spot_img
spot_img

VERTICAL LIFT RAILWAY BRIDGE : ಆಧುನಿಕ ಇಂಜಿನಿಯರಿಂಗ್ನ ಅದ್ಭುತ ‘ಪಂಬನ್ ಸೇತುವೆ’

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Hyderabad News:

ನೀರಿನ ಮೇಲಿನ ಅದ್ಭುತ ಮತ್ತು ವರ್ಟಿಕಲ್​​- ಲಿಫ್ಟ್​ ರೈಲ್ವೆ ಟ್ರ್ಯಾಕ್​ ಹೊಂದಿರುವ ಪಂಬನ್​ ಸೇತುವೆಯ ವಿಶಿಷ್ಟ ಮಾಹಿತಿ, ಅತ್ಯಾಧುನಿಕ ತಂತ್ರಜ್ಞಾನ ಇಲ್ಲಿ ಮೈದಾಳಿದೆ ಎಂದು ಯೋಜನೆಯ ಉಸ್ತುವಾರಿ ವಹಿಸಿರುವ ತೆಲುಗು ಭಾಷಿಕ ಎಂಜಿನಿಯರ್ ನಡುಪುರ್ ವೆಂಕಟ ಚಕ್ರಧರ್ ಅವರು ಹೊಗಳಿದ್ದಾರೆ. ಬಂಗಾಳಕೊಲ್ಲಿ ಸಮುದ್ರದಲ್ಲಿರುವ ರಾಮೇಶ್ವರಂ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ನೂತನ ಪಂಬನ್​ ಸೇತುವೆ ‘ಆಧುನಿಕ ಎಂಜಿನಿಯರಿಂಗ್​​ನ ಅದ್ಭುತ’.

ಪಂಬನ್​ ಸೇತುವೆಯ ಬಗ್ಗೆ ಮಾತನಾಡಿದ ಅವರು, ಇದು ಭಾರತದ ಮೊದಲ ವರ್ಟಿಕಲ್ ​- ಲಿಫ್ಟ್ ರೈಲ್ವೆ ಸೇತುವೆಯಾಗಿದೆ. ಕೊನೆಯ ಭೂಪ್ರದೇಶವಾದ ತಮಿಳುನಾಡಿನ ಮಂಟಪದಿಂದ ಬಂಗಾಳ ಕೊಲ್ಲಿಯಲ್ಲಿರುವ ರಾಮೇಶ್ವರಂ ದ್ವೀಪಕ್ಕೆ ಸಂಪರ್ಕ ಕಲ್ಪಿಸುತ್ತದೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಇದು ವಿಶೇಷ ಕೊಡುಗೆ ಎಂದು ಹೇಳಿದ್ದಾರೆ.

Lift Span Special:

2.08 ಕಿಮೀ ಉದ್ದದ ಈ ಸೇತುವೆಯ ವಿಶೇಷವೆಂದರೆ ಲಿಫ್ಟ್​ ಸ್ಪ್ಯಾನ್​​. ಇದು 72.5 ಮೀಟರ್ ಉದ್ದ ಮತ್ತು 660 ಟನ್ ತೂಕವಿದೆ. ಇದನ್ನು ಮೇಲೆತ್ತ್ತುವ ಮೂಲಕ ಸಮುದ್ರದಲ್ಲಿ ತೆರಳುವ ಹಡಗುಗಳಿಗೆ ಕೆಳಗೆ ಹಾದುಹೋಗಲು ದಾರಿ ಮಾಡಿಕೊಡುತ್ತದೆ. ಇದು ಆಟೋಮೇಟಿಕ್​ ತಂತ್ರಜ್ಞಾನವನ್ನು ಹೊಂದಿದೆ.

ಬಳಿಕ ಅದನ್ನು ಮತ್ತೆ ರೈಲ್ವೆ ಟ್ರ್ಯಾಕ್​ಗೆ ಅಳವಡಿಸಿ ರೈಲು ಸಂಚಾರ ನಡೆಸಬಹುದು. ಇದು ಹೆಚ್ಚಿನ ಭಾರವನ್ನು ತಡೆಯುವ ಶಕ್ತಿ ಹೊಂದಿದೆ. ಈ ಲಿಫ್ಟ್​​ ನಿರ್ಮಾಣಕ್ಕೆ ಐದು ತಿಂಗಳು ಸಮಯ ವ್ಯಯಿಸಲಾಗಿದೆ. ಭೂಭಾಗದಿಂದ 600 ಮೀಟರ್​​ ದೂರದಲ್ಲಿ ಅದನ್ನು ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Corrosion Prevention:

ಸೇತುವೆಗೆ ಸ್ಟೇನ್‌ಲೆಸ್ ಸ್ಟೀಲ್, ಫೈಬರ್-ರೀನ್‌ಫೋರ್ಸ್ಡ್ ಪ್ಲ್ಯಾಸ್ಟಿಕ್ (ಎಫ್‌ಆರ್‌ಪಿ) ಅನ್ನು ಬಳಸಲಾಗಿದೆ. ಇದು ರೈಲ್ವೆ ಟ್ರ್ಯಾಕ್‌ ಮತ್ತು ಪಿಲ್ಲರ್​​ಗಳಿಗೆ ಸಮುದ್ರ ನೀರಿನಿಂದ ಉತ್ಪತ್ತಿಯಾಗುವ ಉಪ್ಪು ಹೆಪ್ಪುಗಟ್ಟದಂತೆ ತಡೆಯುತ್ತದೆ ಎಂದಿದ್ದಾರೆ.  ಪಂಬನ್‌ ಸೇತುವೆ ನೀರಿನಲ್ಲಿ ನಿರ್ಮಾಣವಾದ್ದರಿಂದ ತುಕ್ಕು ಅದರ ಪಿಲ್ಲರ್​ಗಳು ತುಕ್ಕು ಹಿಡಿಯದಂತೆ, ಪಾಲಿಸಿಲೋಕ್ಸೇನ್ ಬಣ್ಣವನ್ನು ಮೂರು ಪದರಗಳಲ್ಲಿ ಬಳಸಲಾಗಿದೆ. ಇದರಿಂದ ಉಕ್ಕು ತುಕ್ಕು ಹಿಡಿಯದಂತೆ ಕಾಪಾಡುತ್ತದೆ. ಸೇತುವೆಯು 100 ವರ್ಷಗಳವರೆಗೆ ಬಾಳಿಕೆ ಬರುತ್ತದೆ ಎಂದು ವೆಂಕಟ ಚಕ್ರಧರ್ ಮಾಹಿತಿ ಹಂಚಿಕೊಂಡಿದ್ದಾರೆ.

Hazard Warning Sensor:

ಸೇತುವೆಯು SCADA ಸೆನ್ಸಾರ್​​ಗಳನ್ನು ಹೊಂದಿದೆ. ಇದರಿಂದ ಗಾಳಿಯ ವೇಗ ಪತ್ತೆ, ಸಮಸ್ಯೆ ಕಂಡುಬಂದಲ್ಲಿ ರೈಲನ್ನು ಸ್ವಯಂಚಾಲಿತವಾಗಿ ನಿಲ್ಲಿಸಬಹುದು. ವರ್ಟಿಕಲ್- ಲಿಫ್ಟ್ ತಂತ್ರಜ್ಞಾನವನ್ನು ಸ್ಪೇನ್‌ನಿಂದ ಪಡೆದುಕೊಳ್ಳಲಾಗಿದೆ. ಉಳಿದ ಸೇತುವೆಯು ಸ್ವದೇಶಿ ತಾಂತ್ರಿಕತೆಯಿಂದ ನಿರ್ಮಾಣವಾಗಿದೆ. ಇದು ಅಂತಾರಾಷ್ಟ್ರೀಯ ಮತ್ತು ಸ್ವದೇಶಿ ಎಂಜಿನಿಯರಿಂಗ್​​ನ ಮಿಶ್ರಣವಾಗಿದೆ ಎಂದು ಚಕ್ರಧರ್​ ತಿಳಿಸಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

IPL 2025 RCB CAPTAIN:RCB ಮುಂದಿನ ನಾಯಕ ಯಾರು ಗೊತ್ತಾ?

IPL 2025 RQB Captain News: ಮಾರ್ಚ್​,21 ರಿಂದ ಚುಟುಕು ಕ್ರಿಕೆಟ್​ ಹಬ್ಬ ಪ್ರಾರಂಭವಾಗಲಿದ್ದು ಎರಡು ತಿಂಗಳು ಕಾಲ ನಡೆಯಲಿದೆ.ಐಸಿಸಿ ಚಾಂಪಿಯನ್ಸ್​ ಟ್ರೋಫಿ ಮುಗಿದ ಬೆನ್ನಲ್ಲೆ...

MAHA KUMBH MELA TOUR PACKAGE : ಎಚ್ಚರ.. ಎಚ್ಚರ… ಮಹಾ ಕುಂಭಮೇಳದ ಪ್ರವಾಸದ ಪ್ಯಾಕೇಜ್ ಹೆಸರಿನಲ್ಲಿ ವಂಚನೆ

Bangalore News: MAHA KUMBH MELA TOUR PACKAGE ಯಾತ್ರಿಗಳ ಈ ಆಸೆಯನ್ನೇ ಬಂಡವಾಳ ಮಾಡಿಕೊಂಡಿರುವವರು ಇದೀಗ ವಂಚನೆಗೆ ಇಳಿದಿದ್ದಾರೆ. ಈ ಹಿನ್ನೆಲೆ ಪ್ರಯಾಗ್​ರಾಜ್​ ಪ್ರವಾಸಕ್ಕೆ...

BSNL RS 99 PLAN : ಕೇವಲ 99 ರೂ.ಗೆ ಅನ್ಲಿಮಿಟೆಡ್ ಕಾಲಿಂಗ್ ಪ್ಲಾನ್ ತಂದ ಬಿಎಸ್ಎನ್ಎಲ್!

BSNL 99 Plan: ಬಿಎಸ್​ಎನ್​ಎಲ್​ ತಮ್ಮ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಈ ಆಫರ್​ ಎರಡು ಸಿಮ್‌ಗಳನ್ನು ಬಳಸುವ ಗ್ರಾಹಕರಿಗೆ ಉಪಯುಕ್ತ. ಭಾರತ್ ಸಂಚಾರ್ ನಿಗಮ್...

WORLD CANCER DAY : ಶಿವಣ್ಣ To ಸಂಜಯ್ ದತ್ – ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು

Shivanna News: ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಇತ್ತೀಚೆಗಷ್ಟೇ ಕ್ಯಾನ್ಸರ್​​ ಗೆದ್ದು ಬಂದಿದ್ದಾರೆ. 2024ರ ಡಿಸೆಂಬರ್ 24ರಂದು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಸ್ಯಾಂಡಲ್​ವುಡ್​ನ ಖ್ಯಾತ ನಟ, ಅಲ್ಲೇ ಕೆಲ...