New Delhi News:
ಭಾರತದಲ್ಲಿ ಬಳಸಿದ CARಗಳ ಮಾರುಕಟ್ಟೆ ಬೆಳವಣಿಗೆಯಾಗುತ್ತಿದೆ.ಮಾರಾಟವು ಶೇಕಡಾ 13 ರಷ್ಟು ಪ್ರಭಾವಶಾಲಿ ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರ (ಸಿಎಜಿಆರ್) ದೊಂದಿಗೆ ಮುಂದುವರಿಯಲಿದೆ ಎಂದು ವರದಿಯೊಂದು ತಿಳಿಸಿದೆ.ಭಾರತದಲ್ಲಿ ಬಳಸಿದ CAR (ಸೆಕೆಂಡ್ ಹ್ಯಾಂಡ್ ಕಾರು) ಮಾರುಕಟ್ಟೆಯು 2023 ರಲ್ಲಿ ಇದ್ದ 4.6 ಮಿಲಿಯನ್ನಿಂದ 2030ರ ವೇಳೆಗೆ 10.8 ಮಿಲಿಯನ್ ಗೆ ಬೆಳೆಯುವ ನಿರೀಕ್ಷೆಯಿದೆ.ಬಳಸಿದ CARಗಳ ಮಾರಾಟದಲ್ಲಿ ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿ ಮುಂಚೂಣಿಯಲ್ಲಿದ್ದು, 2024 ರಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ 5 ಪಟ್ಟು ಹೆಚ್ಚಾಗಿದ್ದರಿಂದ ಬಳಸಿದ CAR ಮಾರುಕಟ್ಟೆಯಲ್ಲಿಯೂ ಪರಿಸರ ಪ್ರಜ್ಞೆಯುಳ್ಳ ಖರೀದಿದಾರರು ಹೆಚ್ಚಾಗಿರುವುದು ಕಂಡು ಬಂದಿದೆ.
ಬಳಸಿದ CAR ಮಾರಾಟದಲ್ಲಿ 2024ನೇ ಇಸ್ವಿಯು ಒಂದು ಮೈಲಿಗಲ್ಲು ವರ್ಷವಾಗಿ ಹೊರಹೊಮ್ಮಿದ್ದು, ಈ ವರ್ಷದಲ್ಲಿ ಬಳಸಿದ ಕಾರುಗಳ ಮಾರಾಟವು 1.3:1 ರ ಗಮನಾರ್ಹ ಅನುಪಾತದೊಂದಿಗೆ CAR ಮಾರಾಟದಲ್ಲಿ ಪ್ರಾಬಲ್ಯ ಸಾಧಿಸಿದೆ.ಹೊಸ CARಗಳ ಸರಾಸರಿ ಮಾರಾಟ ಬೆಲೆ (ಎಎಸ್ಪಿ) ಏರುತ್ತಲೇ ಇರುವುದು ಗಮನಾರ್ಹ. ಇದರಿಂದ ಹೊಸ ಮತ್ತು ಬಳಸಿದ CARಗಳ ಎಎಸ್ಪಿ ನಡುವಿನ ಅಂತರ ಮತ್ತಷ್ಟು ಹೆಚ್ಚಾಗುತ್ತಿದೆ. ಹೊಸ ಕಾರು ಎಎಸ್ಪಿಗಳು ಶೇಕಡಾ 32 ರಷ್ಟು ಏರಿಕೆ ಕಂಡರೆ, ಬಳಸಿದ CARಗಳ ಎಎಸ್ಪಿ ಶೇಕಡಾ 24 ರಷ್ಟು ಹೆಚ್ಚಾಗಿವೆ. ಬಳಸಿದ ಕಾರುಗಳ ಬೆಲೆಗಳು ಹೆಚ್ಚಾಗುತ್ತಿದ್ದರೂ ಇವು ಖರೀದಿದಾರರಿಗೆ ಹೆಚ್ಚು ಬಜೆಟ್ ಸ್ನೇಹಿ ಆಯ್ಕೆಯಾಗಿವೆ.
Consumers availing loan to buy new car: ಇದು ಹೊಸ CAR ಕೊಳ್ಳಲು ಗ್ರಾಹಕರು ಇತ್ತೀಚೆಗೆ ಹೆಚ್ಚಾಗಿ ಸಾಲವನ್ನೇ ಅವಲಂಬಿಸುತ್ತಿರುವುದರ ಸೂಚನೆಯಾಗಿದೆ. ಹಾಗೆಯೇ ಬಳಸಿದ ಕಾರುಗಳ ಹಣಕಾಸು ಮಾರುಕಟ್ಟೆಯೂ ಪ್ರಗತಿ ಸಾಧಿಸಿದ್ದು, ಇದೇ ಅವಧಿಯಲ್ಲಿ ಶೇಕಡಾ 15 ರಿಂದ 23 ಕ್ಕೆ ಏರಿಕೆಯಾಗಿದೆ.ವರದಿಯ ಪ್ರಕಾರ, ಹೊಸ ಕಾರುಗಳಿಗೆ ನೀಡಲಾದ ಸಾಲದ ಪ್ರಮಾಣದಲ್ಲಿ ಕೂಡ ಗಮನಾರ್ಹ ಬೆಳವಣಿಗೆಯಾಗಿದ್ದು, ಇದು 2010 ರಲ್ಲಿ ಇದ್ದ ಶೇಕಡಾ 60 ರಿಂದ 2024 ರಲ್ಲಿ ಶೇಕಡಾ 84.2 ಕ್ಕೆ ಏರಿದೆ.
ಕೋವಿಡ್ ನಂತರದ ಕಾಲದಲ್ಲಿ ಗ್ರಾಹಕರ ಆದ್ಯತೆಗಳು ಗಮನಾರ್ಹವಾಗಿ ಬದಲಾಗಿವೆ. ಶೇಕಡಾ 12 ರಷ್ಟು CAR ಖರೀದಿದಾರರು ಸಮೂಹ ಸಾರಿಗೆಯಲ್ಲಿ ಪ್ರಯಾಣಿಸುವುದಕ್ಕಿಂತ ತಮ್ಮ ಅನುಕೂಲ ಮತ್ತು ಸುರಕ್ಷತೆಗಾಗಿ ವೈಯಕ್ತಿಕ ಸಾರಿಗೆ ವಾಹನ ಹೊಂದಲು ಆದ್ಯತೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.ಬಳಸಿದ ಕಾರುಗಳ ಸ್ಥಿತಿಯು ಹಿಂದಿನ ಮಾಲೀಕರು ಅವುಗಳನ್ನು ಎಷ್ಟು ಚೆನ್ನಾಗಿ ನಿರ್ವಹಿಸಿದ್ದಾರೆ ಎಂಬುದರ ಆಧಾರದ ಮೇಲೆ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಭಿನ್ನವಾಗಿರುತ್ತದೆ.
ಬಳಸಿದ ಕಾರುಗಳಿಗೆ ಸಾಮಾನ್ಯವಾಗಿ ಯಾವುದೇ ವಾರಂಟಿ ನೀಡಲಾಗುವುದಿಲ್ಲ.ಬಳಸಿದ CAR ಅಥವಾ ಪೂರ್ವ – ಮಾಲೀಕತ್ವದ CARಗಳು ಎಂದೂ ಕರೆಯಲ್ಪಡುವ ಇವು ಈ ಹಿಂದೆ ಬೇರೊಬ್ಬರ ಒಡೆತನದಲ್ಲಿದ್ದ ವಾಹನಗಳಾಗಿವೆ. ಈ CARಗಳನ್ನು ವ್ಯಾಪಾರ ಮಾಡಿರಬಹುದು, ಗುತ್ತಿಗೆಯ ನಂತರ ಹಿಂದಿರುಗಿಸಿರಬಹುದು ಅಥವಾ ಹಿಂದಿನ ಮಾಲೀಕರು ಮಾರಾಟ ಮಾಡಿರಬಹುದು.
ಇದನ್ನು ಓದಿರಿ : HOW TO REMOVE PIMPLE : ಬೆನ್ನಿನ ಮೇಲೆ ಮೊಡವೆಗಳು ಕಾಣಿಸಿಕೊಳ್ಳಲು ಕಾರಣವೇನು?