spot_img
spot_img

ಹ್ಯಾಂಡಲ್ ಮಾಡೋದು ನಮ್ಗೂ ಗೊತ್ತಿದೆ ; ಗೃಹ ಸಚಿವ ಡಾ.ಜಿ ಪರಮೇಶ್ವರ್ ಕಿಡಿಕಾರಿದ್ದಾರೆ.!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಮಂಡ್ಯದ ನಾಗಮಂಗಲ ಘಟನೆಯನ್ನು ರಾಜಕೀಯ ಮಾಡಬೇಡಿ ಎಂದಿದ್ದರೂ ವಿಪಕ್ಷದವರು ರಾಜಕೀಯ ಮಾಡ್ತಿದ್ದಾರೆ. ಮಾಡಲಿ, ಅದನ್ನು ಹ್ಯಾಂಡಲ್ ಮಾಡೋದು ನಮ್ಗೂ ಗೊತ್ತಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಕಿಡಿಕಾರಿದ್ದಾರೆ.

ನಾಗಮಂಗಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು.. ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಹಿರಿಯ ಅಧಿಕಾರಿಗಳು, ಡಿಜಿಯವರು, ಎಡಿಜಿ ಲಾ ಅಂಡ್ ಆರ್ಡರ್ ಇವರೆಲ್ಲ ಸೇರಿ ಸಭೆ ಮಾಡಿ ಸೂಚನೆ ಕೊಟ್ಟಿರುತ್ತಾರೆ. ಸರ್ಕಾರದಿಂದ ನಾವು ಕೂಡ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಸೂಚಿಸಿರುತ್ತೇವೆ.

ಇದನ್ನೂ ಓದಿ:ಬೆಳ್ಳುಳ್ಳಿ ತಿಂದರೆ ಕ್ಯಾನ್ಸರ್ ರೋಗ ಬರುತ್ತದೆ. ಶಾಕಿಂಗ್ ನ್ಯೂಸ್ !

ನಾಗಮಂಗಲದಲ್ಲಿ ಕೆಎಸ್​ಆರ್​ಪಿ ವ್ಯಾನ್ ಸಮೇತ ಇದ್ದರು. ಘಟನೆ ನಡೆದು ಅರ್ಧ ಗಂಟೆಯಲ್ಲಿ ಎಸ್​ಪಿ, ಐಜಿಯವರು ಸ್ಥಳಕ್ಕೆ ಬಂದು ತಕ್ಷಣ ಗಲಾಟೆ ನಿಲ್ಲಿಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದ್ದು ವರದಿ ಕೊಡಿ ಎಂದು ಕೇಳಿದ್ದೇವೆ ಎಂದರು.

ನಾಗಮಂಗಲ ಈಗ ಕಂಟ್ರೋಲ್​ನಲ್ಲಿದ್ದು ಮಾನಿಟರ್ ಮಾಡ್ತಿದ್ದಾರೆ. ಪೊಲೀಸರು ಅಲ್ಲಿ ಕ್ಯಾಂಪ್ ಮಾಡಿದ್ದಾರೆ. ಶಾಂತಿಯಿಂದ ಇದ್ದು ಶಾಂತಿ ಸಭೆ ಕೂಡ ಮಾಡ್ತಿದ್ದಾರೆ. ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಲಾಗಿದೆ. ಘಟನೆಗೆ ಕಾರಣಗಳೇನು?

ಎಂಬುದರ ಕುರಿತು ವರದಿ ನೀಡುವಂತೆ ಈಗಾಗಲೇ ಸೂಚಿಸಿದ್ದೇನೆ‌. ವರದಿ ಬಂದ ನಂತರ ಕಾನೂನು ಚೌಕಟ್ಟಿನಲ್ಲಿ ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ. ಕಾನೂನಿಗಿಂತ ಯಾರು ದೊಡ್ಡವರಲ್ಲ. ಗಣೇಶನ ಹಬ್ಬ ಸೇರಿದಂತೆ ಬೇರೆ ಹಬ್ಬಗಳಲ್ಲಿ ಗೊಂದಲ ಸೃಷ್ಟಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಂತವರನ್ನು ಬಿಡಲ್ಲ. ಕಾನೂನು ಪ್ರಕಾರ ಅವರ ಮೇಲೆ ಕಟ್ಟುನಿಟ್ಟಾಗಿ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಆಕಸ್ಮಿಕವಾಗಿ ಗೃಹ ಸಚಿವರಾಗಿ ಆಯ್ಕೆಯಾಗಿದ್ದಾರೆ ಎನ್ನುವ ಬಿಜೆಪಿ ನಾಕಯಕ ಹೇಳಿಕೆಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಗರಂ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಶಬ್ಧಗಳನ್ನು ಟ್ವಿಸ್ಟ್ ಮಾಡಿ ಹೇಳುವುದಕ್ಕೆ ಬರಲ್ಲ.

ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ; ಪರೀಕ್ಷೆ ಇಲ್ಲದೆ, 3 ಸಾವಿರಕ್ಕೂ ಅಧಿಕ ಜಾಬ್ಸ್ ಲಭ್ಯ..!

ನಿಮಗೆ ಬೇಕಾದಂಗೆ ಟ್ವಸ್ಟ್ ಮಾಡಿಕೊಂಡರೆ ಏನು ಮಾಡೋಕೆ ಆಗಲ್ಲ. ನಮಗೆ ಜವಾಬ್ದಾರಿ ಇದೆ. ರಾಜ್ಯದಲ್ಲಿ ಜಾವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಇವರ ಸರ್ಟಿಫಿಕೆಟ್​  ಬೇಕಾಗಿಲ್ಲ. ಘಟನೆಯನ್ನು ಯಾರಾದರೂ ಸಮರ್ಥನೆ ಮಾಡುತ್ತಾರಾ?.

ಈಗಾಗಲೇ 52 ಜನರನ್ನು ಬಂಧಿಸಲಾಗಿದೆ. ಕನ್ನಡ ಭಾಷೆಯನ್ನು ಟ್ವಿಸ್ಟ್​ ಮಾಡಿ, ಟರ್ನ್ ಮಾಡಿ, ಸಣ್ಣದು ಅಂದ್ರು, ದೊಡ್ಡದು ಅಂದ್ರು ವಿಪಕ್ಷದವರು ಹೇಳಲಿ. ನನಗೂ ಮಾತನಾಡೋಕೆ ಬರುತ್ತೆ, ನನಗೂ ಗೊತ್ತಿದೆ. ವಿರೋಧ ಪಕ್ಷದವರು ಇದರಲ್ಲಿ ರಾಜಕೀಯ ಮಾಡಬೇಡಿ ಎಂದು ಈಗಾಗಲೇ ಹೇಳಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
spot_img

Related articles

ಮಣಿಪುರದಲ್ಲಿ ಇನ್ನೂ ಮೂರು ದಿನ ಮೊಬೈಲ್ ಇಂಟರ್ನೆಟ್ ನಿಷೇಧ

ಇಂಫಾಲ್: ನವೆಂಬರ್ 16 ರಂದು, ಸರ್ಕಾರ, ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಿತ್ತು. ಮಣಿಪುರ ಸರ್ಕಾರವು ಬುಧವಾರ ಮೊಬೈಲ್ ಇಂಟರ್ನೆಟ್ ಸೇವೆ ಅಮಾನತು ಆದೇಶವನ್ನು...

ಬಿಗ್ ಬಾಸ್ ಮನೆಯಲ್ಲಿ ಒಂದೇ ಟಾಸ್ಕ್​ನಲ್ಲೇ ವೀಕ್ಷಕರ ಹೃದಯ ಗೆದ್ದ ಶೋಭಾ ಶೆಟ್ಟಿ

ಕನ್ನಡದ ಬಿಗ್​ಬಾಸ್​ ಸೀಸನ್​ 11ರ ಆಟದ ಕಿಚ್ಚು ಜೋರಾಗಿ ಹೊತ್ತಿ ಉರಿಯುತ್ತಿದೆ. ಕನ್ನಡ ಬಿಗ್​ಬಾಸ್​ನಲ್ಲಿ​ ಇತಿಹಾಸದಲ್ಲೇ ಬಂದ ಮೊದಲ ದಿನನೇ ಯಾವ ವೈಲ್ಡ್​ ಕಾರ್ಡ್...

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶೇ. 20ರಷ್ಟು ಸೇವಾ ಶುಲ್ಕ ಹೆಚ್ಚಳ

ಮಂಗಳೂರು : ಶುಲ್ಕ ಹೆಚ್ಚಳ ಮಾಡುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಾದ ಪರಿಸ್ಥಿತಿ ಸರ್ಕಾರಕ್ಕೆ ಎದುರಾಗಿಲ್ಲ. ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನ ಸರ್ಕಾರ ತೆಗೆದುಕೊಳ್ಳುವುದಿಲ್ಲ...

20 ಬೋಗಿಗಳ ಹೊಸ ವಂದೇ ಭಾರತ್‌ ರೈಲು; ಕರ್ನಾಟಕದ ಈ ಮಾರ್ಗದಲ್ಲಿ ಸಂಚಾರ

ಬೆಂಗಳೂರು: ಬೇಡಿಕೆ ಹಿನ್ನೆಲೆ ತಿರುವನಂತಪುರ - ಮಂಗಳೂರು - ತಿರುವನಂತಪುರ ಮಾರ್ಗದಲ್ಲಿ 20 ಬೋಗಿಯ ವಂದೇ ಭಾರತ್‌ ರೈಲು ಓಡಿಸಲು ನಿರ್ಧರಿಸಲಾಗಿದೆ. ಮಂಗಳೂರು-ತಿರುವನಂತಪುರ ವಂದೇ ಭಾರತ್‌...