spot_img
spot_img

IPLನ ಪ್ರತೀ ಪಂದ್ಯದಿಂದ ಒಬ್ಬ ಆಟಗಾರ ಗಳಿಸುವ ಹಣ ಎಷ್ಟು?

spot_img
spot_img

Share post:

ಹೈದರಾಬಾದ್​: ಇಂಡಿಯನ್​​ ಪ್ರೀಮಿಯರ್​ ಲೀಗ್​ (IPL). ಇದು ಅತೀ ಹೆಚ್ಚು ಖ್ಯಾತಿ ಪಡೆದುಕೊಂಡ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್. ವರ್ಷಕ್ಕೊಮ್ಮೆ ನಡೆಯುವ ಈ ಪಂದ್ಯಾವಳಿಗೆ ICC ನಡೆಸುವ ಪ್ರತಿಷ್ಠಿತ ಟೂರ್ನಿಗಳಷ್ಟೇ ಕ್ರೇಜ್​ ಇದೆ.

ಹಾಗಾಗಿ, ಐಪಿಎಲ್​ನಲ್ಲಿ ಆಡಬೇಕೆಂದು ದೇಶ-ವಿದೇಶದ ಕ್ರಿಕೆಟರ್​ಗಳು ಬಯಸುತ್ತಾರೆ. ಒಮ್ಮೆ ಆಟಗಾರ ಇದರಲ್ಲಿ ಖ್ಯಾತಿ ಪಡೆದರೆ ಕೈತುಂಬಾ ಹಣ ಸಂಪಾದಿಸುತ್ತಾನೆ. ಆದ್ರೆ, ಒಪ್ಪಂದದ ಹಣ ಹೊರತುಪಡಿಸಿ ಒಬ್ಬ ಆಟಗಾರರು ಪ್ರತೀ ಪಂದ್ಯದಿಂದ ಗಳಿಸುವ ಹಣ ಎಷ್ಟು ಎಂಬುದು ನಿಮಗೆ ಗೊತ್ತೇ?.

ಇತ್ತೀಚೆಗೆ ಐಪಿಎಲ್​ಗೆ ಸಂಬಂಧಿಸಿದಂತೆ ಬಿಸಿಸಿಐ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಆಟಗಾರರ ಪಂದ್ಯದ ವೇತನವೂ ಒಂದು.

ಇನ್ಮುಂದೆ ಐಪಿಎಲ್​ನಲ್ಲಿ ಆಡುವ ಆಟಗಾರರು ಒಪ್ಪಂದದ ಮೊತ್ತ ಹೊರತುಪಡಿಸಿ ಪ್ರತೀ ಪಂದ್ಯಕ್ಕೆ ಹೆಚ್ಚುವರಿ ಹಣವನ್ನೂ ಪಡೆಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ಧರು.

ಐಪಿಎಲ್‌ನಲ್ಲಿ ಪ್ರತೀ ಪಂದ್ಯವನ್ನು ಆಡುವುದರಿಂದ ಒಬ್ಬ ಆಟಗಾರನಿಗೆ ಹೆಚ್ಚುವರಿಯಾಗಿ 7.5 ಲಕ್ಷ ರೂಪಾಯಿ ಪಂದ್ಯದ ಶುಲ್ಕವಾಗಿ ನೀಡಲಾಗುತ್ತದೆ ಎಂದು ಶಾ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಒಬ್ಬ ಆಟಗಾರ ಪ್ರತೀ ಪಂದ್ಯದಿಂದ 7.5 ಲಕ್ಷದ ಜೊತೆಗೆ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರೆ, ಕ್ಯಾಚ್​ಗಳನ್ನು ಪಡೆದರೆ ಅಥವಾ ವಿಕೆಟ್​ಗಳನ್ನು ಉರುಳಿಸಿದರೆ ಪಂದ್ಯದ ನಂತರ ಕೊಡುವ ಪ್ರಶಸ್ತಿ ಮತ್ತು ನಗದು ಬಹುಮಾನಗಳನ್ನು ಪಡೆಯುವ ಅವಕಾಶವಿರುತ್ತದೆ. ಪ್ರತೀ ಪ್ರಶಸ್ತಿಗೂ 1 ಲಕ್ಷ ರೂಪಾಯಿ ಬಹುಮಾನವಾಗಿ ನೀಡಲಾಗುತ್ತದೆ.

ಇದರಿಂದಾಗಿ ಪ್ರತೀ ಆಟಗಾರ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಒಂದೆರಡು ಪ್ರಶಸ್ತಿಗಳನ್ನು ಪಡೆದುಕೊಂಡರೆ ಪ್ರತೀ ಪಂದ್ಯದಿಂದ 9ರಿಂದ 10 ಲಕ್ಷ ರೂ.ವರೆಗೆ ಪಡೆದುಕೊಳ್ಳಬಹುದು.

ಮುಂದಿನ ಆವೃತ್ತಿಯ ಐಪಿಎಲ್​ಗೆ ಸಂಬಂಧಿಸಿದಂತೆ ನವೆಂಬರ್ 24 ಮತ್ತು 25ರಂದು ಮೆಗಾ ಹರಾಜು ನಡೆಯಲಿದೆ.

ಈ ಬಾರಿ ಒಟ್ಟು 1574 ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 574 ಆಟಗಾರರನ್ನು ಶಾರ್ಟ್​ಲಿಸ್ಟ್​ ಮಾಡಲಾಗಿದೆ. ಈ ಪೈಕಿ 208 ವಿದೇಶಿ ಆಟಗಾರರಿದ್ದು 12 ಅನ್​ಕ್ಯಾಪ್ಡ್​ ಪ್ಲೇಯರ್​ಗಳಿದ್ದಾರೆ.

ಉಳಿದಂತೆ, ಭಾರತದ 318 ಆಟಗಾರರಿದ್ದು ಇವರಲ್ಲಿ ಹೆಚ್ಚಿನವರು ಅನ್‌ಕ್ಯಾಪ್ಡ್​ ಆಟಗಾರರಾಗಿದ್ದಾರೆ.ನ್‌ಕ್ಯಾಪ್ಡ್​ ಆಟಗಾರರಾಗಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...