spot_img
spot_img

TOURISTS FLOCK TO MYSURU : ಹೊಸವರ್ಷಕ್ಕೆ ಮೈಸೂರಿನತ್ತ ಪ್ರವಾಸಿಗರ ದಂಡು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Mysure News:

ಕ್ರಿಸ್​ಮಸ್, ವಾರಾಂತ್ಯ ರಜೆ ಸೇರಿದಂತೆ ಹೊಸವರ್ಷದ ಹಿನ್ನೆಲೆಯಲ್ಲಿ ಪ್ರವಾಸಿಗರ ದಂಡು ಅರಮನೆ ನಗರಿಗೆ ಹರಿದು ಬಂದಿದ್ದು, ನಗರದ ಬಹುತೇಕ ಹೋಟೆಲ್ ರೂಮ್​ಗಳು ಭರ್ತಿಯಾಗಿವೆ. ಕ್ರಿಸ್​ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿಯ ಪ್ರವಾಸಿ ತಾಣಗಳನ್ನು ನೋಡಲು ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಿದ್ದು, ನಗರದಲ್ಲಿರುವ ಎಲ್ಲ ಲಾಡ್ಜ್​ಗಳೂ ಭರ್ತಿಯಾಗಿವೆ. ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ಮಾತನಾಡಿ, “ನಗರದಲ್ಲಿರುವ ಸುಮಾರು 425ಕ್ಕೂ ಹೆಚ್ಚು ಹೋಟೆಲ್​ಗಳು, ಅತಿಥಿ ಗೃಹಗಳು, ಕ್ಲಬ್​ಗಳು, ವಿವಿಧ ಬಡಾವಣೆಗಳಲ್ಲಿರುವ ಸರ್ವಿಸ್‌ ಅಪಾರ್ಟ್​ಮೆಂಟ್​ಗಳು ಹಾಗೂ ಹೋಂ ಸ್ಟೇಗಳು ಭರ್ತಿಯಾಗಿವೆ. ನಗರದಲ್ಲಿ 10 ಸಾವಿರಕ್ಕೂ ಹೆಚ್ಚು ರೂಮ್​ಗಳಿದ್ದು, ಅವುಗಳಲ್ಲಿ ಬಹುತೇಕ ರೂಮ್​ಗಳು 10 ದಿನಗಳ ವರೆಗೂ ಬುಕ್ಕಿಂಗ್​ ಆಗಿವೆ” ಎಂದು ಮಾಹಿತಿ ನೀಡಿದರು.

Cultural programs canceled in palace premises:

“ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನದಿಂದ ಮೈಸೂರು ಅರಮನೆ ಆವರಣದಲ್ಲಿ ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪೊಲೀಸ್​ ಬ್ಯಾಂಡ್‌ ಹಾಗೂ ಡಿಸೆಂಬರ್‌ 31ರ ರಾತ್ರಿ ಅರಮನೆ ಮುಂಭಾಗದಲ್ಲಿ ಮಧ್ಯರಾತ್ರಿ ಬಾಣಬಿರುಸು (ಹಸಿರು ಪಟಾಕಿ) ಪ್ರರ್ದಶನ ರದ್ದುಪಡಿಸಲಾಗಿದೆ. ಇಂದು ಮತ್ತು ನಾಳೆ ಅರಮನೆ ದೀಪಾಲಂಕಾರ ರದ್ದು ಮಾಡಲಾಗಿದೆ. ಫಲಪುಷ್ಪ ಪ್ರದರ್ಶನ ಎಂದಿನಂತೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಇರಲಿದೆ” ಎಂದು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಸುಬ್ರಮಣಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

IPL 2025 RCB CAPTAIN : RCB ಮುಂದಿನ ನಾಯಕ ಯಾರು ಗೊತ್ತಾ?

IPL 2025 RCB Captain: IPL 2025 RCB CAPTAIN ಇತ್ತೀಚೆಗೆ ಜೆಡ್ಡಾದಲ್ಲಿ 18ನೇ ಆವೃತ್ತಿ ಹಿನ್ನೆಲೆ ಆಟಗಾರರ ಮೆಗಾ ಹರಾಜು ನಡೆದಿತ್ತು. ಇದರಲ್ಲಿ ಎಲ್ಲಾ...

MICROFINANCE HARASSMENT : ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ನಿಯಮ ಪಾಲನೆಗೆ ಸಿಎಸ್ ಸೂಚನೆ

Bangalore News: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ, ಜೊತೆಗೆ MICROFINANCE HARASSMENT ತಪ್ಪಿಸಲು ಇರುವ ನಿಯಮಗಳ ಪಾಲನೆಗೆ ಸರ್ಕಾರದ ಮುಖ್ಯ...

HIGH COURT : ಚಾಮರಾಜಪೇಟೆ ಪಶು ವೈದ್ಯಕೀಯ ಆಸ್ಪತ್ರೆ ಜಾಗ ಮೊರಾರ್ಜಿ ಶಾಲೆಗೆ ಹಸ್ತಾಂತರ

Bangalore News: HIGH COURT ಪ್ರಕರಣ ಸಂಬಂಧ ವಕೀಲ ಗಿರೀಶ್ ಭಾರದ್ವಾಜ್​ ​ ಹಾಗೂ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ...

SAFETY OF WOMEN:ಮಹಿಳೆಯರ ಸುರಕ್ಷತೆಗೆ ಶೂ ಡಿವೈಸ್ ಆವಿಷ್ಕರಿಸಿದ ವಿದ್ಯಾರ್ಥಿ

Alwar (Rajasthan) News​: ದುಷ್ಕರ್ಮಿಗಳ ವಿರುದ್ಧ ರಕ್ಷಣೆ ಪಡೆಯಲು ಶಾಕ್​ ನೀಡುವ ಶೂವನ್ನು ವಿದ್ಯಾರ್ಥಿ ವಿನ್ಯಾಸ ಮಾಡಿದ್ದಾರೆ. ಇದರಿಂದ ಧರಿಸಿದವರಿಗೆ ಯಾವುದೇ ಗಂಭೀರ ಸಮಸ್ಯೆ ಅಥವಾ...