Mumbai News:
ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಕ್ರಿಕೆಟ್ ಬಾಲ್ಗಳನ್ನು ಬಳಸಿ ವಾಕ್ಯ ರಚಿಸಿ ಗಿನ್ನೆಸ್ ವಿಶ್ವದಾಖಲೆ ಬರೆದಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ 1975 ರಲ್ಲಿ ಆಡಿದ ಕ್ರೀಡಾಂಗಣದ ಮೊದಲ ಅಂತಾರಾಷ್ಟ್ರೀಯ ಪಂದ್ಯದ ವಾರ್ಷಿಕೋತ್ಸವದಂದು ಈ ದಾಖಲೆಯನ್ನು ರಚಿಸಲಾಯಿತು. 1975 ರ ಜನವರಿ 23 ರಿಂದ 29 ರವರೆಗೆ ಇಲ್ಲಿ ಆಡಲಾದ ಮೊದಲ ಅಂತಾರಾಷ್ಟ್ರೀಯ ಸ್ಮರಣೀಯ ಟೆಸ್ಟ್ ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ಅನ್ನು ಎದುರಿಸಿತ್ತು.
ಇಲ್ಲಿನ WANKHEDE STADIUM 50TH ANNIVERSARY ಆಚರಣೆ ಭಾಗವಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಗುರುವಾರ ಸ್ಟೇಡಿಯಂನಲ್ಲಿ ‘ಅತಿದೊಡ್ಡ ಕ್ರಿಕೆಟ್ ಬಾಲ್ ವಾಕ್ಯ’ ರಚಿಸಿ ಗಿನ್ನೆಸ್ ವಿಶ್ವ ದಾಖಲೆ ಮಾಡುವ ಮೂಲಕ ತನ್ನ ರೋಮಾಂಚಕ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಸೇರಿಸಿದೆ.Fifty Years of Wankhede Stadium ಎಂಬ ಇಂಗ್ಲಿಷ್ ವಾಕ್ಯವನ್ನು 14,505 ಲೆದರ್ ಬಾಲ್ಗಳನ್ನು ಬಳಸಿ ಬರೆಯುವ ಮೂಲಕ ಎಂಸಿಎ ವಿಶಿಷ್ಟ ಗಿನೆಸ್ ದಾಖಲೆಯನ್ನು ಬರೆದಿದೆ.
ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಮತ್ತು ಪದಾಧಿಕಾರಿಗಳು ಮತ್ತು ಅಪೆಕ್ಸ್ ಕೌನ್ಸಿಲ್ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಎಂಸಿಎ ಈ ದಾಖಲೆಯನ್ನು WANKHEDE STADIUM 50TH ANNIVERSARY ಆ ಪಂದ್ಯದಲ್ಲಿ ಶತಕ ಗಳಿಸಿದ ದಿವಂಗತ ಏಕನಾಥ್ ಸೋಲ್ಕರ್ ಮತ್ತು ಕ್ರೀಡೆಗೆ ಅಸಾಧಾರಣ ಕೊಡುಗೆಗಳನ್ನು ನೀಡಿದ ಮುಂಬೈನ ಇತರ ಅಗಲಿದ ಆಟಗಾರರಿಗೆ ಅರ್ಪಿಸಿದೆ.
The number of leather balls used for each word is as follows:
- FIFTY – 1902
- YEARS – 2831
- OF – 1066
- WANKHEDE – 4990
- STADIUM – 3672
- FULL STOP (.) – 44
- TOTAL – 14,505.
ಈ ದಾಖಲೆಯನ್ನು ಸಾಧಿಸಲು ಬಳಸಿದ ಚೆಂಡುಗಳನ್ನು ನಗರದ ಶಾಲೆ, ಕ್ಲಬ್ ಗಳು ಮತ್ತು ಎನ್ಜಿಒಗಳ ಉದಯೋನ್ಮುಖ ಕ್ರಿಕೆಟಿಗರಿಗೆ ನೀಡಲಾಗುವುದು ಎಂದು ಎಂಸಿಎ ಹೇಳಿದೆ. “ಮುಂಬೈ ಕ್ರಿಕೆಟ್ ಕ್ರೀಡೆಗೆ ಗಮನಾರ್ಹ ಕೊಡುಗೆ ನೀಡಿದೆ ಮತ್ತು ಈ ನಗರವು ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಈ ನಗರವು ಜಗತ್ತು ಕಂಡ ಕೆಲವು ಶ್ರೇಷ್ಠ ಕ್ರಿಕೆಟಿಗರನ್ನು ನೀಡಿದೆ. ವಾಖೆಡೆ ಕ್ರೀಡಾಂಗಣವು ಮುಂಬೈನ ಹೆಮ್ಮೆಯಾಗಿದೆ ಮತ್ತು ಅಸಂಖ್ಯಾತ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ.
WANKHEDE STADIUM 50TH ANNIVERSARY ಈ ಗಿನ್ನೆಸ್ ವಿಶ್ವ ದಾಖಲೆಯು ಮುಂಬೈ ಕ್ರಿಕೆಟ್ನ ಉತ್ಸಾಹ, ಪರಂಪರೆ ಮತ್ತು ಶ್ರೇಷ್ಠತೆಯ ನಿರಂತರ ಅನ್ವೇಷಣೆಯ ಪ್ರತಿಬಿಂಬವಾಗಿದೆ. ಮುಂಬೈನ ಕ್ರಿಕೆಟ್ ಪರಂಪರೆಗೆ ಕೊಡುಗೆ ನೀಡಿದ ಎಲ್ಲಾ ಆಟಗಾರರು, ಅಧಿಕಾರಿಗಳು ಮತ್ತು ಅಪ್ರತಿಮ ಹೀರೋಗಳಿಗೆ ಇದು ವಿಶೇಷ ಗೌರವವಾಗಿದೆ” ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಅಜಿಂಕ್ಯ ನಾಯಕ್ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿರಿ : USED CAR SALES : 2030ರ ವೇಳೆಗೆ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆ 10.8 ಮಿಲಿಯನ್ಗೆ ಬೆಳೆಯುವ ನಿರೀಕ್ಷೆ