ಬೆಂಗಳೂರು: ಸರ್ಕಾರಿ ಶಾಲೆ (Govt School) ಬೆಳೆಯಬೇಕು, ಸರ್ಕಾರಿ ಶಾಲೆ ಉಳಿಬೇಕು ಅಂತಾ ಹೇಳೋ ಸರ್ಕಾರ, ಅದೇ ಸರ್ಕಾರಿ ಶಾಲೆಗಳ ನಿರ್ವಹಣೆ ಬಗ್ಗೆ ಮಾತ್ರ ಗಮನ ಇಲ್ಲ. ಇಂತಹದ್ದೆ ಪರಿಸ್ಥಿತಿ ನಡುವೆ, ಜೀವ ಭಯದಿ ಪಾಠ ಕಲಿಯುವ ಸ್ಥಿತಿಯಲ್ಲಿದ್ದ ಮಕ್ಕಳಿಗೆ ಪಬ್ಲಿಕ್ ಟಿವಿ ಮುಕ್ತಿ ನೀಡಿದ್ದು, ಈ ಮೂಲಕ ಸರ್ಕಾರಿ ಶಾಲೆಗೆ ಹೊಸ ರೂಪ ಸಿಕ್ಕಂತಾಗಿದೆ.
ಸರ್ಕಾರದಿಂದ ಪ್ರತಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲೂ ಮಕ್ಕಳಿಗೆ ಕ್ವಾಲಿಟಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಇಂಗ್ಲೀಷ್ ಮಾಧ್ಯಮದ ಪಬ್ಲಿಕ್ ಶಾಲೆಗಳನ್ನ ಆರಂಭ ಮಾಡಲಾಗಿದೆ.
ಅದೇ ರೀತಿ ಈ ಶಾಲೆ ಕೂಡ. ಅತ್ತಿಗುಪ್ಪೆ ಸರ್ಕಾರಿ ಶಾಲೆಯಾಗಿದ್ದು, 350ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗೆ ನಿತ್ಯ ಪೋಷಕರು ಜೀವವನ್ನ ಕೈಯಲ್ಲಿಡಿದೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದ ಸ್ಥಿತಿ ಇತ್ತು. ಕಾರಣ ಬೀಳುವ ಹಂತದಲ್ಲಿದ್ದ ಕಾಂಪೌಂಡ್, ಸ್ವಚ್ಛತೆ ಇಲ್ಲದ ಶೌಚಾಲಯ, ಒಣಗಿ ನಿಂತ ಮರ ಈ ಎಲ್ಲಾದರ ನಡುವೆಗೂ ಮಕ್ಕಳು ಪಾಠ ಕಲಿಯುವ ಸ್ಥಿತಿ ಇತ್ತು.
ಈ ಬಗ್ಗೆ ಬೆಳಕು ಕಾರ್ಯಕ್ರಮದ ಮೂಲಕ ಸುದ್ದಿ ಪ್ರಸಾರ ಮಾಡಿದ್ದ ಪಬ್ಲಿಕ್ ಟಿವಿ ಶಿಕ್ಷಣ ಇಲಾಖೆ ಗಮನಕ್ಕೆ ತಂದು ಇದನ್ನ ಸರಿಪಡಿಸುವಂತೆ ಒತ್ತಾಯ ಮಾಡಲಾಗಿತ್ತು.
ಜೊತೆಗೆ ಸ್ಥಳೀಯ ಶಾಸಕ ಕೃಷ್ಣಪ್ಪರ ಸರಿಪಡಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಸುದ್ದಿ ಪ್ರಸಾರವಾದ ಎರಡೇ ತಿಂಗಳಲ್ಲಿ ಕಾಂಪೌಂಡ್ ಕಾಮಗಾರಿ ಮುಕ್ತಾಯಗೊಳಿಸಿ, ಶೌಚಾಲಯ ದುರಸ್ತಿ ಕಾರ್ಯಕೂಡ ಆರಂಭವಾಗಿದೆ ಎಂದು ತಿಳಿಸಿದ್ದಾರೆ.