spot_img
spot_img

ಹಣ ಅಂದ್ರೆ, ಹೆಣ ಕೂಡ ಬಾಯಿ ಬಿಡುತ್ತೆ; ದ್ರಾವಿಡ್ ಪದೇ ಪದೇ ಈ ಮಾತು ಸುಳ್ಳು ಮಾಡಿದ್ದಾರೆ.!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಹಣ ಅಂದ್ರೆ, ಹೆಣ ಕೂಡ ಬಾಯಿ ಬಿಡುತ್ತೆ. ಆದ್ರೆ, ಈ ವಿಷ್ಯವನ್ನು ದ್ರಾವಿಡ್, ಪದೇ ಪದೇ ಸುಳ್ಳಾಗಿಸುತ್ತಿದ್ದಾರೆ. ಹೆಡ್ ಕೋಚ್ ಹುದ್ದೆಗೆ RR​ ನೀಡಿದ್ದ ಬ್ಲಾಂಕ್​ ಚೆಕ್​ ಅನ್ನೇ ತಿರಸ್ಕರಿಸಿದ್ದಾರೆ. ಆದ್ರೆ, ಇದರ ಹಿಂದೆ ಒಂದು ನಿಷ್ಠೆಯ ಕಥೆ ಇದೆ. ಅದೇನು?.

ರಾಹುಲ್ ದ್ರಾವಿಡ್, ಟೀಮ್ ಇಂಡಿಯಾದ ದಿ ಗ್ರೇಟ್ ವಾಲ್​. ಆಟಗಾರನಾಗಿ, ಕೋಚ್ ಆಗಿ ದ್ರಾವಿಡ್ ಟೀಮ್ ಇಂಡಿಯಾಗೆ ನೀಡಿದ ಕೊಡುಗೆ ನಿಜಕ್ಕೂ ಶ್ರೇಷ್ಠವಾದ್ದದು. ಆದ್ರೆ, ಇದೇ ರಾಹುಲ್ ದ್ರಾವಿಡ್, ಈಗ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ, ಆರ್​ಆರ್​ ನೀಡಿರುವ ಬ್ಲಾಂಕ್​ ಚೆಕ್ ಅನ್ನೇ ತಿರಸ್ಕರಿಸಿದ್ದಾರೆ. ಇದು ಸಹಜವಾಗೇ ರಾಜಸ್ಥಾನ ರಾಯಲ್ಸ್ ಅಂದ್ರೆ, ದ್ರಾವಿಡ್​​ಗೆ ಯಾಕಿಷ್ಟು ಪ್ರೀತಿ ಎಂಬ ಪ್ರಶ್ನೆ ಉದ್ಬವಿಸುವಂತೆ ಮಾಡಿದೆ. ಆದ್ರೆ, ಇದಕ್ಕೆ ಕಾರಣ ಅಂದು ಆರ್​ಸಿಬಿ ಮಾಡಿದ್ದ ತಪ್ಪು ಹಾಗೂ ಆರ್​ಆರ್​ ಮೇಲಿನ ನಿಷ್ಠೆ.

ಹೌದು! ​​​​​​​​​​​​​​​​2008ರಲ್ಲಿ ದ್ರಾವಿಡ್​ ಆರ್​ಸಿಬಿ ನಾಯಕರಾಗಿದ್ದರು. ಆದ್ರೆ, ಮರು ವರ್ಷವೇ ತಂಡಕ್ಕೆ ಸರ್ಜರಿ ಮಾಡಿದ್ದ ಫ್ರಾಂಚೈಸಿ, ದ್ರಾವಿಡ್​​ರನ್ನ ನಾಯಕತ್ವದಿಂದ ಕೆಳಗಿಳಿಸಿತ್ತು. ಇದರ ಹೊರತಾಗಿಯೂ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡಿದ್ದ ದ್ರಾವಿಡ್​​ಗೆ ನಂತರ ಗೇಟ್​ಪಾಸ್​ ನೀಡಿ ಅಪಮಾನಿಸಿತ್ತು. ಈ ವೇಳೆ ಗೌರವದೊಂದಿಗೆ ಆಹ್ವಾನ ನೀಡಿದ ರಾಜಸ್ಥಾನ್ ರಾಯಲ್ಸ್ ನಾಯಕತ್ವದ ಪಟ್ಟ ನೀಡಿತು. ನಾಯಕನಾಗಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದ ದ್ರಾವಿಡ್​, 2013ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನ ಪ್ಲೇ ಆಫ್​​​​ಗೇರಿಸಿದ್ದರು. ಅದೇ ವರ್ಷ ನಡೆದ ಚಾಂಪಿಯನ್ ಲೀಗ್ ಟಿ20 ಟೂರ್ನಾಮೆಂಟ್ ಫೈನಲ್ಸ್​ ತಲುಪಿಸಿದ್ರು. 2011ರಿಂದ 2013ರ ತನಕ ಕ್ರಮವಾಗಿ 343, 462, 471 ರನ್ ಗಳಿಸಿದ್ದ ದ್ರಾವಿಡ್​, 2013ರಲ್ಲೇ ರಿಟೈರ್ಮೆಂಟ್ ಘೋಷಿಸಿ 2014, 2015ರಲ್ಲಿ ಆರ್​ಆರ್​ ತಂಡದ ಮಾರ್ಗದರ್ಶಕರಾಗಿದ್ದರು.

ನಂತರ ನಡೆದಿದ್ದೆಲ್ಲ ಇತಿಹಾಸ. ಆದ್ರೆ, ಇತಿಹಾಸ ಸೃಷ್ಟಿಸಿದ ದ್ರಾವಿಡ್, 9 ವರ್ಷಗಳ ನಂತರ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೆಡ್ ಕೋಚ್ ಆಗಿ ಮರಳಿದ್ದಾರೆ. ಇದಕ್ಕೆ ಕಾರಣ ಅಂದು ಯಾವೊಂದು ಫ್ರಾಂಚೈಸಿ ಕೂಡ ದ್ರಾವಿಡ್ ಮೇಲೆ ವಿಶ್ವಾಸ ಇಟ್ಟಿರಲಿಲ್ಲ. ಈ ವೇಳೆ ನೆರವಾಗಿದ್ದೆ ರಾಜಸ್ಥಾನ್ ರಾಯಲ್ಸ್. ಇದೇ ಕಾರಣಕ್ಕೆ ಆರ್​ಆರ್​ ಮೇಲೆ ನಿಷ್ಠೆ ಹೊಂದಿರುವ ದ್ರಾವಿಡ್, ಬ್ಲಾಂಕ್​ ಚೆಕ್ ಪಡೆಯದಿರಲು ಮುಖ್ಯ ಕಾರಣ.

 

WhatsApp Group Join Now
Telegram Group Join Now
Instagram Account Follow Now
spot_img

Related articles

Heart health is high;ಹಲಸಿನ ಹಣ್ಣು ತಿಂದ್ರೆ ಆರೋಗ್ಯಕ್ಕೆ 10 ಪ್ರಯೋಜನ.

Jackfruit News: ಎಲ್ಲಾ ಕಾಲದಲ್ಲೂ ಸಿಗುವ ಹಲಸಿನ ಹಣ್ಣು ತಿಂದರೆ ಬಹಳಷ್ಟು ಅನುಕೂಲಗಳು ಇವೆ. ಹಲಸಿನ ಹಣ್ಣಿನ 10 healthಕರ ಗುಣಗಳ ಮಾಹಿತಿ ಇಲ್ಲಿದೆ ನೋಡಿ.ಹಲಸಿನ...

A huge reduction in the prices of smartphones and electrical goods after the Budgetದೊಡ್ಡ ಬೇಡಿಕೆ ಇಟ್ಟಿರುವ ಟೆಕ್.

Smartphone and Electrical News: ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಟೆಕ್​ ಕ್ಷೇತ್ರ ಆಮದು ಸುಂಕ ಕಡಿಮೆ ಮಾಡುವಂತೆ...

The beginning of a new life: ತನ್ನ ಹೊಸ ಮನೆಗೆ ವಿಶೇಷ ವ್ಯಕ್ತಿಯ ಹೆಸರಿಟ್ಟ ಸಾನಿಯಾ ಮಿರ್ಜಾ; ಏನದು?

Sania Mirza News: ಶೋಯೆಬ್​ ಮಲ್ಲಿಕ್​ಗೆ ​​ವಿಚ್ಛೇದನ ನೀಡಿದ ಬಳಿಕ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಶೋಯೆಬ್​...

Badrinath Mandir doors to open soon:ಭಕ್ತಾದಿಗಳಿಗೆ ದರ್ಶನ ಸಿಗುವುದು ಯಾವಾಗ?

Badrinath Mandir News: ವಸಂತ ಪಂಚಮಿಯ ದಿನದಂದು ಹಿಂದು ಕ್ಯಾಲೆಂಡರ್ ಪ್ರಕಾರ ಮಂದಿರದ ಬಾಗಿಲು ತೆಗೆಯುವ ದಿನಾಂಕವನ್ನು ನಿಶ್ಚಯ ಮಾಡಲಾಗಿದೆ. ಮೇ 4, 2025ರಂದು ಬೆಳಗ್ಗೆ...