ಬೆಂಗಳೂರು: ಆ್ಯಪ್ ಆಧರಿತ ಇ-ಟ್ಯಾಕ್ಸಿ, ಫುಡ್ ಡೆಲಿವರಿ ಮತ್ತಿತರ ಕಂಪನಿಗಳ ಪ್ರತಿನಿಧಿಗಳಿಂದ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿರುವುದರ ಕುರಿತು ವಿಶೇಷ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ಪೊಲೀಸರು 2,670 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ನಗರದಾದ್ಯಂತ ಸಂಚಾರಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಿವಿಧ ಸಂಚಾರ ಉಲ್ಲಂಘನೆಗಳಿಗೆ ಒಟ್ಟು 13.78 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡೂ ಇಲಾಖೆಗಳು ಈ ಹಿಂದೆ ಕರಡು ನೀತಿ-ನಿಮಯಗಳನ್ನು ಬಿಡುಗಡೆ ಮಾಡಿದ್ದವು. ಆದರೆ ಅವುಗಳು ಪರಸ್ಪರ ಹೊಂದಾಣಿಕೆಯಾಗದೆ, ಉದ್ಯಮಗಳ ಪಾಲಿಗೆ ಗೊಂದಲ ಸೃಷ್ಟಿಸಿದ್ದವು.
ಡಿಪಿಐಐಟಿ ಕರಡು ನೀತಿಯು, ನಿಯಂತ್ರಕ ವಿಭಾಗವನ್ನು ಸ್ಥಾಪಿಸುವುದು, ಇ-ಕಾಮರ್ಸ್ ಕಾನೂನನ್ನು ರೂಪಿಸುವುದು ಮತ್ತು ಉಲ್ಲಂಘನೆಗಳಿಗೆ ದಂಡ ವಿಧಿಸುವುದರ ಮೇಲೆ ಗಮನ ಕೇಂದ್ರೀಕರಿಸುವ ನಿರೀಕ್ಷೆಯಿದೆ. ಇದು ಭಾರತೀಯ ಮತ್ತು ವಿದೇಶಿ ಹೂಡಿಕೆಯ ಸಂಸ್ಥೆಗಳು ಸೇರಿ ಎಲ್ಲಾ ಇ-ಕಾಮರ್ಸ್ ಕಂಪನಿಗಳನ್ನು ಒಳಗೊಳ್ಳಲಿವೆ.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಇ-ಕಾಮರ್ಸ್ ಕಂಪನಿಗಳಿಗೆ ಇದು ಸಮಗ್ರ ನೀತಿಯಾಗಿರಲಿದೆ, ಎಂದು ಮೇಲೆ ಉಲ್ಲೇಖಿಸಿದ ಓರ್ವ ವ್ಯಕ್ತಿ ಹೇಳಿದ್ದಾರೆ.
ಈ ಹಿಂದಿನ ಇ-ಕಾಮರ್ಸ್ ಕರಡು ನೀತಿಯು ಮುಖ್ಯವಾಗಿ ಭಾರತೀಯ ಮತ್ತು ವಿದೇಶಿ ಹೂಡಿಕೆ ಕಂಪನಿಗಳಿಂದ ಉದ್ಯಮದ ಅಭಿವೃದ್ಧಿಗೆ ಡೇಟಾವನ್ನು ಬಳಸಿಕೊಳ್ಳುವ ಮತ್ತು ಅಂತಹ ಮಾಹಿತಿಯ ದುರುಪಯೋಗವನ್ನು ತಡೆಯುವ ಉದ್ದೇಶವನ್ನೂ ಹೊಂದಿತ್ತು.
ಜೂನ್‌ನಲ್ಲಿ, ಗ್ರಾಹಕ ವ್ಯವಹಾರಗಳ ಸಚಿವಾಲಯವು ಸಾರ್ವಜನಿಕ ಸಮಾಲೋಚನೆಗಾಗಿ ಕರಡು ಇ-ಕಾಮರ್ಸ್ ನಿಯಮಗಳನ್ನು ಬಿಡುಗಡೆ ಮಾಡಿತ್ತು. ಈ ಸಂದರ್ಭದಲ್ಲಿ ಸಂಯೋಜಿತ ಘಟಕಗಳಿಗೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಮಾಡುವುದನ್ನು ನಿರ್ಬಂಧಿಸುವ, ಜೊತೆಗೆ ಫ್ಲ್ಯಾಷ್ ಮಾರಾಟಗಳನ್ನೂ ನಿರ್ಬಂಧಿಸುವ ಪ್ರಸ್ತಾಪ ಮಾಡಿತ್ತು.
ಇದಕ್ಕೆ ಉದ್ಯಮ ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಅಷ್ಟೇ ಅಲ್ಲದೆ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ನೀತಿ ಆಯೋಗಕ್ಕೂ ಈ ಪ್ರಸ್ತಾಪ ಹಿಡಿಸಿರಲಿಲ್ಲ.
ಆದಾಗ್ಯೂ, ಹೊಸ ಕರಡು ನೀತಿಯು ಎಲ್ಲಾ ಇ-ಕಾಮರ್ಸ್ ಸಂಸ್ಥೆಗಳಿಗೂ ಅನ್ವಯವಾಗುವ ಸಾಧ್ಯತೆ ಇದ್ದು, ಗ್ರಾಹಕರನ್ನು ರಕ್ಷಿಸಲು ಹೆಚ್ಚು ಗಮನಹರಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಲೆಕ್ಕಪರಿಶೋಧಕ ಮತ್ತು ಸಲಹಾ ಸಂಸ್ಥೆ ಗ್ರಾಂಟ್ ಥಾರ್ನ್‌ಟನ್‌ನ ಅಂದಾಜಿನ ಪ್ರಕಾರ, ಇ-ಕಾಮರ್ಸ್ ವಲಯವು 2020ರಲ್ಲಿರುವ 64 ಶತಕೋಟಿ ಡಾಲರ್‌ನಿಂದ 2025ರ ವೇಳೆಗೆ 188 ಶತಕೋಟಿ ಡಾಲರ್ (14 ಲಕ್ಷ ಕೋಟಿ ರೂ.)ಗೆ ಬೆಳೆಯುವ ನಿರೀಕ್ಷೆಯಿದೆ.
ಆನ್‌ಲೈನ್ ಚಿಲ್ಲರೆ ಮಾರಾಟ ವಲಯ ದೇಶದ ಅತಿದೊಡ್ಡ ಉದ್ಯೋಗ ಸೃಷ್ಟಿಕರ್ತ ವಲಯಗಳಲ್ಲಿ ಒಂದಾಗಿದ್ದು, ಹಲವಾರು ನಿಯಮಗಳ ಉಲ್ಲಂಘನೆಗಾಗಿ ಸಣ್ಣ ವ್ಯಾಪಾರಿಗಳು ಮತ್ತು ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳಿಂದ ಭಾರೀ ವಿರೋಧವನ್ನೂ ಎದುರಿಸುತ್ತಿದೆ.
ಶನಿವಾರ ಒಂದೇ ದಿನದಲ್ಲಿ 2,670 ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಪೊಲೀಸರು ಒಟ್ಟು 13.78 ಲಕ್ಷ ದಂಡ ಸಂಗ್ರಹಿಸಿದ್ದಾರೆ.