‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಈ ವಾರ ಜೋಡಿ ಟಾಸ್ಕ್ ಚಾಲ್ತಿಯಲ್ಲಿತ್ತು. ಶಿಶಿರ್ಗೆ ಚೈತ್ರಾ ಕುಂದಾಪುರ ಜೋಡಿಯಾಗಿದ್ದರು.
ನಾಮಿನೇಷನ್ ವೇಳೆ ತಮ್ಮ ಜೋಡಿ ಚೈತ್ರಾ ಕುಂದಾಪುರ ಅವರನ್ನ ಸೇಫ್ ಮಾಡಿದ ಶಿಶಿರ್ ತಾವು ನಾಮಿನೇಟ್ ಆದರು. ಆನಂತರ ಟ್ರಂಪ್ ಕಾರ್ಡ್ ಉಪಯೋಗಿಸಿ, ತ್ರಿವಿಕ್ರಮ್ ಜೊತೆ ಜೋಡಿಯಾಗಲು ಮತ್ತು ಶಿಶಿರ್ಗೆ ಕೈಕೊಡಲು ಚೈತ್ರಾ ಕುಂದಾಪುರ ಮುಂದಾಗಿದ್ದರು. ಇದರಿಂದ ಶಿಶಿರ್ ಕೆರಳಿದ್ದರು.
ಶಿಶಿರ್ ನಂಬಿಕೆಗೆ ದ್ರೋಹ ಆಗಿತ್ತು. ಈಗ ಇದೇ ಟಾಪಿಕ್ ಬಗ್ಗೆ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಪಂಚಾಯತಿ ನಡೆಸುತ್ತಾರಾ?
‘’ಚಾಲೆಂಜ್ ಆಗಿ ಬಂದಾಗ ತುಂಬಾ ಮುಖ್ಯ ಆಗೋದು ನಂಬಿಕೆ, ನಂಬಿಕೆ ಇಟ್ಟು ಸೋತವರು ಇದ್ದಾರೆ, ನಂಬಿಕೆಗೆ ಮೋಸ ಮಾಡಿದವರು ಇದ್ದಾರೆ’’ ಅಂತ ಸುದೀಪ್ ಹೇಳಿರೋದು ಪ್ರೋಮೋದಲ್ಲಿದೆ. ಹಾಗಾದ್ರೆ, ಇಂದಿನ ಸಂಚಿಕೆಯಲ್ಲಿ ಯಾರಿಗೆ ಕಾದಿದೆ ಸ್ಪೆಷಲ್ ಕ್ಲಾಸ್? ಕಾದುನೋಡಬೇಕಿದೆ.