಬಿನಿಂದ ಸುಮಾರು 5 ಲಕ್ಷ...

ದೆಹಲಿ : ಗೃಹಲಕ್ಷ್ಮೀ ಯೋಜನೆ ಚುನಾವಣೆ ಬಳಿಕ 2100

ನವದೆಹಲಿ: 2025ರ ದೆಹಲಿ ವಿಧಾನಸಭೆ ಚುನಾವಣೆಗೂ ಮೊದಲು ದೆಹಲಿ ಮುಖ್ಯಮಂತ್ರಿ ಅತಿಶಿ ಸರ್ಕಾರವು ಸಚಿವ ಸಂಪುಟ ಸಭೆಯ ನಂತರ ಅರವಿಂದ್ ಕೇಜ್ರಿವಾಲ್ ಅವರ ಗ್ಯಾರಂಟಿಯನ್ನು...

ಪುನರ್‌ ಸಮೀಕರಣ : 2ಎ ಕಥೆ ಮುಗಿದು ಹೋಗಿದೆ

ಮೈಸೂರು: ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್‌ ಸದಸ್ಯ ಹೆಚ್.‌ವಿಶ್ವನಾಥ್‌, 2ಎ ಕಥೆ ಈಗಾಗಲೇ ಮುಗಿದು ಹೋಗಿದೆ. ಅವುಗಳನ್ನು ಪುನರ್‌...