spot_img
spot_img

ಅಯೋಧ್ಯೆಗೆ ಬಿಗಿ ಭದ್ರತೆ

spot_img
spot_img

Share post:

ಅಯೋಧ್ಯೆ, ಉತ್ತರಪ್ರದೇಶ: ಸಿಖ್​​ ಫಾರ್​ ಜಸ್ಟೀಸ್​ (ಎಸ್​ಎಫ್​ಜೆ) ಮತ್ತು ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್​ ಸಿಂಗ್​ ಪನ್ನು ದಾಳಿ ಮಾಡುವ ಬೆದರಿಕೆ ಒಡ್ಡಿದ ಬೆನ್ನಲ್ಲೇ ಅಯೋಧ್ಯೆಯ ರಾಮ ಮಂದಿರ ಆವರಣದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.
ನಿಷೇಧಿತ ಸಂಘಟನೆ ಎಸ್​ಎಫ್​ಜೆ ಇತ್ತೀಚಿಗೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ನವೆಂಬರ್​ 16 ಮತ್ತು 17ರಂದು ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿರುವ ವಿಡಿಯೋವನ್ನು ಹಂಚಿಕೊಂಡಿತು.
ಈ ಬೆನ್ನಲ್ಲೇ ದೇಗುಲದ ಆವರಣ ಸೇರಿದಂತೆ ನಗರದ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ದೇಗುಲದ ಬಳಿ ಹೆಚ್ಚಿನ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಮಾತನಾಡಿರುವ ಎಸ್​ಪಿ ಬಲರಾಮಚಾರಿ ದುಬೆ, ಎಟಿಎಸ್​ ಸಿಬ್ಬಂದಿ ಮತ್ತು ಪೊಲೀಸ್​ ಸಿಬ್ಬಂದಿ ಭದ್ರತಾ ಮೇಲ್ವಿಚಾರಣೆ ಪರೀಕ್ಷೆ ನಡೆಸಿದೆ. ಯಾತ್ರಾರ್ಥಿಗಳ ದರ್ಶನ ಮಾರ್ಗದ ಮೇಲೂ ನಿಗಾ ಹೆಚ್ಚಿಸಲಾಗಿದೆ. 24 ಗಂಟೆಗಳೂ ದೇಗುಲದ ಮೇಲ್ವಿಚಾರಣೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಯೋಧ್ಯೆ ಸರ್ಕಲ್​ ಅಧಿಕಾರಿ ಅಶುತೋಷ್​ ತಿವಾರಿ ಮಾತನಾಡಿ, ಬಿಡುಗಡೆಯಾದ ಬೆದರಿಕೆ ದಾಳಿ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದ್ದು, ಎಲ್ಲ ಅಗತ್ಯ ಮುನ್ನೆಚ್ಚರಿಕೆ ನಡೆಸಲಾಗಿದೆ ಎಂದರು.
ಐಜಿ ಪ್ರವೀಣ್​ ಕುಮಾರ್​ ಮಾತನಾಡಿ, ಇದೀಗ ಪನ್ನುನಿಂದ ವಿಡಿಯೋ ಬೆದರಿಕೆ ಸಂದೇಶ ಬಂದಿದೆ. ಈ ಹಿಂದೆ ಕೂಡ ಇದೇ ರೀತಿಯ ಬೆದರಿಕೆ ಕರೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ನಾವು ಭದ್ರತಾ ವ್ಯವಸ್ಥೆಯನ್ನು ಮತ್ತೊಮ್ಮೆ ಪುನರ್​ ಪರಿಶೀಲಿಸುತ್ತಿದ್ದೇವೆ ಎಂದರು.
ಆಗಸ್ಟ್​ 22ರಂದು ಕೂಡ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಮೊಬೈಲ್​ ನಂಬರ್​ ಸಹಾಯವಾಣಿಗೆ ವಾಟ್ಸ್​ಆ್ಯಪ್​​ ಮೂಲಕ ಇದೇ ರೀತಿ ಬೆದರಿಕೆ ಸಂದೇಶ ಬಂದಿತ್ತು. ಅದರಲ್ಲಿ ಕೂಡ ಶೀಘ್ರದಲ್ಲೇ ದೇಗುಲವನ್ನು ನಾಶ ಮಾಡಿ, ಮಸೀದಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಈ ಸಂಬಂಧ ಸೆಪ್ಟೆಂಬರ್​ 14ರಂದು ಉತ್ತರ ಪ್ರದೇಶ ಎಟಿಎಸ್​ ಮೊಹಮ್ಮದ್​ ಮಕ್ವಸೂದ್​ ಎಂಬ ವ್ಯಕ್ತಿಯನ್ನು ಬಿಹಾರದ ಬಾಗ್ಲಪುರ್​​ನಲ್ಲಿ ಬಂಧಿಸಿದ್ದರು.
ಇದಕ್ಕೆ ಮುನ್ನ ಮೇ 28ರಂದು ಕೂಡ ಇನ್​​​ಸ್ಟಾಗ್ರಾಂನಲ್ಲಿ ದೇಗುಲಕ್ಕೆ ಬೆದರಿಕೆ ಸಂದೇಶ ಹರಿದಾಡಿದ್ದವು. ಈ ಪ್ರಕರಣ ಸಂಬಂಧ ಕುಶಿನಗರದಲ್ಲಿನ ಬಲೌ ತಕಿಯಾದ 16 ವರ್ಷದ ಬಾಲಕನನ್ನು ಬಂಧಿಸಲಾಗಿತ್ತು. ಈತ ಮಾನಸಿಕ ಸ್ಥಿರತೆ ಹೊಂದಿರಲಿಲ್ಲ ಎಂಬುದು ತನಿಖೆಯಲ್ಲಿ ತಿಳಿದು ಬಂದಿತು.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...