Hassan News:
ಕೊಣನೂರು ರೈತರೊಬ್ಬರು ತಮ್ಮ ಜಮೀನನ್ನು ಟ್ರ್ಯಾಕ್ಟರ್ನಲ್ಲಿ ಉಳುಮೆ ಮಾಡುವಾಗ ಸುಂದರವಾದ ಕೆತ್ತನೆಯಿರುವ ಕಂಬವನ್ನು ಹೋಲುವ ಶಿಲಾ ಸ್ತಂಭ ಮತ್ತು TIRTHANKARA STONE IDOL FOUND ಪತ್ತೆಯಾಗಿವೆ.ಈ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಜೈನ ಧರ್ಮಕ್ಕೆ ಸಂಬಂಧಿಸಿದ ವೈವಿಧ್ಯಮಯ ಶಿಲ್ಪಕಲಾಕೃತಿಗಳು ಸಿಗುತ್ತಲೇ ಇವೆ.
ಹೇಮಾವತಿ ಹಿನ್ನೀರಿನಿಂದ ಸಂತ್ರಸ್ತರಾದ 15 ಗ್ರಾಮಗಳ ಜನರು 1963 ರಿಂದ ಈಚೆಗೆ ಸುಳಗೋಡು ಸೋಮವಾರ ಗ್ರಾಮದಲ್ಲಿ ವಾಸವಾಗಿದ್ದಾರೆ. ಈ ಗ್ರಾಮಕ್ಕೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳ ಬಗ್ಗೆ ನಿಖರ ಮಾಹಿತಿ ಯಾರಿಗೂ ತಿಳಿದಿಲ್ಲ. ಇಲ್ಲಿನ ಶಿಲಾವಶೇಷಗಳ ಬಗ್ಗೆ ವಿವರ ತಿಳಿಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ಉತ್ಪನನ ಮಾಡಬೇಕು.
ಇಂತಹ ಜೈನಬಸದಿ, ಬಳಪದ ಕಲ್ಲಿನ ವಿಗ್ರಹ, ಕಲ್ಲಿನ ದೀಪ, ಕೆತ್ತನೆಯ ಕಂಬಗಳು, ನಿಷಿಧಿಗಲ್ಲು ಹಾಗೂ ಶಾಸನ ಕಂಬಗಳು ಮೊದಲಾದ ಶಿಲಾವಶೇಷಗಳನ್ನು ಸಂರಕ್ಷಿಸಿ ಒಂದು ರೂಪ ಕೊಡುವ ಅಗತ್ಯವಿದೆ.
ಕಳೆದ ವರ್ಷ ಬಳಪದ ಕಲ್ಲಿನ ಕಾಲಭೈರವನ ವಿಗ್ರಹ, ಕಲ್ಲಿನ ದೀಪ, ಕೆತ್ತನೆಯ ಕಂಬ, ನಿಷಿಧಿಗಲ್ಲು ಹಾಗೂ ಶಾಸನ ಕಂಬಗಳು ಸಿಕ್ಕಿದ್ದವು. ಅಲ್ಲದೇ, ಈ ಹಿಂದೆ ಮಹಾವೀರನ ಆಕೃತಿ ಹೋಲುವ ವಿಗ್ರಹ ಕೂಡ ಗ್ರಾಮದ ಜಮೀನಿನಲ್ಲಿ ಸಿಕ್ಕಿದ್ದು, ಅದನ್ನು ಗ್ರಾಮದ ಯುವಕರು ದೇವಾಲಯದ ಮುಂಭಾಗದಲ್ಲಿ ಇಟ್ಟು ರಕ್ಷಿಸಿದ್ದಾರೆ. ಈ ಗ್ರಾಮದಲ್ಲಿ ಇದೇ ಮಾದರಿಯ ಇನ್ನೂ ಹಲವಾರು ಶಿಲಾವಷೇಶಗಳು ಲಭ್ಯವಿರಬಹುದು ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಅರಕಲಗೂಡು ತಾಲೂಕಿನ ಗಡಿಗ್ರಾಮ ಸುಳುಗೋಡು ಸೋಮವಾರ ಗ್ರಾಮದ ಬಸವೇಶ್ವರ ದೇವಾಲಯದ ಪಕ್ಕದ ಜಮೀನಿನಲ್ಲಿ ಜೈನ ಧರ್ಮದ TIRTHANKARA STONE IDOL FOUND ಸ್ತಂಭದ ಕಲಾಕೃತಿಯೊಂದು ಸಿಕ್ಕಿದೆ. ಗ್ರಾಮದಲ್ಲಿ ಅನೇಕ ವರ್ಷಗಳಿಂದ ಜೈನ ಧರ್ಮಕ್ಕೆ ಸಂಬಂಧಿಸಿದ ವೈವಿಧ್ಯಮಯ ಶಿಲ್ಪಕಲಾಕೃತಿಗಳು ಸಿಗುತ್ತಲೇ ಇವೆ. 2015 ರಲ್ಲಿ ಚಾಮರ ಹಿಡಿದಿರುವ ಶಿಲಾಬಾಲಿಕೆ ಹೋಲುವ 2 ಕಲಾಕೃತಿ ಮತ್ತು ಒಂದು ಕಂಬ ಪತ್ತೆಯಾಗಿದ್ದವು.
ಪುರಾತತ್ವ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮವಹಿಸಲಾಗುವುದು” ಎಂದು ತಹಶೀಲ್ದಾರ್ ಹೆಚ್. ಮಲ್ಲಿಕಾರ್ಜುನ್ ಹೇಳಿದರು.TIRTHANKARA STONE IDOL FOUND ಪತ್ತೆಯಾದ ಹಿನ್ನಲೆ ಸ್ಥಳಕ್ಕೆ ಅರಕಲಗೂಡು ತಹಶೀಲ್ದಾರ್ ಹೆಚ್. ಮಲ್ಲಿಕಾರ್ಜುನ್ ಹಾಗೂ ಶಿರಸ್ತೇದಾರ ಸಿ.ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. “ಗ್ರಾಮದ ಸ.ನಂ.
54ರ ಗೋಮಾಳದ ಜಮೀನಿನಲ್ಲಿ ರೈತರು ಉಳುಮೆ ಮಾಡುವಾಗ ಜೈನ TIRTHANKARA STONE IDOL FOUND ಹಾಗೂ ಕೆತ್ತನೆಯುಳ್ಳ ಕಲ್ಲಿನ ಸ್ತಂಭಗಳು ಪತ್ತೆಯಾಗಿದ್ದು ಸದರಿ ಪ್ರದೇಶದಲ್ಲಿ ಇನ್ನು ಹೆಚ್ಚಿನ ಸ್ತಂಭಗಳು ಹಾಗೂ ವಿಗ್ರಹಗಳು ಸಿಗುವ ಸಂಭವವಿದ್ದು ಈ ವಿಚಾರವಾಗಿ ಜಿಲ್ಲಾಧಿಕಾರಿಗೆ ಹಾಗೂ ಪುರಾತತ್ವ ಇಲಾಖೆ ಗಮನಕ್ಕೆ ತರಲಾಗುವುದು.ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಕುಮಾರ್ ರಾಜಸ್ವ, ನಿರೀಕ್ಷಕ ಬಲರಾಮ್, ಗ್ರಾಮ ಆಡಳಿತ ಅಧಿಕಾರಿ ಮದನ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಇದನ್ನು ಓದಿರಿ : GALLANTRY AND SERVICE MEDALS : ದೇಶದ 942 ಪೊಲೀಸ್ ಸಿಬ್ಬಂದಿಗಳಿಗೆ ಶೌರ್ಯ ಮತ್ತು ಸೇವಾ ಪದಕ