spot_img
spot_img

UNION BUDGET 2025 : ಕೇಂದ್ರ ಬಜೆಟ್ ಮೇಲೆ ಬೆಳಗಾವಿಗರ ಬೆಟ್ಟದಷ್ಟು ನಿರೀಕ್ಷೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Belgaum News:

 

UNION BUDGET 2025 ಮೇಲೆ ಬೆಳಗಾವಿ ನಗರ ನಿವಾಸಿಗರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಲ್ಲಿ ಲೋಕಾಪುರ-ರಾಮದುರ್ಗ-ಸವದತ್ತಿ-ಧಾರವಾಡ ರೈಲು ಮಾರ್ಗವೂ ಒಂದು. ವರದಿ ಸಿದ್ದನಗೌಡ ಪಾಟೀಲ್.ಇಲ್ಲಿ ರೈಲ್ವೆ ಸಂಪರ್ಕ ಮಾತ್ರ ಅಷ್ಟಕ್ಕಷ್ಟೇ ಎನ್ನುವುದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಸಮೀಪದ ಮಹಾನಗರಗಳ ಸಂಪರ್ಕ ಸುಲಭ ಆದಷ್ಟು ಜಿಲ್ಲೆಯ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಹಾಗಾಗಿ, ಈ ಬಾರಿಯ UNION BUDGET 2025​ ನಲ್ಲಿಯಾದ್ರೂ ನಮ್ಮ ಭಾಗಕ್ಕೆ ನ್ಯಾಯ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿ ಈ ಭಾಗದ ಜನರಿದ್ದಾರೆ.ದೇಶದ ಶೇ.70ರಷ್ಟು ಜನ ಸಂಪರ್ಕ ಸಾಧನವಾಗಿ ರೈಲನ್ನೆ ಬಳಸುತ್ತಾರೆ.‌

ಕೋಟ್ಯಂತರ ಜನರ ಬದುಕಿಗೆ ರೈಲು ಆಧಾರಸ್ತಂಭವಾಗಿದೆ. ಮಧ್ಯಮ ವರ್ಗ, ಶ್ರೀಮಂತರು ಸೇರಿ ಬಹಳಷ್ಟು ಜನರಿಗೆ ರೈಲು ಜೀವನಾಡಿ ಆಗಿದೆ. ಆದರೆ, 28 ಸಕ್ಕರೆ ಕಾರ್ಖಾನೆ, ಪ್ರವಾಸಿತಾಣಗಳು ಮತ್ತು ಪ್ರಸಿದ್ಧ ದೇವಾಲಯಗಳನ್ನು ಹೊಂದಿರುವ ಗಡಿ ಜಿಲ್ಲೆ ಬೆಳಗಾವಿ, ಕರ್ನಾಟಕ-ಗೋವಾ-ಮಹಾರಾಷ್ಟ್ರ ರಾಜ್ಯಗಳ ಸಂಪರ್ಕಕೊಂಡಿ.

ಹೊಸ ರೈಲು ಮಾರ್ಗ, ಹಳಿಗಳ ಡಬ್ಲಿಂಗ್, ರೈಲಿನಲ್ಲಿ ಮೂಲಭೂತ ಸೌಕರ್ಯ ಸೇರಿ ಮತ್ತಿತರ ಅಭಿವೃದ್ಧಿ‌ ಕೈಗೊಳ್ಳಲು ಬ್ರಿಟಿಷರ ಕಾಲದಿಂದಲೂ ರೈಲ್ವೆ ಕ್ಷೇತ್ರಕ್ಕೆ ಪ್ರತ್ಯೇಕ UNION BUDGET 2025 ಮಂಡಿಸಲಾಗುತ್ತಿತ್ತು. ಆದರೆ, ಮೋದಿ ಸರ್ಕಾರ ಬಂದ ಬಳಿಕ ಇದನ್ನು ಸ್ಥಗಿತಗೊಳಿಸಿದ್ದಾರೆ. ಈ ಬಾರಿ ರೈಲಿಗೆ ಪ್ರತ್ಯೇಕUNION BUDGET 2025 ಮಂಡಿಸಿ, ಬೆಳಗಾವಿ ಜಿಲ್ಲೆಯಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹೊಸ ರೈಲು ಮಾರ್ಗಗಳ ಅನುಷ್ಠಾನಕ್ಕೆ ರೈಲ್ವೆ ಹೋರಾಟಗಾರರು ಆಗ್ರಹಿಸಿದ್ದಾರೆ.

Six projects demand the decade:

 

ಲೋಕಾಪುರ-ರಾಮದುರ್ಗ-ಸವದತ್ತಿ-ಧಾರವಾಡ ರೈಲು ಮಾರ್ಗದಿಂದ ಜಿಲ್ಲೆಯ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಸಿಗುವ ನಿರೀಕ್ಷೆ ಇದೆ. 97 ಕಿ.ಮೀ, 109 ಕಿ.ಮೀ ಹಾಗೂ 137 ಕಿ.ಮೀ ಹೀಗೆ ಮೂರು ಹಂತದಲ್ಲಿ 2019ರಲ್ಲಿಯೇ ಸಮೀಕ್ಷೆ ಮಾಡಲಾಗಿತ್ತು.

‘ಪ್ರಸ್ತಾವಿತ ರೈಲು ಮಾರ್ಗದಲ್ಲಿ ಜನದಟ್ಟಣೆ ಇಲ್ಲದ ಕಾರಣ ಈ ಯೋಜನೆ ಆರ್ಥಿಕವಾಗಿ ಫಲದಾಯಕವಲ್ಲ’ ಎಂದು ವರದಿ ನೀಡಿದ್ದರಿಂದ ಪ್ರಮುಖ‌ ಯೋಜನೆ ನನೆಗುದಿಗೆ ಬಿದ್ದಿದೆ.ಉದ್ದೇಶಿತ ಯೋಜನೆಗಳಿಗೆ ಅಗತ್ಯ ಭೂಮಿ ಒದಗಿಸುವಲ್ಲಿ ರಾಜ್ಯ ಸರ್ಕಾರ ವಹಿಸುತ್ತಿರುವ ತಾತ್ಸಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನಿರಂತರ ಹೋರಾಟಗಳ ಹೊರತಾಗಿಯೂ ಮಹತ್ವಾಕಾಂಕ್ಷೆಯ ಯೋಜನೆಗಳು ಅನುಷ್ಠಾನಕ್ಕೆ ಬರುವ ಲಕ್ಷಣ ಗೋಚರಿಸುತ್ತಿಲ್ಲ.

ಬೆಳಗಾವಿ-ಕಿತ್ತೂರು-ಧಾರವಾಡ ಮಾರ್ಗದ ಯೋಜನೆಗೆ ರೈಲ್ವೆ ಇಲಾಖೆಯು ಮಂಜೂರಾತಿ ನೀಡಿ 5 ವರ್ಷಗಳೇ ಕಳೆದಿವೆ. ಆದರೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಕಾಮಗಾರಿ ಆರಂಭಿಸಲು ಹಿನ್ನಡೆಯಾಗಿದೆ. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಶೀಘ್ರವೇ ಕಾಮಗಾರಿ ಆರಂಭಿಸುವಂತೆ ಜಿಲ್ಲೆಯ ಜನ ಒತ್ತಾಯಿಸುತ್ತಿದ್ದಾರೆ.

ಇನ್ನು, ಬೆಳಗಾವಿಯಿಂದ ಕೊಲ್ಲಾಪುರ ಮಾರ್ಗದ ಯೋಜನೆ ಸಮೀಕ್ಷೆಗೆ ಅನುಮೋದನೆ ಸಿಕ್ಕಿದೆ. ಅದಲ್ಲದೇ, ಬೆಳಗಾವಿ-ಸಾವಂತವಾಡಿ ಮಾರ್ಗದ ಯೋಜನೆ ಸಮೀಕ್ಷೆ ಪ್ರಗತಿಯಲ್ಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ ಬಾಗಲಕೋಟೆ-ಕುಡಚಿ ಮಾರ್ಗದ 986 ಕೋಟಿ ರೂ.ಮೊತ್ತದ ಯೋಜನೆಗೆ 2010 ರಲ್ಲೇ ಅನುಮೋದನೆ ಸಿಕ್ಕಿದೆ. 1,530 ಕೋಟಿ ರೂ.

ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಬಾಗಲಕೋಟೆಯಿಂದ ಲೋಕಾಪುರವರೆಗಿನ ಕಾಮಗಾರಿ ಪೂರ್ಣಗೊಂಡಿದೆಇನ್ನು ಉತ್ತರಕರ್ನಾಟಕ ಆರಾಧ್ಯ ದೈವ ಸವದತ್ತಿ ಶ್ರೀರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಪ್ರತಿ ವರ್ಷ ಒಂದೂವರೆ ಕೋಟಿಗೂ ಅಧಿಕ ಭಕ್ತರು ಭೇಟಿ ನೀಡುತ್ತಾರೆ. ಹಾಗಾಗಿ, ರೈಲು‌ ಮಾರ್ಗ ಆರಂಭಿಸಿದರೆ ಪ್ರಯಾಣಿಕರ ಕೊರತೆ ಆಗುವುದಿಲ್ಲ.

ಮತ್ತೊಮ್ಮ ಸಮೀಕ್ಷೆ ಮಾಡಿ ಯೋಜನೆಗೆ ಅನುಮೋದನೆ ನೀಡಬೇಕು ಎಂದು ಸಂಸದ ಜಗದೀಶ ಶೆಟ್ಟರ್‌ ಅವರು ಇತ್ತೀಚೆಗಷ್ಟೇ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಮನವಿ ಮಾಡಿದ್ದಾರೆ.

The Suresha Shop Dream:

 

ಈ ನೂತನ ನೇರ ರೈಲು ಮಾರ್ಗದಿಂದ ಧಾರವಾಡ-ಬೆಳಗಾವಿ ನಗರದ ನಡುವಿನ ರೈಲು ಪ್ರಯಾಣದ ಅವಧಿ 31 ಕಿ.ಮೀ. ಕಡಿಮೆಯಾಗಲಿದೆ. ಈಗ ಧಾರವಾಡದಿಂದ ಲೋಂಡಾ ಮೂಲಕ ಬೆಳಗಾವಿ ತಲುಪಬೇಕು. ಪ್ರಯಾಣದ ಅವಧಿ ಸುಮಾರು 4 ಗಂಟೆ.

ನೇರ ರೈಲು ಮಾರ್ಗದಿಂದ ಸುಮಾರು 45 ನಿಮಿಷದಲ್ಲಿ ಸಂಚರಿಸಬಹುದಾಗಿದೆ.ಶೇಡಬಾಳ-ಅಥಣಿ-ವಿಜಯಪುರ ಮಾರ್ಗದ ಯೋಜನೆ ಯುಪಿಎ ಸರ್ಕಾರದ ಅವಧಿಯಲ್ಲೇ ನಡೆದು 2010-11ನೇ ಸಾಲಿನ UNION BUDGET 2025 ನಲ್ಲೂ ಪ್ರಸ್ತಾಪಿಸಲಾಗಿತ್ತು. ಆದರೆ, ದಶಕ ಕಳೆದರೂ ಈ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಇನ್ನು ಈ ಕಾಮಗಾರಿಗಳಿಗೆ‌ ಅನುಮೋದನೆ ಸಿಗುವುದು ವಿಳಂಬ ಆದಷ್ಟು ಕಾಮಗಾರಿ ವೆಚ್ಚ ಹೆಚ್ಚಾಗುತ್ತದೆ.

ಅದು ಸರ್ಕಾರಕ್ಕೆ ಹೊರೆಯಾಗಲಿದೆ ಅನ್ನೋದು ಆರ್ಥಿಕ ತಜ್ಞರ ಅಭಿಪ್ರಾಯ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್‌ ಅಂಗಡಿ ಅವರು ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗದ ಯೋಜನೆ ರೂಪಿಸಿದ್ದರು. ಬಿ.ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರವು ಯೋಜನೆಗೆ ಒಪ್ಪಿಗೆಯನ್ನು ಕೊಟ್ಟಿತ್ತು.

73 ಕಿ.ಮೀ. ಉದ್ದದ ಈ ರೈಲು ಮಾರ್ಗವನ್ನು 2020-21ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.50:50ರಂತೆ ವೆಚ್ಚವನ್ನು ಹಂಚಿಕೆ ಮಾಡಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿವೆ. ಅಲ್ಲದೇ ಯೋಜನೆಗೆ ರಾಜ್ಯ ಸರ್ಕಾರ ಉಚಿತವಾಗಿ ಭೂಮಿಯನ್ನು ನೀಡುತ್ತಿದೆ. ಈ ನೂತನ ರೈಲು ಮಾರ್ಗಕ್ಕೆ 927.42 ಕೋಟಿ ರೂ.

ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 2023-24ನೇ ಸಾಲಿನಲ್ಲಿ ಯೋಜನೆಗಾಗಿ10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ, ಭೂಸ್ವಾಧೀನ ಹಾಗೂ ಹೆಚ್ಚಿನ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ರೈತರ ಪ್ರತಿಭಟನೆಯಿಂದಾಗಿ ರೈಲುಮಾರ್ಗ ಯೋಜನೆ ವಿಳಂಬಗೊಳ್ಳುತ್ತಿದೆ.

People’s representatives show solidarity across party lines:

 

 

ಕಿತ್ತೂರು ಮಾರ್ಗವಾಗಿ ಧಾರವಾಡ ಸಂಪರ್ಕಿಸುವ ಪ್ರದೇಶದಲ್ಲಿ ಬಾಕಿ ಉಳಿದಿರುವ ಶೇ.5ರಿಂದ 10ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದೇ ರೀತಿ ನಮ್ಮ ಮನವಿ ಸ್ಪಂದಿಸಿದ ರೈಲ್ವೆ ಸಚಿವರು ಲೋಕಾಪುರ-ಸವದತ್ತಿ-ಧಾರವಾಡ ಯೋಜನೆ ಬಗ್ಗೆ ಮರು ಸಮೀಕ್ಷೆ ನಡೆಸುವ ಭರವಸೆ ನೀಡಿದ್ದಾರೆ. – ಜಗದೀಶ ಶೆಟ್ಟರ್‌, ಬೆಳಗಾವಿ ಸಂಸದರುಬೆಳಗಾವಿ-ಕಿತ್ತೂರು-ಧಾರವಾಡ ನೇರ ರೈಲು ಮಾರ್ಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ‌ ದೊಡ್ಡ ಸವಾಲಾಗಿದೆ. ಫಲವತ್ತಾದ ಭೂಮಿ ಬಿಟ್ಟು

ಇದನ್ನು ಓದಿರಿ : HANDICRAFT AND FLOWER SHOW : ಮಲೆನಾಡ ಕರಕುಶುಲ ಹಾಗೂ ಪುಷ್ಪಸಿರಿ ಮೇಳ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...