ಪುತ್ತೂರು: ಧರ್ಮಸ್ಥಳದ ಸ್ವಸಹಾಯ ಗುಂಪು ಮಹಿಳೆಯರ ಪಾಲಿಗೆ ಮತ್ತೊಂದು ಗೃಹಲಕ್ಷ್ಮಿಯಾಗಿದೆ ಎಂದು ಡಾ ಡಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ದೇಶದ ಸ್ವಸಹಾಯ ಗುಂಪುಗಳ ಚರಿತ್ರೆಯಲ್ಲೇ ಅತಿ ದೊಡ್ಡ ಲಾಭಾಂಶ ಎಂಬ ಕೀರ್ತಿ ತನ್ನದಾಗಿಸುವುದರ ಜತೆಗೆ ಬರೋಬ್ಬರಿ 650 ಕೋಟಿ ರೂ.ಗಳನ್ನು 55 ಲಕ್ಷ ಸದಸ್ಯರ ಖಾತೆಗಳಿಗೆ ಏಕಕಾಲದಲ್ಲಿ ಜಮೆ ಮಾಡುವ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹೊಸ ದಾಖಲೆ ನಿರ್ಮಿಸಿದೆ.
1882 ರಲ್ಲಿ ಆರಂಭಗೊಂಡು 42 ವರ್ಷಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಹಳ್ಳಿಗಳನ್ನೂ ಮುಟ್ಟಿರುವ ಯೋಜನೆಯು 6 ಲಕ್ಷ ಬಲಿಷ್ಠ ಸ್ವಸಹಾಯ ಗುಂಪುಗಳನ್ನು ಕಟ್ಟಿ ಬೆಳೆಸಿದ್ದಲ್ಲದೆ, 24,500 ಕೋಟಿ ರೂ. ಸಾಲವನ್ನು ಬ್ಯಾಂಕ್‌ಗಳಿಂದ ಪಡೆದು ಸದಸ್ಯರಿಗೆ ನೀಡುವಲ್ಲಿ ಪ್ರತಿ ಖಾತ್ರಿದಾರನಾಗಿ ನಿಂತಿದೆ.
ಧರ್ಮಸ್ಥಳದಲ್ಲಿ ಗುರುವಾರ ನಡೆದ ಲಾಭಾಂಶ ವಿತರಣೆ ಸಮಾರಂಭದಲ್ಲಿಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಯ್ದ ಗುಂಪುಗಳಿಗೆ ಸಾಂಕೇತಿಕ ಚೆಕ್ ವಿತರಿಸಿದರು.
ಸ್ವೀಕರಿಸಲು ಬಂದ ಸದಸ್ಯೆಯರು ಸ್ಥಳದಲ್ಲೇ ತಮ್ಮ ಮೊಬೈಲ್‌ಗೆ ಬಂದ ಹಣ ಜಮೆಯ ಸಂದೇಶವನ್ನು ಸಚಿವೆಗೆ ತೋರಿಸಿ ಖುಷಿ ಪಟ್ಟರು.
ಮೊಬೈಲ್‌ನ ಸಂದೇಶವನ್ನು ಸ್ವತಃ ಯೋಜನೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ವೇದಿಕೆಯಿಂದಲೇ ಘೋಷಿಸಿದರಲ್ಲದೆ, ಡಿಜಿಟಲ್ ಇಂಡಿಯಾದ ಕ್ರಾಂತಿಕಾರಿ ಬೆಳವಣಿಗೆ ಹೊಂದಿದೆ.
ಧನ್ಯಶ್ರೀ ಸಂಘ ಬೆಳ್ತಂಗಡಿ, ಶ್ರೀನಿಧಿ ಸಂಘ ಕುಂದಾಪುರ, ಶ್ರೀ ಶಂಕರ ಸಂಘ ಹೊಸಪೇಟೆ, ಅಪೂರ್ವ ಸಂಘ ಆನೇಕಲ್, ಅಹದ್ ಸಂಘ ಖಾನಾಪುರ ಮತ್ತು ರೋಶನ್ ಸಂಘ ಹಾಸನ ಇವುಗಳ ಸದಸ್ಯರು ಸಮವಸ್ತ್ರದಲ್ಲಿಬಂದು ಸಚಿವೆಯಿಂದ ಸಾಂಕೇತಿಕ ಚೆಕ್ ಸ್ವೀಕರಿಸಿದರು.
ಹೆಣ್ಮಕ್ಕಳ ನಾಯಕತ್ವ ಹೇಗಿದೆ ಎಂಬುದನ್ನು ತಿಳಿಯಬೇಕಾದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೋಡಬೇಕು ಎಂಬ ಮಾತು ರೂಢಿಗೆ ಬಂದಿದೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಹೇಳಿದ್ದಾರೆ.
ಗ್ರಾಮೀಣ ಆರ್ಥಿಕತೆಯ ಸಬಲೀಕರಣ ಹಾದಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಮ್ಮರವಾಗಿ ಬೆಳೆದಿದೆ. ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಯೋಜನೆಗೆ ಪ್ರತಿ ವರ್ಷ ದಾನ ನೀಡುತ್ತಾರೆ. 6 ಬ್ಯಾಂಕ್‌ಗಳು ಯೋಜನೆಯೊಂದಿಗೆ ಸಹಭಾಗಿತ್ವ ಹೊಂದಿದ್ದು, ಅವೆಲ್ಲಕ್ಕೂ ಯೋಜನೆಯು ಬ್ಯಾಂಕಿಂಗ್ ಪ್ರತಿನಿಧಿ (ಬ್ಯಾಂಕಿಂಗ್ ಕರೆಸ್ಪಾಂಡೆಂಟ್-ಬಿ.ಸಿ.) ಯಾಗಿ ಕೆಲಸ ಮಾಡುತ್ತಿದೆ. ಸದಸ್ಯರಿಗೆ ಬ್ಯಾಂಕ್‌ಗಳು ಸುಲಭವಾಗಿ ಸಾಲ ನೀಡುತ್ತಿದ್ದರೆ, ಅದಕ್ಕೆ ಯೋಜನೆಯೇ ಗ್ಯಾರಂಟಿಯಾಗಿ ನಿಂತಿರುವುದು ಕಾರಣ ಅನಿಲ್ ಕುಮಾರ್ ಎಸ್.ಎಸ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೇಳಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಸ್ವಾವಲಂಬನೆ, ಸುಸ್ಥಿರ ಅಭಿವೃದ್ಧಿ, ಸಾಮಾಜಿಕ- ಸಾಮುದಾಯಿಕ ಸಶಕ್ತೀಕರಣ ಮತ್ತು ಆರೋಗ್ಯ- ಶಿಕ್ಷಣ ಅಭಿವೃದ್ಧಿಯಲ್ಲಿ ದೊಡ್ಡ ಕೊಡುಗೆ ನೀಡಿದೆ.
ನಬಾರ್ಡ್ ಮತ್ತು ಧರ್ಮಸ್ಥಳ ಯೋಜನೆಗಳೆರಡೂ 1982ರಲ್ಲಿ ಹುಟ್ಟಿದ್ದು, ಅವಳಿ ಸಂಸ್ಥೆಗಳಂತಿವೆ. ಎಲ್ಲವನ್ನೂ ಸರಕಾರವೊಂದೇ ಮಾಡಲು ಅಸಾಧ್ಯ. ಅದಕ್ಕೊಂಡು ವಿಶ್ವಾಸಾರ್ಹ ಭಾಗೀದಾರ ಬೇಕು. ಇದನ್ನು ಧರ್ಮಸ್ಥಳ ಯೋಜನೆ ಈಡೇರಿಸಿದೆ ಶಾಜಿ ಕೆ.ವಿ., ಅಧ್ಯಕ್ಷ, ನಬಾರ್ಡ್, ಮುಂಬಯಿ ಹೇಳಿದ್ದಾರೆ.