spot_img
spot_img

KRS ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ರಿಲೀಸ್.. ಅಪಾಯ ಮಟ್ಟ ಮೀರಿ ಹರಿಯುತ್ತಿರೋ ಕಾವೇರಿ ನದಿ​

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಕಾವೇರಿ ಜಲಾನಯನ ಪ್ರದೇಶದ ಸುತ್ತಮುತ್ತ ಮಳೆ ಹಿನ್ನೆಲೆಯಲ್ಲಿ ಕೆಆರ್​ಎಸ್​ (ಕೃಷ್ಣ ರಾಜ ಸಾಗರ) ಡ್ಯಾಂನಿಂದ 90 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ನದಿ ಪಾತ್ರದ ಜಮೀನುಗಳಲ್ಲಿ ಬೆಳೆಯಲಾಗಿದ್ದ ಕಬ್ಬು, ತೆಂಗು, ಭತ್ತ, ಅಡಿಕೆ ಸೇರಿದಂತೆ ಹಲವು ಬೆಳೆಗಳು ಮುಳುಗಡೆಯಾಗಿವೆ.

ಕ್ಷಣ ಕ್ಷಣಕ್ಕೂ ಕೆಆರ್​ಎಸ್​ ಡ್ಯಾಂ ಒಳಹರಿವು ಹೆಚ್ಚಳವಾಗುತ್ತಿದೆ. ಜಲಾಶಯದಿಂದ ನೀರು ರಿಲೀಸ್ ಮಾಡಿದ್ದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಾಗಿದೆ. ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಿಗೂ ಜಲ ಕಂಟಕ ತಟ್ಟಿದೆ. ನಿಮಿಷಾಂಬ ದೇವಾಲಯ, ರಂಗನಾಥ ಸ್ವಾಮಿ, ಪಶ್ಚಿಮ ವಾಹಿನಿಯ ಸ್ನಾನಘಟ್ಟಗಳು ಮುಳುಗಡೆಯಾಗಿವೆ. ನದಿ ಪಕ್ಕದ ಮನೆಗಳಿಗೂ ನೀರು ನುಗ್ಗುವ ಭೀತಿ ಇದ್ದು ನದಿ ನೀರು ಮತ್ತಷ್ಟು ಹೆಚ್ಚಾದರೆ ಅಪಾಯ ಪಕ್ಕಾ ಎನ್ನಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜನರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ- 124.80 ಅಡಿ
ಇಂದಿನ ಮಟ್ಟ- 124.35 ಅಡಿ
ಗರಿಷ್ಠ ಸಾಂದ್ರತೆ- 49.452 ಟಿಎಂಸಿ
ಇಂದಿನ ಸಾಂದ್ರತೆ- 48.824 ಟಿಎಂಸಿ
ಒಳ ಹರಿವು- 90,000 ಕ್ಯೂಸೆಕ್
ಹೊರ ಹರಿವು- 80,000 ಕ್ಯೂಸೆಕ್

WhatsApp Group Join Now
Telegram Group Join Now
Instagram Account Follow Now
spot_img

Related articles

Coconut price News : ಕೊಬ್ಬರಿ ಬೆಂಬಲ ಬೆಲೆ 422 ರೂ. ಹೆಚ್ಚಳ

New Delhi News : ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, 2025ನೇ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲು ಶುಕ್ರವಾರ ನಡೆದ ಕೇಂದ್ರ...

BSY News :ಕಲಬುರಗಿ ಜಯದೇವ ಆಸ್ಪತ್ರೆ ಬಿಎಸ್ವೈ ಕನಸಿನ ಕೂಸು

Bangalore News: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 80ರ ದಶಕದಲ್ಲಿ ಸಚಿವರಾದವರು. ತಾವು(ಪ್ರಿಯಾಂಕ್ ಖರ್ಗೆ) 2016ರಲ್ಲಿ ಸಚಿವರಾದವರು. ಕಲಬುರಗಿಗೆ ತಮ್ಮಿಂದ ಯಾಕೆ ಇಂತಹ ಜನೋಪಯೋಗಿ...

ECO TOURISM : ಮೈಸೂರಿನಲ್ಲಿ ಇಕೋ ಟೂರಿಸಂ ಪ್ರಾರಂಭ

Mysore News: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪರಿಸರ (ECO) ಪ್ರವಾಸೋದ್ಯಮ ಯೋಜನೆಯನ್ನು ಜಾರಿ ಮಾಡಲು ಈಗಾಗಲೇ ಪ್ರವಾಸೋದ್ಯಮ ಇಲಾಖೆ ನೀಲನಕ್ಷೆ ತಯಾರಿಸಿದೆ. ಈ ಬಗ್ಗೆ...

NISAR MISSION 2025 : ನಾಸಾ – ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ ಮಿಷನ್ ಉಡಾವಣೆಗೆ ಸಿದ್ಧ

Nisar Mission 2025:  ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾರ್ಚ್ 2025 ರಲ್ಲಿ ನಾಸಾ - ಇಸ್ರೋ...