India vs Sri Lanka 2nd ODI 2024 BIG Update!
ಭಾರತ ಮತ್ತು ಶ್ರೀಲಂಕಾ (IND vs SL) ನಡುವಣ ಏಕದಿನ ಸರಣಿಯಲ್ಲಿ ದೊಡ್ಡ ಅಪ್ಡೇಟ್ ಬಂದಿದೆ! ಶ್ರೀಲಂಕಾ ಟೀಮ್ ನ ಒಬ್ಬ ದೊಡ್ಡ ಆಟಗಾರನಿಗೆ ಗೇಟ್ ಪಾಸ್ ನೀಡಿದೆ ಶ್ರೀಲಂಕಾ ಟೀಮ್! ಯಾರು ಆ ಆಟ್ಟಗಾರ ಎಂದು ನೀವೇ ಓದಿ!


2ನೇ ಏಕ ದಿನ ಪಂದ್ಯಕ್ಕೆ ಟೀಮ್ ಗಳು ಸಜ್ಜು!
ಇದೀಗ India vs Sri Lanka 2nd ODI 2024 ಉಭಯ ತಂಡಗಳು 2ನೇ ಏಕದಿನ ಪಂದ್ಯಕ್ಕಾಗಿ ಸಜ್ಜಾಗಿದೆ. ಭಾನುವಾರ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸರಣಿಯಲ್ಲಿ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ.
ಈ ಆಟಗಾರರು ಅಲಭ್ಯ!

ಏಕದಿನ ಸರಣಿಯಿಂದ ಈವರೆಗೆ ಒಟ್ಟು 5 ಆಟಗಾರರು ಹೊರಗುಳಿದಿದ್ದಾರೆ. ಮಂಡಿರಜ್ಜು ಗಾಯದ ಸಮಸ್ಯೆಯ ಕಾರಣ ದಿಲ್ಶಾನ್ ಮಧುಶಂಕ ಈ ಸರಣಿಯಿಂದ ಹೊರಗುಳಿದಿದ್ದರು. ಇದರ ಬೆನ್ನಲ್ಲೇ ಭುಜದ ನೋವಿನ ಕಾರಣ ಮಥೀಶ ಪತಿರಾಣ ಕೂಡ ಏಕದಿನ ಸರಣಿಯಿಂದ ಹಿಂದೆ ಸರಿದಿದ್ದರು.ಇದಕ್ಕೂ ಮುನ್ನ ಉಸಿರಾಟದ ಸೋಂಕಿನ ಕಾರಣ ದುಷ್ಮಂತ ಚಮೀರ ಹೊರಗುಳಿದರೆ, ನುವಾನ್ ತುಷಾರ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಇದೀಗ ವನಿಂದು ಹಸರಂಗ ಕೂಡ ಗಾಯದ ಕಾರಣ ಕೊನೆಯ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
MUDA Scam Updates: HDK ಒತ್ತಡಕ್ಕೆ ಮಣಿದ BJP ರಾಜ್ಯ ಪ್ರಧಾನ ಕಾರ್ಯದರ್ಶಿ?
ಕಣದಿಂದ ಯಾರು ಹೊರಗೆ?
ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ Wanindu Hasaranga 24 ರನ್ಗಳ ಕೊಡುಗೆ ನೀಡಿದ್ದರು. ಹಾಗೆಯೇ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೀಗ ಗಾಯದ ಕಾರಣ ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳಿಂದ ಹಸರಂಗ ಹೊರಗುಳಿಯಲು ನಿರ್ಧರಿಸಿದ್ದಾರೆ. ಇನ್ನು ಹಸರಂಗ ಅವರ ಬದಲಿಯಾಗಿ ಜೆಫ್ರಿ ವಾಂಡರ್ಸೆ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮೊದಲಿಗೆ ಭಾರತ ತಂಡ ಹೀಗಿದೆ!
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್ , ಖಲೀಲ್ ಅಹ್ಮದ್, ಹರ್ಷಿತ್ ರಾಣ.
ಶ್ರೀಲಂಕಾ ತಂಡ ಹೀಗಿದೆ!
ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ (ನಾಯಕ), ಜನಿತ್ ಲಿಯಾನಗೆ, ದುನಿತ್ ವೆಲ್ಲಲಾಗೆ, ಅಕಿಲ ದನಂಜಯ, ಮೊಹಮ್ಮದ್ ಶಿರಾಝ್, ಅಸಿತ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ, ಚಮಿಕ ಕರುಣಾರತ್ನೆ, ಕಮಿಂದು ಮೆಂಡಿಸ್, ನಿಶಾನ್ ಮದುಷ್ಕ, ಮಹೀಶ್ ತೀಕ್ಷಣ, ಈಶಾನ್ ಮಾಲಿಂಗ.
ಇನ್ನಷ್ಟು ಓದಿರಿ:
India VS Sri Lanka: ಟೀಮ್ ಇಂಡಿಯಾಗೆ ದೊಡ್ಡ ಸಂಕಷ್ಟ!
Yadgir news: ಭ್ರಷ್ಟ ಅಧಿಕಾರಿ ಅಮಾನತ್ತು!