spot_img
spot_img

ಮೈಸೂರಿಗೆ ಲಗ್ಗೆ ಇಟ್ಟ ಎರಡನೇ ಹಂತದ ಗಜಪಡೆ: ಮೈಸೂರು ದಸರಾ ವೈಭವಕ್ಕೆ ಕ್ಷಣಗಣನೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಮೈಸೂರು : 2024ರ ಮೈಸೂರು ದಸರಾ ಮಹೋತ್ಸವಕ್ಕೆ ಭರದ ಸಿದ್ದತೆ ನಡೆಯುತ್ತಿದ್ದು ಎರಡನೇ ಹಂತದ ಕರಿಸೇನೆ ಸೆಪ್ಟಂಬರ್ 5ಕ್ಕೆ ಮೈಸೂರಿಗೆ ಆಗಮಿಸಲಿದೆ.

ಇದನ್ನೂ ಓದಿ :ಆಸ್ತಿ ವಿವರ ಸಲ್ಲಿಸದ 13 ಲಕ್ಷ ಸರ್ಕಾರಿ ನೌಕರರ ವೇತನ ತಡೆ ಹಿಡಿದ ಉತ್ತರ ಪ್ರದೇಶ ಸರ್ಕಾರ

ಈಗಾಗಲೇ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಮೊದಲ ಹಂತದ ದಸರಾ ಕರಿಸೇನೆ ಮೈಸೂರಿಗೆ ಆಗಮಿಸಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿದೆ. ಉಳಿದ 5 ಆನೆಗಳನ್ನ ಸೆಪ್ಟಂಬರ್ 5ರಂದು ಕರೆತರಲು ಸಿದ್ದತೆ ನಡೆದಿದೆ.
ಈ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಹೆಚ್ಚುವರಿ ಕರಿಸೇನೆ, ಕಾವಾಡಿ, ಮಾವುತರಿಗಾಗಿ ತಂಗುದಾನ ನಿರ್ಮಾಣ ಮಾಡಲಾಗುತ್ತಿದೆ. ಗಜಗಳ ವಾಸ್ತವ್ಯಕ್ಕೆ ಹೆಚ್ಚುವರಿ ತಾತ್ಕಾಲಿಕ ಶೆಡ್ ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರು ಬ್ಯುಸಿಯಾಗಿದ್ದಾರೆ.

ಅರಮನೆಯ ಎಡ ಭಾಗದ ಆವರಣದಲ್ಲಿ ಕಾವಾಡಿ, ಮಾವುತರ ಕುಟುಂಬ ತಂಗಲು ಒಂದೊಂದು ಕುಟುಂಬಕ್ಕೆ ಪ್ರತ್ಯೇಕ ತಾತ್ಕಾಲಿಕ ಮನೆಗಳ ನಿರ್ಮಾಣ ಮಾಡಲಾಗಿದೆ. ಸುಮಾರು 30 ರಿಂದ 40 ಕುಟುಂಬ ಇರಲು ಅನುಕೂಲವಾಗುವಂತ ಶೆಡ್ ಗಳನ್ನ ನಿರ್ಮಾಣ ಮಾಡಲಾಗುತ್ತಿದೆ. ಶೆಡ್ ಗಳನ್ನ ಮಳೆ, ಬಿಸಿಲು, ಗಾಳಿಯಿಂದ ರಕ್ಷಣೆ ಮಾಡುವಂತೆ ನಿರ್ಮಿಸಲಾಗುತ್ತಿದೆ. ಈಗಾಗಲೇ ದಸರಾ ಗಜಪಡೆ ಆನೆಗಳಿಗೆ ತಾಲೀಮು ನಡೆಸುವ ಪ್ರಕ್ರಿಯೆ ಆರಂಭವಾಗಿದೆ.

ಇದನ್ನೂ ಓದಿ : ಗೌರಿ ಗಣೇಶ ಹಬ್ಬದ ನಿಮಿತ್ತ ಪ್ರಯಾಣಿಕ ಅನುಕೂಲಕ್ಕೆ KSRTC ಶುಭ ಸುದ್ದಿ : ಹಬ್ಬದ ಪ್ರಯುಕ್ತ ಹೆಚ್ಚುವರಿಯಾಗಿ ವಿಶೇಷ ಬಸ್ಸಿನ ವ್ಯವಸ್ತೆ..!

WhatsApp Group Join Now
Telegram Group Join Now
Instagram Account Follow Now
spot_img

Related articles

ರೈತರ ಕಂಗೆಡಿಸಿದ ಡೀಮ್ಡ್ ಫಾರೆಸ್ಟ್

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ರೈತರು ಸಾಗುವಳಿ ಮಾಡುತ್ತಿರುವ ಜಮೀನಿಗೂ ಅರಣ್ಯ ಇಲಾಖೆಯಿಂದ ಬೇಲಿ ಹಾಕುತ್ತಿದ್ದರು. ಕೃಷಿ ಮಾಡುತ್ತಿದ್ದ ರೈತರೆಲ್ಲ ದಿಕ್ಕೆಟ್ಟು ಕೂತಿದ್ದರು. ಕೆಲವೆಡೆ ಸರಕಾರವೇ...

ಹಳದಿ ಮಾರ್ಗದ ಹಳಿಗೆ ಬರಲು ಸಜ್ಜಾಗಿವೆ ಮೆಟ್ರೋ ರೈಲುಗಳು

ಬೆಂಗಳೂರು: ಮೆಟ್ರೋ ಹಳದಿ ಮಾರ್ಗದಲ್ಲಿ ಆರಂಭದಲ್ಲಿ ಮೂರು ರೈಲುಗಳನ್ನು ಮಾತ್ರ ಓಡಿಸಲು ನಿರ್ಧರಿಸಲಾಗಿದೆ. ಪ್ರತಿ 30 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ. 2025ರ ಆಗಸ್ಟ್‌ ವೇಳೆಗೆ...

ಆದಷ್ಟು ಬೇಗ ಭಾರತಕ್ಕೆ ಕಾಲಿಡಲಿದೆ ರೆಡ್​ಮಿ ನೋಟ್​ 14 ಸೀರಿಸ್

Redmi Note 14 5G Series: ಆದಷ್ಟು ಬೇಗ ರೆಡ್​ಮಿ ನೋಟ್​ 14 ಸೀರಿಸ್​ ಭಾರತಕ್ಕೆ ಕಾಲಿಡಲಿದೆ. ಈ ಬಗ್ಗೆ ಕಂಪನಿ ಅಧಿಕೃತವಾಗಿ ಮಾಹಿತಿ...

ವಾಯು ಮಾಲಿನ್ಯ ರಾಷ್ಟ್ರೀಯ ತುರ್ತು ಪರಿಸ್ಥಿತಿ, ಸಂಸತ್ತಿನಲ್ಲಿ ಚರ್ಚೆಯಾಗಲಿ: ರಾಹುಲ್ ಗಾಂಧಿ

ನವದೆಹಲಿ: ಉತ್ತರ ಭಾರತದಲ್ಲಿನ ವಾಯುಮಾಲಿನ್ಯವು ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಉತ್ತರ ಭಾರತದಲ್ಲಿನ ವಾಯುಮಾಲಿನ್ಯವು ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿದೆ ಎಂದು ಪ್ರತಿಪಾದಿಸಿದ...