spot_img
spot_img

ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಮೋದಾದೇವಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಮೈಸೂರು : ಶ್ರೀ ಚಾಮುಂಡೇಶ್ವರಿ ದೇವಿಯು ಮೈಸೂರು ರಾಜಮನೆತನದ ಮನೆದೇವತೆ ಎಂದು ಪ್ರಮೋದಾ ದೇವಿ ಒಡೆಯರ್ ಹೇಳಿದ್ದು, ಚಾಮುಂಡಿ ಬೆಟ್ಟದ ಇತರ ದೇವಾಲಯಗಳೊಂದಿಗೆ ಐತಿಹಾಸಿಕವಾಗಿ ಕುಟುಂಬದವರು ನಿರ್ವಹಿಸುವ ಖಾಸಗಿ ಆಸ್ತಿಯಾಗಿದೆ, ವಿಶೇಷವಾಗಿ ಚಾಮುಂಡಿ ಬೆಟ್ಟದ ಮೇಲಿನ ಮಾಲೀಕತ್ವದ ವಿವಾದವು ಇನ್ನೂ ನ್ಯಾಯಾಲಯದಲ್ಲಿ ಉಳಿದ ಕಾರಣ, ಈ ದೇವಾಲಯಗಳು ಮತ್ತು ಅವುಗಳ ಆಸ್ತಿಗಳನ್ನು ರಾಜ್ಯ ಸರ್ಕಾರವು ವಶಪಡಿಸಿಕೊಳ್ಳುವುದು ಅಕ್ರಮ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.

ಇದನ್ನೂ ಓದಿ: Ganesha Chaturthi ಸ್ಪೆಷಲ್! ಕೇಂದ್ರ ದಿಂದ ರೈತರಿಗೆ ದೊಡ್ಡ ಬೋನಸ್!

ಸಿಎಂ ಸಿದ್ದರಾಮಯ್ಯ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಕಳೆದ 10 ರಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸಿಎಂ ಇದೀಗ ಮತ್ತೆ ಚಾಮುಂಡಿ ತಾಯಿಯ ನೇರವು ಹೋಗಿದ್ದಾರೆ. ದೇವರ ದರ್ಶನದ ಬಳಿಕ ಬೆಟ್ಟದ ಅಭಿವೃದ್ದಿ ಪ್ರಾಧಿಕಾರ ಸಭೆ ನಡೆಸಲಿದ್ದಾರೆ. ಮೈಸೂರು ರಾಜಮನೆತನದ ವಿರೋಧದ ನಡುವೆಯೂ ಪ್ರಾಧಿಕಾರದ ಸಭೆ ನಡೆಸಲಿದ್ದು ಇದು ಒಡೆಯರ್ ಕುಟುಂಬದ ಕೊಪಕ್ಕೆ ಕಾರಣವಾಗಿದೆ.
ಪ್ರಾಧಿಕಾರದ ಸಭೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಾಜಮಾತೆ ಪ್ರಮೋದಾದೇವಿ ಒಡೆಯರ್, ಹೋರ ಬರಲು ನಿರ್ಧರಿಸಿದ್ದಾರೆ. ಸಭೆ ಹಿನ್ನೆಲೆ ಪ್ರಾಧಿಕಾರದ ಕಾರ್ಯದರ್ಶಿಯಿಂದ ಪ್ರಮೋದಾದೇವಿಗೆ ಹಾಜರಾಗುವಂತೆ ಮೇಲ ಮೂಲಕ ಪತ್ರ ಕಳುಹಿಸಲಾಗಿತ್ತು.

ಇದನ್ನೂ ಓದಿ :  ಎಸ್ಪಿ ಶೋಭಾರಾಣಿ ಮಹತ್ವದ ಮಾಹಿತಿ ಏನು?

ಅದಕ್ಕೆ ಮೇಲ್ ಮೂಲಕವೇ ಪ್ರಾಧಿಕಾರಕ್ಕೆ ಪ್ರತ್ಯುತ್ತರ ನೀಡಿರುವ ಪ್ರಮೋದಾದೇವಿ ಒಡೆಯರ್, ಸಭೆ ಕಾನೂನು ಬಾಹಿರವಾಗಿ ನಡೆಯುತ್ತಿದೆ. ನ್ಯಾಯಾಲಯದ ವಿರುದ್ಧ ಸಭೆ ನಡೆಸುತ್ತಿರುವುದು ಸರಿಯಲ್ಲ. ಕಾನೂನು ಉಲ್ಲಂಘನೆ ಆಗಲಿದೆ. ಸೆಪ್ಟೆಂಬರ್ 5ಕ್ಕೆ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಹೀಗಿರುವಾಗ ಸಭೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಮೋದಾದೇವಿಯವರ ನಿರ್ಧಾರ ಏನು..!?

ಜೊತೆಗೆ ಸಭೆಗೆ ಗೈರಾಗಲು ಪ್ರಮೋದಾದೇವಿ ಒಡೆಯರ್ ನಿರ್ಧಾರ ಮಾಡಿದ್ದಾರೆ. ಪ್ರಾಧಿಕಾರ ರಚನೆಗೆ ಪ್ರಮೋದಾದೇವಿ ಒಡೆಯರ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರಾಧಿಕಾರ ರಚನೆ ಕುರಿತು ವಿಸ್ತೃತ ವರದಿ ಮಾಡಿತ್ತು. ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಪ್ರಮೋದಾದೇವಿ, ಸರ್ಕಾರದ ನಡೆಯನ್ನು ಖಂಡಿಸಿತ್ತು. ಚಾಮುಂಡೇಶ್ವರಿ ಬೆಟ್ಟ ನಮ್ಮ ಆಸ್ತಿ ಎಂದು ಪ್ರತಿಪಾದನೆ ಮಾಡಿದ್ದರು.

WhatsApp Group Join Now
Telegram Group Join Now
Instagram Account Follow Now
spot_img

Related articles

ಆದಷ್ಟು ಬೇಗ ಭಾರತಕ್ಕೆ ಕಾಲಿಡಲಿದೆ ರೆಡ್​ಮಿ ನೋಟ್​ 14 ಸೀರಿಸ್

Redmi Note 14 5G Series: ಆದಷ್ಟು ಬೇಗ ರೆಡ್​ಮಿ ನೋಟ್​ 14 ಸೀರಿಸ್​ ಭಾರತಕ್ಕೆ ಕಾಲಿಡಲಿದೆ. ಈ ಬಗ್ಗೆ ಕಂಪನಿ ಅಧಿಕೃತವಾಗಿ ಮಾಹಿತಿ...

ವಾಯು ಮಾಲಿನ್ಯ ರಾಷ್ಟ್ರೀಯ ತುರ್ತು ಪರಿಸ್ಥಿತಿ, ಸಂಸತ್ತಿನಲ್ಲಿ ಚರ್ಚೆಯಾಗಲಿ: ರಾಹುಲ್ ಗಾಂಧಿ

ನವದೆಹಲಿ: ಉತ್ತರ ಭಾರತದಲ್ಲಿನ ವಾಯುಮಾಲಿನ್ಯವು ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಉತ್ತರ ಭಾರತದಲ್ಲಿನ ವಾಯುಮಾಲಿನ್ಯವು ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿದೆ ಎಂದು ಪ್ರತಿಪಾದಿಸಿದ...

Bigg Boss ಮನೆಯಲ್ಲಿ ಒಂಬತ್ತನೇ ಅದ್ಭುತ: ಮತ್ತೆ ಒಂದಾದ ಮಂಜಣ್ಣ – ತ್ರಿವಿಕ್ರಮ್, ಈ ಬಾರಿ ಹೊಸ ಒಪ್ಪಂದ!

ದಿನಗಳು ಉರುಳಿದಂತೆ ‘ಬಿಗ್ ಬಾಸ್’ ಮನೆಯಲ್ಲಿ ಸ್ಪರ್ಧೆಯ ಕಾವೇರುತ್ತಿದೆ. ಹೀಗಿರುವಾಗಲೇ, ತೊಡೆ ತಟ್ಟಿ ನಿಂತಿದ್ದ ತ್ರಿವಿಕ್ರಮ್ ಹಾಗೂ ಮಂಜು ಕೈಜೋಡಿಸಿಬಿಟ್ಟಿದ್ದಾರೆ. ಹೊಸ ಒಪ್ಪಂದಕ್ಕೆ ನಾಂದಿ...

ರೋಗಗಳಿಂದ ಕಂಗೆಟ್ಟಿದ್ದ ಮಲೆನಾಡಿನ ರೈತರಲ್ಲಿ ಆಶಾಕಿರಣ: ಭರವಸೆ ಮೂಡಿಸಿದ ಮಂಗಳ ಅಡಕೆ

ಶೃಂಗೇರಿ: ಹಳದಿ ಎಲೆ. ಬೇರು ಹುಳ, ಎಲೆ ಚುಕ್ಕಿ ರೋಗ ಹೀಗೆ ಮಲೆನಾಡಿನ ಅಡಕೆ ಬೆಳೆಗಾರರು ಕಳೆದ ಕೆಲವು ವರ್ಷಗಳಿಂದ ಸಾಲು ಸಾಲು ರೋಗ...