ಯಾವುದೇ ದೇಶಕ್ಕೆ ಹೋಗಿ ನೆಲೆಸಲೆಂದೊ ಅಥವಾ ವಿದ್ಯಾಭ್ಯಾಸಕ್ಕೆಂದು ಹೋದಾಗ ಅಲ್ಲಿ ವಾಹನ ಓಡಿಸಬೇಕಾದಲ್ಲಿ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾಗುತ್ತದೆ. ಅದಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿ ಪಡೆಯಬೇಕಾಗುತ್ತದೆ. ಆದ್ರೆ ವಿಶ್ವದ ಈ 7 ರಾಷ್ಟ್ರಗಳಲ್ಲಿ ನೀವು ಭಾರತದ ಡ್ರೈವಿಂಗ್ ಲೈಸನ್ಸ್ ಹೊಂದಿದ್ದರೂ ಕೂಡ ಅಲ್ಲಿ ಆರಾಮಾಗಿ ವಾಹನ ಚಲಾಯಿಸಬಹುದು ಆದ್ರೆ ಕೆಲವೊಂದಿಷ್ಟು ಷರತ್ತುಗಳಿರುತ್ತವೆ ಹಾಗೂ ನೀತಿ ನಿಯಮಗಳು ಇವೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ನೀವು ಭಾರತದ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ, ಅಮೆರಿಕಾದ ಐಷಾರಾಮಿ ರಸ್ತೆಗಳಲ್ಲಿ ನೀವು ಯಾವುದೇ ಭಯವಿಲ್ಲದೇ ವಾಹನಗಳನ್ನು ಓಡಿಸಬಹುದು. ಇದಕ್ಕೆ ಅಮೆರಿಕಾದಲ್ಲಿ ಪರವಾನಿಗೆ ಇದೆ. ಆದ್ರೆ ನೀವು ಅಮೆರಿಕಾಗೆ ಪ್ರವೇಶ ಪಡೆದ ದಿನದಿಂದ ಒಂದು ವರ್ಷದವರೆಗೆ ಮಾತ್ರ ಭಾರತದ ಡ್ರೈವಿಂಗ್ ಲೈಸೆನ್ಸ್ನೊಂದಿಗೆ ವಾಹನ ಚಲಾಯಿಸಬಹುದು.
ಅದಾದ ಮೇಲೆಯೂ ಅಲ್ಲಿ ವಾಹನ ಓಡಿಸಬೇಕು ಅಂದ್ರೆ ನೀವು ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ನ್ನು ಹೊಂದಿರಲೇಬೇಕು.
ಆಸ್ಟ್ರೇಲಿಯಾದಲ್ಲಿಯೂ ಕೂಡ ನೀವು ಕೆಲವು ನಿರ್ಧಿಷ್ಟ ರಾಜ್ಯಗಳಲ್ಲಿ ಮಾತ್ರ ಭಾರತದ ಡ್ರೈವಿಂಗ್ ಲೈಸೆನ್ಸ್ನಿಂದಲೇ ವಾಹನ ಚಲಾಯಿಸಬಹುದು. ಇಲ್ಲಿಯೂ ಕೂಡ ಅಷ್ಟೇ ಆಸ್ಟ್ರೇಲಿಯಾಗೆ ಪ್ರವೇಶ ಪಡೆದ ಒಂದು ವರ್ಷದವರೆಗೆ ಮಾತ್ರ ಪರವಾನಿಗೆ ಇದೆ.
ನ್ಯೂ ಸೌತ್ ವೇಲ್ಸ್, ಕ್ವೀನ್ಸ್ಲ್ಯಾಂಡ್, ದಕ್ಷಿಣ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯಾದ ರಾಜಧಾನಿ ಸಿಡ್ನಿಯಲ್ಲಿ ನೀವು ಭಾರತದ ವಾಹನ ಚಾಲನಾ ಪರವಾನಿಗೆ ಪತ್ರದ ಮೂಲಕ ಒಂದು ವರ್ಷದವರೆಗೆ ವಾಹವನ್ನು ಓಡಿಸಬಹುದು.
ಕೆನಾಡದಲ್ಲಿಯೂ ಭಾರತದ ಡ್ರೈವಿಂಗ್ ಲೈಸೆನ್ಸ್ ಮೂಲಕವೇ ನೀವು ಅಲ್ಲಿನ ರಸ್ತೆಗಳಲ್ಲಿ ವಾಹನಗಳನ್ನು ಓಡಿಸಬಹುದು. ಆದ್ರೆ ಅದು 60 ದಿನಗಳು ಮಾತ್ರ. ಅಲ್ಲಿ 60 ದಿನಗಳವರೆಗೆ ಮಾತ್ರ ಭಾರತೀಯರಿಗೆ ತಮ್ಮದೇ ದೇಶದ ಡ್ರೈವಿಂಗ್ ಲೈಸೆನ್ಸ್ ಮೂಲಕ ವಾಹವನ್ನು ಚಲಾಯಿಸಬಹುದು.
ಯುನೈಟೆಡ್ ಕಿಂಗ್ಡಮ್ ಕೂಡ ಭಾರತೀಯರಿಗೆ ಯಎಸ್ಎ ಮಾದರಿಯಲ್ಲಿಯೇ ವಾಹನ ಚಲಾಯಿಸಲು ಭಾರತೀಯ ಡ್ರೈವಿಂಗ್ ಲೈಸನ್ಸ್ಗೆ ಪರವಾನಿಗೆ ನೀಡುತ್ತದೆ. ಅದು ಕೂಡ ಒಂದು ವರ್ಷದವರೆಗೆ ಮಾತ್ರ. ಇಂಗ್ಲೆಂಡ್, ವೇಲ್ಸ್, ಸ್ಕಾಟ್ಲ್ಯಾಂಡ್ ಹಾಗೂ ನಾರ್ತ್ ಐರ್ಲೆಂಡ್ನಲ್ಲಿ ಭಾರತೀಯ ಡ್ರೈವಿಂಗ್ ಲೈಸನ್ಸ್ ಇದ್ದರೆ ಸುಮಾರು ಒಂದು ವರ್ಷಗಳ ಕಾಲ ನಾವು ನಿರಾತಂಕವಾಗಿ ವಾಹನ ಚಲಾಯಿಸಬಹುದು.
ನ್ಯೂಜಿಲೆಂಡ್ನಲ್ಲೂ ಕೂಡ ಈ ಒಂದು ವ್ಯವಸ್ಥೆ ಇದೆ. ಅದು ಕೂಡ ಒಂದು ವರ್ಷ, ನಾವು ನ್ಯೂಜಿಲೆಂಡ್ಗೆ ಪ್ರವೇಶ ಪಡೆದ ದಿನದಿಂದ ಒಂದು ವರ್ಷದವರೆಗೆ ನ್ಯೂಜಿಲೆಂಡ್ನ ಯಾವುದೇ ಸಿಟಿಯಲ್ಲಿಯೂ ಕೂಡ ಭಾರತದ ಡ್ರೈವಿಂಗ್ ಲೈಸೆನ್ಸ್ನಿಂದ ವಾಹನ ಚಲಾಯಿಸಬಹುದು.
ಸ್ವಿಟ್ಜರ್ಲೆಂಡ್ ಇದು ಪ್ರವಾಸಿಗರ ನೆಚ್ಚಿನ ತಾಣ.ಅನೇಕ ಭಾರತೀಯರು ಮಧುಚಂದ್ರಕ್ಕೆ ಅಲ್ಲಿಗೆ ಹೋಗಲು ಬಯಸುತ್ತಾರೆ. ಇಲ್ಲಿಗೆ ನೀವು ಭೇಟಿ ಕೊಟ್ಟಾಗ ಅಥವಾ ಆ ದೇಶಕ್ಕೆ ಹೋದಾಗ ಸುಮಾರು ಒಂದು ವರ್ಷಗಳ ಕಾಲ ನೀವು ಭಾರತದ ಡ್ರೈವಿಂಗ್ ಲೈಸೆನ್ಸ್ ಬಳಸಿ ಅಲ್ಲಿ ಕಾರ್, ಬೈಕ್ಗಳನ್ನು ಬಾಡಿಗೆಗೆ ಪಡೆದು ಓಡಿಸಬಹುದು.
ಜರ್ಮನ್ನಲ್ಲಿಯೂ ಕೂಡ ಈ ಒಂದು ವ್ಯವಸ್ಥೆ ಇದೆ. ಭಾರತೀಯರಿಗೆ ಇಲ್ಲಿಯ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಅಲ್ಲಿ ಒಂದು ವರ್ಷಗಳ ಕಾಲ ಅದೇ ಡ್ರೈವಿಂಗ್ ಲೈಸನ್ಸ್ನಿಂದ ವಾಹನ ಓಡಿಸಲು ಅವಕಾಶ ನೀಡಲಾಗಿದೆ.