ಮಳೆಗಾಲ ಮುಕ್ತಾಯದ ಹಂತಕ್ಕೆ ಬಂದಿದ್ದರೂ ಇನ್ನೂ ಮಳೆಯ ಅಬ್ಬರ ನಿಂತಿಲ್ಲ. ದೇಶದ ಕೆಲವೆಡೆ ಈಗಲೂ ಮಳೆಯಾಗುತ್ತಿದೆ. ಮತ್ತೊಂದೆಡೆ ನಿಧಾನವಾಗಿ ಚಳಿಯೂ ದೇಶದ ಅನೇಕ ಭಾಗಗಳನ್ನು ಆವರಿಸುತ್ತಿದೆ. ಹೀಗಿರುವಾಗ್ಲೆ ತಮಿಳುನಾಡು, ಶ್ರೀಲಂಕಾಗೂ ಫೆಂಗಲ್ ಚಂಡಮಾರುತ ಎಂಟ್ರಿ ಕೊಟ್ಟಿದೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ಚಂಡಮಾರುತದ ರೂಪ ತಾಳಿದ್ದು, ಫೆಂಗಲ್ ಸೈಕ್ಲೋನ್ ಪರಿಣಾಮ ತಮಿಳನಾಡಿನಲ್ಲಿ ಡಿಸೆಂಬರ್ 1ರವರೆಗೂ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಚೆನ್ನೈನಲ್ಲಿ ಭಾರೀ ಮಳೆಯಾಗ್ತಿರೋ ಹಿನ್ನೆಲೆಯಲ್ಲಿ ತಮಿಳುನಾಡಿನ 9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇವತ್ತೂ ಸಹ ಮಳೆಯ ಅಬ್ಬರ ಮುಂದುವರಿಯಲಿದ್ದು, ನಾಳೆ ಚಂಡಮಾರುತ ತೀರಕ್ಕೆ ಅಪ್ಪಳಿಸಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದಿಂದಾಗಿ ನಾಗಪಟ್ಟಣಂ ಜಿಲ್ಲೆಯ ಕೋಡಿಕ್ಕರೈ ಕಡಲತೀರದಲ್ಲಿ ಸಮುದ್ರದ ಪ್ರಕ್ಷುಬ್ಧ ವಾತಾವರಣ ಇದೆ. ಫೆಂಗಲ್ ಸೈಕ್ಲೋನ್ ಅಬ್ಬರಕ್ಕೆ ಪುದುಚೇರಿ ಅಂದ್ರೆ ಪಾಂಡಿಚೆರಿಯಲ್ಲಿ ಇಂದು ಭಾರೀ ಮಾಳೆಯಾಗುವ ಸಾಧ್ಯತೆ ಇದ್ದು, ಶಾಲೆಗಳು, ಕಾಲೇಜುಗಳಿಗೆರಜೆ ಘೋಷಿಸಲಾಗಿದೆ.
ಫೆಂಗಲ್ ಚಂಡಮಾರುತದ ಮಾರ್ಗ ಬದಲಾಯಿಸಿದ್ದು, ರಸ್ತೆಗಳು ಮುಚ್ಚಿವೆ..
ಪ್ರಯಾಣಿಕರೇ ಎಚ್ಚರದಿಂದಿರಿ ಎಂದು ಪುದುಚೇರಿ ಸರ್ಕಾರ ಬ್ಯಾರಿ ಕೇಡ್ ಸಮೇತ ಎಚ್ಚರಿಕೆಯನ್ನ ನೀಡ್ತಿದೆ. ಸುರಿದ ಮಳೆಯಿಂದಾಗಿ ರಾಮನಾಥಪುರದ ಮುಂದಿನ ಕಾರನ್, ಕುಂಭರಂ, ಮೀನಾಕ್ಷಿ ವಲಸೈ, ಡಬಲ್ಯೂರಣಿ ಸೇರಿದಂತೆ ಪ್ರದೇಶಗಳಲ್ಲಿನ ಬೆಳೆಗಳನ್ನ ಮಳೆನೀರು ನುಂಗಿ ಹಾಕಿದೆ.
ಮಳೆಯಿಂದ ಸಂಕಷ್ಟದಲ್ಲಿ ಸಿಲುಕಿರೋ ಜನರ ರಕ್ಷಣೆಗೆ ಚೆನ್ನೈನಲ್ಲಿ 24 ಗಂಟೆ ಕಂಟ್ರೋಲ್ ರೂಂ ತೆರೆಯಲಾಗಿದೆ. ಮರಕಾನಂ ಭಾಗದಲ್ಲಿ ಸಮುದ್ರದ ಅಲೆಗಳು 3 ಅಡಿಯಿಂದ 8 ಅಡಿಗಳಷ್ಟು ಎತ್ತರಕ್ಕೆ ಬಂದು ಕಡಲ ದಂಡೆಗೆ ಅಪ್ಪಳಿಸುತ್ತಿದೆ. ಇನ್ನು ಕೋವಲಂ ಬೀಚ್‌ನಲ್ಲಿ ಸಮುದ್ರ ತೀರಕ್ಕೆ ಹೋಗಬಾರದು ಅಂತಾ ಎಚ್ಚರಿಕೆ ಇದ್ದರೂ..
ಕೆಲವರು ಅದನ್ನ ಧಿಕ್ಕರಿಸಿ ಹುಚ್ಚಾಟ ಮೆರೆದಿದ್ದಾರೆ. ಈಗಾಗಲೇ ಶ್ರೀಲಂಕಾದಲ್ಲಿ ಆರ್ಭಟಿಸಿರುವ ಫೆಂಗಲ್ ಸೈಕ್ಲೋನ್ ತಮಿಳುನಾಡಿನಲ್ಲೂ ಆತಂಕ ಸೃಷ್ಟಿಸಿದೆ. ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯಲಿದ್ದು, ಬೆಂಗಳೂರಿಗೆ ಫೆಂಗಲ್ ಎಫೆಕ್ಟ್ ತಟ್ಟಲಿದೆ.