Mumbai News:
ಈ ಇಮೇಲ್ ಕೆಳಗೆ ಬಿಷ್ಣು ಎಂದು ಸಹಿ ಕೂಡ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗಂಭೀರವಾಗಿ ಮತ್ತು ಗೌಪ್ಯತೆಯೊಂದಿಗೆ ಈ ಬೆದರಿಕೆ ಸಂದೇಶವನ್ನು ಪರಿಗಣಿಸುವಂತೆ ತಿಳಿಸಲಾಗಿದೆ. ಈ ಇಮೇಲ್ ಕೆಳಗೆ ಬಿಷ್ಣು ಎಂದು ಸಹಿ ಕೂಡ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿ ಪ್ರಕಾರ ಈ ಸಂದೇಶ ಪಾಕಿಸ್ತಾನದಿಂದ ಬಂದಿದೆ.ಶರ್ಮಾ ಅವರಿಗೆ ಬಂದ ಇಮೇಲ್ ಬೆದರಿಕೆ ಕರೆಯಲ್ಲಿ, ನಿಮ್ಮ ಇತ್ತೀಚಿನ ಚಟುವಟಿಕೆಗಳನ್ನು ನಾವು ಮೇಲ್ವಿಚಾರಣೆ ಮಾಡುತ್ತಿದ್ದೇವೆ.
ಸೂಕ್ಷ್ಮ ವಿಚಾರಗಳನ್ನು ನಿಮ್ಮ ಗಮನಕ್ಕೆ ತರುವುದು ಮುಖ್ಯವಾಗಿದೆ. ಸಾರ್ವಜನಿಕ ಪ್ರಚಾರ ಅಥವಾ ನಿಮಗೆ ಕಿರುಕುಳ ನೀಡುವ ಉದ್ದೇಶವನ್ನು ನಾವು ಹೊಂದಿಲ್ಲ. ಬಾಲಿವುಡ್ ನಟರಿಗೆ ಬೆದರಿಕೆಗಳು ಹೆಚ್ಚಾಗುತ್ತಿರುವ ಮಧ್ಯೆ ಹಾಸ್ಯ ಕಲಾವಿದ KAPIL SHARMA ಮತ್ತು ನಟ ರಾಜ್ಪಾಲ್ ಯಾದವ್ ಅವರಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ.ಇನ್ನು, ಹಾಸ್ಯ ನಟ ರಾಜ್ಪಾಲ್ ಯಾದವ್ಗೂ ಬಿಷ್ಣು ಸಹಿಯೊಂದಿಗೆ ಬೆದರಿಕೆ ಬಂದಿದ್ದು, 8 ತಾಸಿನೊಳಗೆ ಇದಕ್ಕೆ ಉತ್ತರಿಸಬೇಕು ಅಥವಾ ಸಮಸ್ಯೆ ಎದುರಿಸಲು ಸಿದ್ಧವಾಗಬೇಕು ಎಂಬ ಎಚ್ಚರಿಕೆ ನೀಡಲಾಗಿದೆ.
2024ರ ಡಿಸೆಂಬರ್ 14 ರಂದು ಈ ಸಂದೇಶ ಬಂದಿದ್ದು, ಈ ಸಂಬಂಧ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಈ ಬೆದರಿಕೆ ಸಂದೇಶ ಕುರಿತು ತನಿಖೆ ನಡೆಸಿದ್ದು, ಯಾರಿಂದ ಈ ಸಂದೇಶ ಬಂದಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ.’ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ 3′ ವಿಜೇತರಾಗುವ ಮೂಲಕ ಇವರು ಮೊದಲ ಬಾರಿ ಪ್ರೇಕ್ಷಕರನ್ನು ಸೆಳೆದರು. ಬಳಿಕ ‘ಕಾಮಿಡಿ ಸರ್ಕಸ್’ ಎಂಬ ಸೂಪರ್ ಹಿಟ್ ಕಾರ್ಯಕ್ರಮವನ್ನು ನೀಡಿದರು. ಅವರ ‘ಕಾಮಿಡಿ ನೈಟ್ ವಿಥ್ ಕಪಿಲ್’ ಕಾರ್ಯಕ್ರಮ ಪ್ರಮುಖ ಹಾಸ್ಯ ಕಾರ್ಯಕ್ರಮದಲ್ಲಿ ಒಂದಾಗಿದೆ.
KAPIL SHARMA ಅವರು ಹಲವು ವರ್ಷಗಳಿಂದ ಮನೋರಂಜನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಅವರ ಹಾಸ್ಯ ಮತ್ತು ಚೇಷ್ಟೆಯಿಂದ ಪ್ರಸಿದ್ಧಿ ಪಡೆದಿದ್ದಾರೆ.ಇನ್ನು ನಟ ರಾಜ್ಪಾಲ್ ಯಾದವ್ ಕೂಡ ಬಾಲಿವುಡ್ನ ಪ್ರಮುಖ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದು, ಹಲವು ಸಿನಿಮಾಗಳಲ್ಲಿ ಇವರು ಪ್ರೇಕ್ಷಕರನ್ನು ರಂಜಿಸಿದ್ದಾರೆ.ಇದರ ಜೊತೆಗೆ ಕಿರುತೆರೆ ಹಾಗೂ ಸಿನಿಮಾಗಳಲ್ಲೂ ಅವರು ಹಲವು ಪಾತ್ರದಲ್ಲಿ ಮಿಂಚಿದ್ದಾರೆ. ಇತ್ತೀಚೆಗೆ ನೆಟ್ಫ್ಲಿಕ್ಸ್ನಲ್ಲಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕಾರ್ಯಕ್ರಮವನ್ನು ಅವರು ಪ್ರಾರಂಭಿಸಿದ್ದಾರೆ.
ಇದನ್ನು ಓದಿರಿ : RASHMIKA MANDANNA : ಇನ್ಮುಂದೆ ಸಿನಿಮಾ ಮಾಡಲ್ವಾ ರಶ್ಮಿಕಾ ಮಂದಣ್ಣ?