WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
ಹೇ ಸೀತಾರಾಮ ನ್ಯೂಸ್ ಡೆಸ್ಕ್ : ಐಪಿಎಲ್-2025 ಮೆಗಾ ಹರಾಜು ಪ್ರಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳು ಯಾರನ್ನು ಉಳಿಸಿಕೊಳ್ಳಬೇಕು? ಯಾವೆಲ್ಲ ಆಟಗಾರರನ್ನು ಕೈಬಿಡಬೇಕು ಅನ್ನೋ ಲೆಕ್ಕಾಚಾರದಲ್ಲಿ ಮುಳುಗಿವೆ. ಇದರಲ್ಲಿ ನಮ್ಮ ಆರ್ಸಿಬಿ ಕೂಡ ಹೊರತಾಗಿಲ್ಲ.
2024ರ ಐಪಿಎಲ್ನಲ್ಲಿ ಆರ್ಸಿಬಿ ಪ್ಲೇ-ಆಫ್ ಪ್ರವೇಶ ಮಾಡಿತ್ತು. ಸತತ 7 ಪಂದ್ಯಗಳಲ್ಲಿ ಸೋತು ಕೆಟ್ಟ ದಾಖಲೆ ಬೆರೆದಿದ್ದ ಫಾಫ್ ನೇತೃತ್ವದ ಡುಪ್ಲೆಸಿಸ್ ತಂಡ ಕೊನೆಗೆ ಸತತ 8 ಪಂದ್ಯಗಳನ್ನು ಗೆದ್ದು ಪ್ಲೇ-ಆಫ್ ಪ್ರವೇಶ ಮಾಡಿತ್ತು. ಮೆಗಾ ಹರಾಜಿನಲ್ಲಿ ಆರ್ಸಿಬಿ ಮೂರು ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಅವರು ಯಾರು ಅನ್ನೋದ್ರ ವಿವರ ಇಲ್ಲಿದೆ.
ಇದನ್ನೂ ಓದಿ : ವಾಟ್ಸ್ಆ್ಯಪ್ ಹೊಸ ಫೀಚರ್! , ಇನ್ಮುಂದೆ ರೀಪ್ಲೈ ಮತ್ತಷ್ಟು ಸುಲಭ
- ಮೊಹ್ಮದ್ ಸಿರಾಜ್: ಆರ್ಸಿಬಿ ತಂಡದ ಜನಪ್ರಿಯ ಬೌಲರ್ ಸಿರಾಜ್. ವಿರಾಟ್ ಕೊಹ್ಲಿ ಹೊರತುಪಡಿಸಿದರೆ ಸಿರಾಜ್ ಅವರನ್ನು ಆರ್ಸಿಬಿ ಹೆಚ್ಚು ನಂಬುತ್ತದೆ. ಜೊತೆಗೆ ಇವರು ಟೀಂ ಇಂಡಿಯಾದ ಎಲ್ಲಾ ಫಾರ್ಮ್ಯಾಟ್ಗಳನ್ನು ಆಡುತ್ತಿರುವ ಸಕ್ರಿಯ ಆಟಗಾರ ಹಿನ್ನೆಲೆಯಲ್ಲಿ ಸಿರಾಜ್ ಅವರನ್ನು ಕೈಬಿಟ್ಟು ಆರ್ಸಿಬಿ ತಪ್ಪು ಮಾಡಲ್ಲ ಎನ್ನಲಾಗಿದೆ.
- ಫಾಫ್ ಡುಪ್ಲೆಸಿಸ್: ಸದ್ಯದ ಮಾಹಿತಿ ಪ್ರಕಾರ ಫಾಫ್ ಡುಪ್ಲೆಸಿಸ್ ಅವರನ್ನೂ ಆರ್ಸಿಬಿ ಉಳಿಸಿಕೊಳ್ಳಲಿದ್ಯಂತೆ. ಆರ್ಸಿಬಿ ಡುಪ್ಲೆಸಿಸ್ಗೆ ಗೇಟ್ಪಾಸ್ ನೀಡಲಿದೆ ಎಂಬ ವರದಿಗಳು ಇದ್ದವು. ಇದೀಗ ಅಚ್ಚರಿ ಎನ್ನುವಂತೆ ಡುಪ್ಲೆಸಿಸ್ ಆರ್ಸಿಬಿ ನಾಯಕರಾಗಿಯೇ ಮುಂದುವರಿಯಲಿದ್ದಾರೆ ಎನ್ನಲಾಗುತ್ತಿದೆ. ಪವರ್ಫುಲ್ ಆರಂಭಿಕ ಆಟಗಾರರಾಗಿರುವ ಫಾಫ್, ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ತೊರೆದ ಮೇಲೆ ನಾಯಕತ್ವದ ಪಟ್ಟ ಕಟ್ಟಲಾಗಿದೆ. ಇವರನ್ನು ಉಳಿಸಿಕೊಂಡು ಬಲಿಷ್ಠ ತಂಡ ಕಟ್ಟುವ ಲೆಕ್ಕಾಚಾರದಲ್ಲಿ ಆರ್ಸಿಬಿ ಇದೆ.
- ವಿರಾಟ್ ಕೊಹ್ಲಿ: ಇವರನ್ನು ಆರ್ಸಿಬಿ ಕೈಬಿಡುವ ಯಾವುದೇ ಚಾನ್ಸ್ ಇಲ್ಲ. ಆರ್ಸಿಬಿ ತಂಡದ ಬೆನ್ನೆಲುಬು ಆಗಿರುವ ಕೊಹ್ಲಿಯನ್ನು ಆರ್ಸಿಬಿ ರಿಟೈನ್ ಮಾಡಿಕೊಳ್ಳಲಿದೆ.