ಭಾರೀ ಮಳೆಯಿಂದಾಗಿ ದೆಹಲಿಯ ಓಲ್ಡ್ ರಾಜೇಂದ್ರ ನಗರದಲ್ಲಿರುವ RAU’s IAS ಅಕಾಡೆಮಿಯ ನೆಲ ಮಾಳಿಗೆಗೆ ಪ್ರವಾಹದ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಕೇರಳ ಮೂಲದ ನವೀನ್ ಡಾಲ್ವಿನ್, ಉತ್ತರ ಪ್ರದೇಶದ ಶ್ರೇಯಾ ಯಾದವ್, ತೆಲಂಗಾಣದ ತಾನ್ಯಾ ಸೋನಿ ಮಳೆ ಅವಾಂತರಕ್ಕೆ ಪ್ರಾಣಬಿಟ್ಟಿದ್ದಾರೆ.
ಐಎಸ್ಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಮೂವರು, ಅರ್ಧದಲ್ಲೇ ತಮ್ಮ ಬದುಕಿನ ಜರ್ನಿ ಮುಗಿಸಿ ಹೊರಟು ಹೋಗಿದ್ದಾರೆ. ಎಂದಿನಂತೆ ಬೆಳಗ್ಗೆ 10 ಗಂಟೆ ಸುಮಾರಿಗೆ ಮೂವರು ಓದಲು ಅಕಾಡೆಮಿಯ ಲೈಬ್ರರಿಗೆ ಬಂದಿದ್ದರು. ಸುಮಾರು 180 ವಿದ್ಯಾರ್ಥಿಗಳು ಕೂತು ಓದಬಹುದಾದ ಲೈಬ್ರರಿಯಲ್ಲಿ ಬೆಳಗ್ಗೆ ಸುಮಾರು 35 ಐಎಎಸ್ ಆಕಾಂಕ್ಷಿಗಳು ಬಂದಿದ್ದರು. ಆದರೆ ದೆಹಲಿಯ ಪರಿಸ್ಥಿತಿ ಬದಲಾಗಿತ್ತು.
ನಿರಂತರವಾಗಿ ಸುರಿದ ಮಳೆಯಿಂದಾಗಿ ಅಲ್ಲಿನ ಚರಂಡಿಗಳೆಲ್ಲ ಉಕ್ಕಿ ಹರಿಯುತ್ತಿದ್ದವು. ಅಂತೆಯೇ, ಅಕಾಡೆಮಿ ಬಳಿಯಿದ್ದ ಚರಂಡಿಯ ತಡೆಗೋಡೆ ಒಡೆದು ಅಕಾಡೆಮಿಗೆ ಏಕಾಏಕಿ ನುಗ್ಗಿಬಿಟ್ಟಿದೆ. ಎಲ್ಲಿ ಏನಾಗ್ತಿದೆ ಅನ್ನುವಷ್ಟರಲ್ಲಿ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳನ್ನು ಬಲಿ ಪಡೆದುಕೊಂಡುಬಿಟ್ಟಿದೆ. ಮಗಳನ್ನು, ಮಗನನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕು ಎಂದು ಕನಸು ಕಂಡು ದೂರದ ದೆಹಲಿಗೆ ಕಳುಹಿಸಿದ್ದ ಹೆತ್ತವರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ಅದರಲ್ಲಿ ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ನಿವಾಸಿ ಶ್ರೇಯಾ ಯಾದವ್ ಅವರ ಕುಟುಂಬ ಕೂಡ ಒಂದು. ಭಾವಿ ಐಎಎಸ್ ಅಧಿಕಾರಿ ಎಂದೇ ಮನೆಯವರು ಶ್ರೇಯಾ ಯಾದವ್ ಅವರನ್ನು ಕರೆಯುತ್ತಿದ್ದರಂತೆ. ಆದರೆ ಎಲ್ಲರ ಮೆಚ್ಚಿನ ಶ್ರೇಯಾ ಇನ್ನಿಲ್ಲ ಅನ್ನೋ ಸುದ್ದಿ ತಿಳಿದು ಕುಟುಂಬ ಆಘಾತಕ್ಕೆ ಒಳಗಾಗಿದೆ. ಮನೆಯಲ್ಲಿ ಸೂತಕದ ಛಾಯೆ ಮೂಡಿದೆ.
ಶ್ರೇಯಾ ಸಾವಿನ ಬಗ್ಗೆ ಮಾತನಾಡಿರುವ ಚಿಕ್ಕಪ್ಪ ಧರ್ಮೇಂದ್ರ ಯಾದವ್.. ನಿನ್ನೆ ಟಿವಿ ನೋಡುತ್ತ ಕುಳಿತ್ತಿದ್ದೆ. ಈ ವೇಳೆ ಶ್ರೇಯಾ ಓದುತ್ತಿದ್ದ ಸಂಸ್ಥೆಯಲ್ಲಿ ಆಗಿರುವ ದುರಂತರ ಬಗ್ಗೆ ತಿಳಿದುಕೊಂಡೆ. ಆಗ ನನಗೆ ತಡೆಯಲಾಗಲಿಲ್ಲ. ಶ್ರೇಯಾಗೆ ಕರೆ ಮಾಡಿದೆ. ಫೋನ್ ಹೋಗಲಿಲ್ಲ. ಹೀಗಾಗಿ ಆಕೆ ಉಳಿದುಕೊಂಡಿದ್ದ ಹಾಸ್ಟೇಲ್ನತ್ತ ಧಾವಿಸಿದೆ.
ಆದರೆ ಅಲ್ಲಿ ಅವಳು ಇರಲಿಲ್ಲ. ಕೊನೆಗೆ ಅಕಾಡೆಮಿಗೆ ಓಡಿದೆ. ಮೃತರ ಲಿಸ್ಟ್ನಲ್ಲಿ ಅವಳ ಹೆಸರು ಇರೋದು ತಿಳಿದು ಆಘಾತಕ್ಕೆ ಒಳಗಾಗಿದೆ. ಆದರೆ ಆಕೆಯ ಮುಖವನ್ನು ನೋಡಲು ನನಗೆ ಆಗಲಿಲ್ಲ. ಯಾಕಂದರೆ ಅವಳನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದರು. ನಾನು ಲೋಹಿಯಾ ಆಸ್ಪತ್ರೆಗೆ ಬಂದೆ. ಆದರೆ ರಾತ್ರಿಯೆಲ್ಲ ಆಸ್ಪತ್ರೆಯಲ್ಲೇ ಕಳೆದೆ. ಆಕೆಯನ್ನ ನೋಡಲು ಇನ್ನೂ ಸಾಧ್ಯವಾಗಿಲ್ಲ ಎಂದು ಧರ್ಮೇಂದ್ರ ಯಾದವ್ ಕಣ್ಣೀರು ಇಟ್ಟಿದ್ದಾರೆ.
ನಾನು ಅವಳನ್ನು ಐಎಎಸ್ ಮಾಡಿಸಬೇಕು ಎಂಬ ಕನಸು ಕಂಡಿದ್ದೆ. ಅವಳಿಗೆ ಓದಲು ಮಾಡಬೇಕಾದ ಎಲ್ಲಾ ಸಹಾಯ ಮಾಡಿದ್ದೆ. ದೆಹಲಿಗೂ ಕಳುಹಿಸಿಕೊಟ್ಟಿದ್ದು ನಾನೇ. ಇಂದು ಆಕೆ ನಮ್ಮ ನಡುವೆ ಇಲ್ಲ. ಕೋಚಿಂಗ್ ಸೆಂಟರ್ ಮಾಡಿದ ಬೇಜವಾಬ್ದಾರಿಯಿಂದ ಜೀವ ಹೋಗಿದೆ. ಸಂಸ್ಥೆ ವಿರುದ್ಧ ಕೇಸ್ ದಾಖಲಿಸಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Tihar jail: ತಿಹಾರ್ ಜೈಲಿನಲ್ಲಿ 125 ಕೈದಿಗಳಿಗೆ HIV ಪಾಸಿಟಿವ್; ಬೆಚ್ಚಿ ಬೀಳಿಸೋ ವರದಿ ಬಹಿರಂಗ