ದೇಹದಲ್ಲಿ ಎಲ್ಲ ಅಂಗಗಳು ಚೆನ್ನಾಗಿದ್ದರೇ ಮಾತ್ರ ಆರೋಗ್ಯ ಉತ್ತಮವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ ಎಂದರೆ ಅದು ಕಿಡ್ನಿ ಸ್ಟೋನ್. ಕಿಡ್ನಿ ಮೂತ್ರ ಪಿಂಡ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಇದು ಫಿಲ್ಟರ್ ಮಾಡುವ ಮೂಲಕ ದೇಹದಿಂದ ಕಲ್ಮಶವನ್ನು ಹೊರ ಹಾಕುತ್ತದೆ. ಆದರೆ ಇದೇ ಕಿಡ್ನಿ ದೇಹದಲ್ಲಿ ಸರಿಯಾಗಿ ಕೆಲಸ ಮಾಡದೆ ಇದ್ದಾಗ ಕಲ್ಮಶ ಆ ಸೇರಿಕೊಂಡು ಒಂದೊಂದಾಗಿ ಸ್ಟೋನ್ಗಳಾಗಿ ರೂಪುಗೊಳ್ಳುತ್ತವೆ.
ಸಾಮಾನ್ಯವಾಗಿ ಕಿಡ್ನಿ ಸ್ಟೋನ್ ಸುಖಾ ಸುಮ್ಮನೆ ಬರೋದಿಲ್ಲ. ಮೂತ್ರಪಿಂಡದ ಕಲ್ಲುಗಳು ಒಂದೇ ಕಾರಣವನ್ನು ಹೊಂದಿರುವುದಿಲ್ಲ. ಅನುವಂಶಿಕ ಕಾಯಿಲೆಗಳು, ಪರಿಸರ, ಆಹಾರ ಮತ್ತು ವೈದ್ಯಕೀಯ ಸಮಸ್ಯೆಗಳು ಸೇರಿದಂತೆ ಅನೇಕ ಅಂಶಗಳು ಮೂತ್ರಪಿಂಡದ ಕಲ್ಲುಗಳನ್ನು ರೂಪಿಸಲು ಕಾರಣವಾಗಬಹುದು. ಅಲ್ಲದೇ ಬಹು ಮುಖ್ಯವಾಗಿ ನೀರನ್ನು ಕೂಡಿಯದೇ ಇದ್ದಾಗ ಕಿಡ್ನಿ ಸ್ಟೋನ್ ಬರುವ ಸಾಧ್ಯತೆ ಹೆಚ್ಚು.
ದೇಹದಲ್ಲಿ ಯೂರಿಕ್ ಆಸಿಡ್ ಜಾಸ್ತಿಯಾದಾಗ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪಗೊಳ್ಳುತ್ತವೆ. ನಿಮ್ಮ ದೇಹದಲ್ಲಿ ಹೆಚ್ಚಿನ ಯೂರಿಕ್ ಆಮ್ಲವು ಸಣ್ಣ ಕಲ್ಲುಗಳ ರಚನೆಗೆ ಕಾರಣವಾಗುತ್ತದೆ. ಇದು ನೀವು ಮೂತ್ರ ವಿಸರ್ಜಿಸಿದಾಗ ತೀವ್ರವಾದ ನೋವನ್ನು ಉಂಟುಮಾಡಬಹುದು ಮತ್ತು ನಿಮ್ಮ ಮೂತ್ರದಲ್ಲಿ ರಕ್ತವನ್ನು ಉಂಟುಮಾಡಬಹುದು. ಕಿಡ್ನಿ ಸ್ಟೋನ್ ಬರೋದಕ್ಕೂ ಮುನ್ನ ಅಸ್ವಸ್ಥತೆಯಿಂದಾಗಿ ಕೆಲವರು ಹೊಟ್ಟೆಯಲ್ಲಿ ವಿಚಿತ್ರ ಅನುಭವಿಸಬಹುದು. ಅಥವಾ ವಾಂತಿ ಮಾಡಬಹುದು. ಒಬ್ಬ ವ್ಯಕ್ತಿಯು ಆಗಾಗ ಮೂತ್ರ ವಿಸರ್ಜಿಸಲು ಕಷ್ಟ ಅನುಭವಿಸಬಹುದು. ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯುತ ಅನುಭವಿಸುವುದು. ಇದೆಲ್ಲಾ ಕಿಡ್ನಿ ಸ್ಟೋನ್ ಬರುವ ಮುನ್ಸೂಚನೆಯಾಗಿದೆ. ಈ ಮೇಲಿನ ಲಕ್ಷಣಗಳು ಬಂದರೇ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
ಕಿಡ್ನಿಯಲ್ಲಿ ಕಲ್ಲನ್ನು ಸುಲಭವಾಗಿ ಕರಗಿಸುವುದಕ್ಕೆ ಈ ಮನೆಮದ್ದು ಟ್ರೈ ಮಾಡಿ ನೋಡಿ. ಈಗಂತೂ ಸಾಕಷ್ಟೂ ಮಂದಿ ತಮ್ಮ ಮನೆಯ ಸುತ್ತಮುತ್ತ ಜಾಗದಲ್ಲಿ ಆಯುರ್ವೇದ ಗಿಡಗಳನ್ನು ಬೆಳೆಸುತ್ತಿದ್ದಾರೆ. ಹೀಗೆ ಬೆಳೆಸುವುದು ಬಹಳ ಉತ್ತಮವಾದ ಕೆಲಸ. ಹೀಗೆ ಗಿಡಮೂಲಿಕೆಗಳ ಸಹಾಯದಿಂದ ಅನೇಕ ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಬಹಳ ಸುಲಭವಾಗಿ ಪರಿಹರಿಸಬಹುದು. ಅಂತಹ ಒಂದು ಅದ್ಭುತ ಔಷಧೀಯ ಸಸ್ಯಗಳಲ್ಲೊಂದು ರಣಕಳ್ಳಿ. ಇದು ನಿತ್ಯಹರಿದ್ವರ್ಣ ಸಸ್ಯವಾಗಿದ್ದು, ಇದನ್ನು ಕುಂಡದಲ್ಲಿ ಸುಲಭವಾಗಿ ಬೆಳೆಸಬಹುದು. ಈ ಗಿಡದ ಎಲೆಗಳು ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸುವ ಶಕ್ತಿ ಹೊಂದಿವೆ. ಇವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.
ಈ ರಣಕಳ್ಳಿಯನ್ನು ನಾನಾ ಹೆಸರುಗಳಿಂದ ಕರೆಯುತ್ತಾರೆ.ಪವಾಡ ಸಸ್ಯ ಎಲೆ ಎಂದು ಕೂಡ ಕರೆಯುತ್ತಾರೆ. ಈ ಗಿಡದಲ್ಲಿ ಬೆಳೆಯುವ ಎಲೆಯನ್ನು ದೇಹದಲ್ಲಿನ ಊತ ಮತ್ತು ನೋವು ಎರಡರಿಂದಲೂ ಪರಿಹಾರವನ್ನು ನೀಡುತ್ತದೆ. ಇದರ ಹುಳಿ ಮತ್ತು ಖಾರದ ಎಲೆಗಳು ಕರುಳಿಗೆ ಪ್ರಯೋಜನಕಾರಿಯಾಗಿದ್ದು, ಹೊಟ್ಟೆಯ ವಿಷವನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಇದು ಅನೇಕ ರೋಗಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಸಸ್ಯವು ಮೂತ್ರಪಿಂಡದ ಕಲ್ಲುಗಳನ್ನು ಒಡೆಯುವ ಸಾಮರ್ಥ್ಯವನ್ನು ಹೊಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಕಲ್ಲುಗಳನ್ನು ತುಂಡುಗಳಾಗಿ ಒಡೆದು ದೇಹದಿಂದ ತೆಗೆದುಹಾಕಲು ಸಹಾಯ ಮಾಡುತ್ತದೆ. ಕಲ್ಲು ಹೊಟ್ಟೆಯಲ್ಲಿ ತೀವ್ರವಾದ ನೋವನ್ನು ಉಂಟುಮಾಡುತ್ತದೆ. ಇದನ್ನು ಹೋಗಲಾಡಿಸಲು ರಣಕಳ್ಳಿ ಸೇವಿಸುವುದು ಕೂಡ ತುಂಬಾ ಸುಲಭ.