spot_img
spot_img

ಶಾರ್ಟ್​ ಕ್ರಿಯೇಟರ್ಸ್​ಗೆ ಅದ್ಭುತ ಫೀಚರ್​ ಪರಿಚಯಿಸುತ್ತಿದೆ ಯೂಟ್ಯೂಬ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

YouTube New Feature: ಯೂಟ್ಯೂಬ್​ ತನ್ನ ಶಾರ್ಟ್​ ಕ್ರಿಯೆಟರ್ಸ್​ಗೆ ಹೊಸ ಫೀಚರ್​ ಅನ್ನು ಹೊರ ತರಲು ಕಾರ್ಯನಿರ್ವಹಿಸುತ್ತಿದೆ. ಕ್ರಿಯೆಟರ್ಸ್​ ಎಐ ಸಾಧನವನ್ನು ಬಳಸಿಕೊಂಡು ತಮಗೆ ಇಷ್ಟವಾದ ಹಾಡನ್ನು ಮರು ರಚನೆ​ ಮಾಡಬಹುದಾಗಿದೆ.

ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್​ ಪ್ಲಾಟ್​ಫಾರ್ಮ್​ ಯೂಟ್ಯೂಬ್​ ತನ್ನ ಬಳಕೆದಾರರಿಗೆ ಕ್ರಿಯೇಟಿವ್​ ಸ್ವಾತಂತ್ರ್ಯವನ್ನು ಹೆಚ್ಚಿಸಲು ಹೊಸ ಫೀಚರ್​ ಬಗ್ಗೆ ಕೆಲಸ ಮಾಡುತ್ತಲೇ ಇರುತ್ತಿದೆ.

ಈ ಕ್ರಮದಲ್ಲಿ ಕಂಪನಿ ಹೊಸದೊಂದು ಫೀಚರ್​ ಹೊರ ತರಲು ಕಾರ್ಯ ನಿರ್ವಹಿಸುತ್ತಿದೆ. ಈ ಫೀಚರ್​ ಮ್ಯೂಸಿಕ್​ ರಿಮಿಕ್ಸ್​ಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಯೂಟ್ಯೂಬ್​ ಬಳಕೆದಾರರಿಗೆ ಎಐ ಟೂಲ್​ ಅನ್ನು ಬಳಸಲು ಅವಕಾಶ ಕಲ್ಪಿಸುತ್ತದೆ.

ಯೂಟ್ಯೂಬ್​ ಈ ಫೀಚರ್ ಅನ್ನು​ ಶಾರ್ಟ್​ ಕ್ರಿಯೇಟರ್ಸ್​ಗಾಗಿ ಹೊರತರುತ್ತದೆ. ಇದು ಎಐ ಜನರೇಟೆಡ್​ 30-ಸೆಕೆಂಡ್​ ಸೌಂಡ್​ ಟ್ರ್ಯಾಕ್​ ರಚಿಸಲು ಅನುಮತಿಸುತ್ತಿದೆ.

ಕಂಪನಿಯ ಉಪಕ್ರಮವು ಅದರ ಡ್ರೀಮ್ ಟ್ರ್ಯಾಕ್ ಪ್ರೋಗ್ರಾಂ ಅನ್ನು ಆಧರಿಸಿದೆ. ಇನ್ನು ಇದು ಮ್ಯೂಸಿಕ್​ ರೆಡಿ ಮಾಡುವ ಪ್ರಕ್ರಿಯೆಗೆ ಹೊಸ ರೂಪ ನೀಡಲು ಅಡ್ವಾನ್ಸ್​ ಎಐಗೆ ಇಂಟಿಗ್ರೇಟ್​ ಮಾಡುತ್ತದೆ.

ಈ ಫೀಚರ್​ ಸದ್ಯ ಪ್ರಾಯೋಗಿಕ ಹಂತದಲ್ಲಿದೆ. ಅಲ್ಲಿ ಕ್ರಿಯೇಟರ್ಸ್​ ತಮಗೆ ಬೇಕಾದ ಹಾಡನ್ನು ಆಯ್ಕೆ ಮಾಡಬಹುದು.

ಬಳಿಕ ಅವರು ಆ ಹಾಡನ್ನು ರಿಮಿಕ್ಸ್​ ಮಾಡಲು ಅಥವಾ ಬದಲಾಯಿಸಲು ಎಐ ಸಹಾಯ ಪಡೆಯಬಹುದು. ಅದಕ್ಕೂ ಮುನ್ನ ನೀವು ಆ ಹಾಡನ್ನು ರಿಮಿಕ್ಸ್​ ಮಾಡಲು ಟೆಕ್ಸ್ಟ್​ ಆಧಾರಿತ ಪ್ರಾಂಫ್ಟ್​ ಬಳಸಬೇಕು. ಆಗ ಎಐ ಈ ಟೆಕ್ಸ್ಟ್​ ಆಧಾರಿತ ಪ್ರಾಂಫ್ಟ್​ ಅನ್ನು ಬಳಸಿಕೊಂಡು ಹಾಡನ್ನು ರಿಮಿಕ್ಸ್​ ಮಾಡುತ್ತದೆ. ಆದ್ರೆ ಇದು ಮೂಲ ಹಾಡಿನ ಶೈಲಿಯನ್ನು ಹಾಗೆಯೇ ಉಳಿಸಿಕೊಳ್ಳುತ್ತದೆ.

ಅಷ್ಟೇ ಅಲ್ಲ, ಈ ಹೊಸ ಯೂಟ್ಯೂಬ್ ಫೀಚರ್​ದಿಂದ ನಿಮ್ಮ ಸ್ವಂತ ಆಲೋಚನೆಗಳ ಹಾಡನ್ನು ಸಹ ಇದು ಸಂಯೋಜಿಸುತ್ತದೆ. ನಂತರ ಶಾರ್ಟ್​ ಕ್ರಿಯೇಟರ್ಸ್​ ಈ ಹಾಡಿನ ಸಹಾಯದಿಂದ ತನ್ನ ವಿಡಿಯೋಗಳಿಗೆ ಬ್ಯಾಕ್​ಗ್ರೌಂಡ್​ ಆಗಿ ಬಳಸಬಹುದು.

ರಿಮಿಕ್ಸ್ ಫೀಚರ್​ ಯೂಟ್ಯೂಬ್‌ನ ಡ್ರೀಮ್ ಟ್ರ್ಯಾಕ್‌ನಿಂದ ಚಾಲಿತವಾಗಿದೆ. ಇದು 2023 ರಲ್ಲಿ ಪ್ರಾರಂಭಿಸಲಾದ ಪ್ರೋಗ್ರಾಂ ಮತ್ತು ಗೂಗಲ್‌ನ ಡೀಪ್‌ಮೈಂಡ್ ಎಐ ಮಾದರಿಯಾದ ಲಿರಿಯಾದಲ್ಲಿ ನಿರ್ಮಿಸಲಾಗಿದೆ.

ಲಿರಿಯಾದ ಸುಧಾರಿತ ಸಾಮರ್ಥ್ಯಗಳು ಹೊಸ ಸಂಯೋಜನೆಗಳನ್ನು ರಚಿಸಲು ಟೆಕ್ಸ್ಟ್​ ಇಂಡಿಕೇಟ್ಸ್​ಮತ್ತು ಆಡಿಯೋವನ್ನು ಅರ್ಥೈಸುತ್ತವೆ. ಇದು ಮಾನವ ಇನ್ಪುಟ್ ಮತ್ತು ಯಂತ್ರ-ರಚಿತ ಕಲಾತ್ಮಕತೆಯ ಸಾಮರಸ್ಯದ ಮಿಶ್ರಣವನ್ನು ಅನುಮತಿಸುತ್ತದೆ.

ಇತ್ತೀಚೆಗೆ ಯೂಟ್ಯೂಬ್​ ತನ್ನ ಶಾರ್ಟ್​ ಕ್ರಿಯೇಟರ್ಸ್​ಗೆ ಮೂರು ನಿಮಿಷಗಳವರೆಗಿನ ಶಾರ್ಟ್​ಗಳನ್ನು ಅಪ್‌ಲೋಡ್ ಮಾಡುವ ಅವಕಾಶ ಕಲ್ಪಿಸಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಹೊನ್ನಾವರ ಪಾವಿನಕುರ್ವೆಯಲ್ಲಿ ಸರ್ವ ಋತು ಬಂದರು

ಉತ್ತರ ಕನ್ನಡ: ಕರ್ನಾಟಕ ಜಲಸಾರಿಗೆ ಮಂಡಳಿ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪಾವಿನಕುರ್ವೆಯಲ್ಲಿ ಖಾಸಗಿ ಸಹಭಾಗಿತ್ವದಡಿಯಲ್ಲಿ 14 MTPA ಸಾಮರ್ಥ್ಯದ ಸರ್ವಋತು...

ಸ್ಟೀಲ್ ನಟ್​ಗಳಲ್ಲಿ ಅರಳಿದ ಆದಿಯೋಗಿಯ ವಿಗ್ರಹ : ಉಡುಪಿ ಕಲಾವಿದನ ಕೈಚಳಕ

ಉಡುಪಿ: ಉಡುಪಿಯ ಮಟ್ಟು ಗ್ರಾಮದ ಡಿಪ್ಲೋಮಾ ಪದವೀಧರರೊಬ್ಬರು ಮೈಲ್ಡ್ ಸ್ಟೀಲ್ ನಟ್ಸ್​ಗಳಿಂದ 58 ಕೆ.ಜಿ. ತೂಕದ ಆದಿಯೋಗಿಯ ವಿಗ್ರಹ ತಯಾರಿಸಿ ಇಂಡಿಯನ್ ಬುಕ್ ಆಫ್...

ಭರತನಾಟ್ಯದ 52 ಮುದ್ರೆ 3 ವರ್ಷದ ಮಗು ಪ್ರದರ್ಶನ : ಗಿನ್ನಿಸ್ ದಾಖಲೆ ನಿರ್ಮಾಣ

ಕೇರಳ: ಭರತನಾಟ್ಯದ ಎಲ್ಲ 52 ಮುದ್ರೆಗಳನ್ನು ಪ್ರದರ್ಶಿಸುವ ಮೂಲಕ ಕೇರಳದ 3 ವರ್ಷದ ಪುಟ್ಟ ಮಗುವೊಂದು ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ದಾಖಲೆ ನಿರ್ಮಿಸಿದೆ. "ನನ್ನ...

ಅಂಚೆ ಚೀಟಿ ಸಂಗ್ರಹ : ಗಿನ್ನೆಸ್​ ಬುಕ್​ ಆಫ್​ ರೆಕಾರ್ಡ್ ನಿಮಿಸಿದ ನಿವೃತ್ತ ನೌಕರ

ಉಡುಪಿ: ಕೆಲವೊಮ್ಮೆ ವ್ಯಕ್ತಿಗಳ ಹವ್ಯಾಸವೇ ಅವರನ್ನು ದೊಡ್ಡ ಸಾಧನೆಯತ್ತ ಕೊಂಡೊಯ್ಯುತ್ತದೆ. ಅದರಂತೆ ಕಾಲೇಜೊಂದರ ನಿವೃತ್ತ ಕಚೇರಿ ಸಹಾಯಕ ಡೇನಿಯಲ್​ ಮೊಂತೇರೊ ಅವರು ಅಂಚೆ ಚೀಟಿ...