ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (IPL). ಇದು ಅತೀ ಹೆಚ್ಚು ಖ್ಯಾತಿ ಪಡೆದುಕೊಂಡ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್. ವರ್ಷಕ್ಕೊಮ್ಮೆ ನಡೆಯುವ ಈ ಪಂದ್ಯಾವಳಿಗೆ ICC ನಡೆಸುವ ಪ್ರತಿಷ್ಠಿತ ಟೂರ್ನಿಗಳಷ್ಟೇ ಕ್ರೇಜ್ ಇದೆ.
ಹಾಗಾಗಿ, ಐಪಿಎಲ್‌ನಲ್ಲಿ ಆಡಬೇಕೆಂದು ದೇಶ-ವಿದೇಶದ ಕ್ರಿಕೆಟರ್ಗಳು ಬಯಸುತ್ತಾರೆ. ಒಮ್ಮೆ ಆಟಗಾರ ಇದರಲ್ಲಿ ಖ್ಯಾತಿ ಪಡೆದರೆ ಕೈತುಂಬಾ ಹಣ ಸಂಪಾದಿಸುತ್ತಾನೆ. ಆದ್ರೆ, ಒಪ್ಪಂದದ ಹಣ ಹೊರತುಪಡಿಸಿ ಒಬ್ಬ ಆಟಗಾರರು ಪ್ರತೀ ಪಂದ್ಯದಿಂದ ಗಳಿಸುವ ಹಣ ಎಷ್ಟು ಎಂಬುದು ನಿಮಗೆ ಗೊತ್ತೇ?.
ಇತ್ತೀಚೆಗೆ ಐಪಿಎಲ್ಗೆ ಸಂಬಂಧಿಸಿದಂತೆ ಬಿಸಿಸಿಐ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಆಟಗಾರರ ಪಂದ್ಯದ ವೇತನವೂ ಒಂದು.
ಇನ್ಮುಂದೆ ಐಪಿಎಲ್‌ನಲ್ಲಿ ಆಡುವ ಆಟಗಾರರು ಒಪ್ಪಂದದ ಮೊತ್ತ ಹೊರತುಪಡಿಸಿ ಪ್ರತೀ ಪಂದ್ಯಕ್ಕೆ ಹೆಚ್ಚುವರಿ ಹಣವನ್ನೂ ಪಡೆಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ಧರು.
ಐಪಿಎಲ್‌ನಲ್ಲಿ ಪ್ರತೀ ಪಂದ್ಯವನ್ನು ಆಡುವುದರಿಂದ ಒಬ್ಬ ಆಟಗಾರನಿಗೆ ಹೆಚ್ಚುವರಿಯಾಗಿ 7.5 ಲಕ್ಷ ರೂಪಾಯಿ ಪಂದ್ಯದ ಶುಲ್ಕವಾಗಿ ನೀಡಲಾಗುತ್ತದೆ ಎಂದು ಶಾ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಒಬ್ಬ ಆಟಗಾರ ಪ್ರತೀ ಪಂದ್ಯದಿಂದ 7.5 ಲಕ್ಷದ ಜೊತೆಗೆ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರೆ, ಕ್ಯಾಚ್ಗಳನ್ನು ಪಡೆದರೆ ಅಥವಾ ವಿಕೆಟ್ಗಳನ್ನು ಉರುಳಿಸಿದರೆ ಪಂದ್ಯದ ನಂತರ ಕೊಡುವ ಪ್ರಶಸ್ತಿ ಮತ್ತು ನಗದು ಬಹುಮಾನಗಳನ್ನು ಪಡೆಯುವ ಅವಕಾಶವಿರುತ್ತದೆ. ಪ್ರತೀ ಪ್ರಶಸ್ತಿಗೂ 1 ಲಕ್ಷ ರೂಪಾಯಿ ಬಹುಮಾನವಾಗಿ ನೀಡಲಾಗುತ್ತದೆ.
ಇದರಿಂದಾಗಿ ಪ್ರತೀ ಆಟಗಾರ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಒಂದೆರಡು ಪ್ರಶಸ್ತಿಗಳನ್ನು ಪಡೆದುಕೊಂಡರೆ ಪ್ರತೀ ಪಂದ್ಯದಿಂದ 9ರಿಂದ 10 ಲಕ್ಷ ರೂ.ವರೆಗೆ ಪಡೆದುಕೊಳ್ಳಬಹುದು.
ಮುಂದಿನ ಆವೃತ್ತಿಯ ಐಪಿಎಲ್ಗೆ ಸಂಬಂಧಿಸಿದಂತೆ ನವೆಂಬರ್ 24 ಮತ್ತು 25ರಂದು ಮೆಗಾ ಹರಾಜು ನಡೆಯಲಿದೆ.
ಈ ಬಾರಿ ಒಟ್ಟು 1574 ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 574 ಆಟಗಾರರನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ. ಈ ಪೈಕಿ 208 ವಿದೇಶಿ ಆಟಗಾರರಿದ್ದು 12 ಅನ್‌ಕ್ಯಾಪ್ಡ್ ಪ್ಲೇಯರ್ಗಳಿದ್ದಾರೆ.
ಉಳಿದಂತೆ, ಭಾರತದ 318 ಆಟಗಾರರಿದ್ದು ಇವರಲ್ಲಿ ಹೆಚ್ಚಿನವರು ಅನ್‌ಕ್ಯಾಪ್ಡ್ ಆಟಗಾರರಾಗಿದ್ದಾರೆ.ನ್‌ಕ್ಯಾಪ್ಡ್ ಆಟಗಾರರಾಗಿದ್ದಾರೆ.