MUDA Scam :
HDK ಒತ್ತಡಕ್ಕೆ ಮಣಿದ BJP ರಾಜ್ಯ ಪ್ರಧಾನ ಕಾರ್ಯದರ್ಶಿ ಸಮಾವೇಶದಲ್ಲಿ ಕಾಣಿಸಿಕೊಳ್ಳದ ಪ್ರೀತಂ ಗೌಡ?ಮುಡಾ ಹಗರಣಕ್ಕೆ (Muda Scam) ಸಂಬಂಧಿಸಿದಂತೆ CM ಸಿದ್ದರಾಮಯ್ಯನವರ ವಜಾಕ್ಕೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಆರಂಭಿಸಿವೆ.
Muda Scam ರಾಜ್ಯ ರಾಜಕೀಯದಲ್ಲಿ ಮಹತ್ವದ ಸಂಚಲನ?
Muda Scam ರಾಜ್ಯ ರಾಜಕೀಯದಲ್ಲಿ ಮಹತ್ವದ ಸಂಚಲನ ಸೃಷ್ಟಿಸಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಭಾಗಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೂಡಲೆ C M ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು BJP ಮತ್ತುJDS ಜಂಟಿಯಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಆರಂಭಿಸಿವೆ. ಪಾದಯಾತ್ರೆ ಉದ್ಘಟನಾ ಕಾರ್ಯಕ್ರಮದಲ್ಲಿ BJP ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ (Preetham gowda) ಕಾಣಸಿಕೊಂಡಿಲ್ಲ. ಈ ಮೂಲಕ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರ ಷರತ್ತಿಗೆ ಬಿಜೆಪಿ ಸಮ್ಮತಿಸಿದೆ
ಒತ್ತಡ ಯಾವುದು ಮತ್ತು ಷರತ್ತು ಏನು ?
ಭ್ರಷ್ಟಾಚಾರ ಮುಕ್ತ ಆಡಳಿತಕ್ಕೋಸ್ಕರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ, ಜೆಡಿಎಸ್ ನಾಯಕರು ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದ್ದಾರೆ. ಮೈಸೂರು ಚಲೋ ಪಾದಯಾತ್ರೆ ಸಿದ್ಧತೆ ಸಮಯದಲ್ಲೇ ಅಪಸ್ವರ ಕೇಳಿಬಂದಿತ್ತು. ಜೆಡಿಎಸ್ ನಾಯಕರು ಪಾದಯಾತ್ರೆಗೆ ಬೆಂಬಲ ಸೂಚಿಸುವುದಿಲ್ಲ ಎಂದು ಹೇಳಿದ್ದರು. ರಾಜ್ಯದಲ್ಲಿಗ ಪ್ರವಾಹ ಪರಿಸ್ಥತಿ ಉಂಟಾಗಿದೆ, ಹೀಗಾಗಿ ಪಾದಯಾತ್ರೆ ನಡೆಸುವುದು ಬೇಡ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸೇರಿದಂತೆ ಎಲ್ಲ ಜೆಡಿಎಸ್ ನಾಯಕರು ಪುನರ್ ಉಚ್ಚರಿಸಿದ್ದರು. ಆದರೆ ಬಿಜೆಪಿ ಇದನ್ನುಲೆಕ್ಕಿಸದೆ ಪಾದಯಾತ್ರೆಯ ತಯಾರಿಯನ್ನು ಜೋರಾಗಿಯೇ ನಡೆಸಿತ್ತು. ಪಾದಯಾತ್ರೆಗೆ ಪೂರ್ವ ಸಿದ್ಧತೆ ಸಭೆಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಯವರನ್ನೂ ಆಹ್ವಾನಿಸಲಾಗಿತ್ತು . ಈ ಸಭೆಯಲ್ಲಿ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಕೂಡ ಭಾಗಿಯಾಗಿದ್ದರು. ಅಲ್ಲದೆ, ಪಾದಯಾತ್ರೆ ಕೂಡ ಪ್ರೀತಂ ಗೌಡ ನೇತೃತ್ವದಲ್ಲೇ ನಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಹೆಚ್ಡಿ ಕುಮಾರಸ್ವಾಮಿ ಯವರು ಬಿಜೆಪಿ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ
ಪಾದಯಾತ್ರೆ ಮತ್ತು ಸಭೆಯಲ್ಲಿ ಪ್ರೀತಂ ಗೌಡ ಭಾಗಿಯಾಗಿದ್ದಕ್ಕೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಯವರು ಬಿಜೆಪಿ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು.
ಮೈಸೂರು ಚಲೋ ಕಾರ್ಯಕ್ರಮದದಲ್ಲಿ @JanataDal_S ಮತ್ತು @BJP4Karnataka ಪಕ್ಷಗಳ ಕಾರ್ಯಕರ್ತರು, ಸಾರ್ವಜನಿಕ ಬಂಧುಗಳನ್ನು ಉದ್ದೇಶಿಸಿ ರಾಜ್ಯದಲ್ಲಿ ನಡೆದಿರುವ ಸರಣಿ ಭ್ರಷ್ಟಾಚಾರ ಹಗರಣಗಳು, ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಲಾಯಿತು.#ಮೈಸೂರು_ಚಲೋ #MysoreChalo#JdsBjp pic.twitter.com/XXLY6fpGVY
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 3, 2024
ಕುಮಾರಸ್ವಾಮಿ ಆಕ್ರೋಶಕ್ಕೆ ಕಾರಣ
ಪ್ರೀತಂ ಗೌಡ ಅವರು ತಮ್ಮ ಬೆಂಬಲಿಗರ ಮೂಲಕ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳ ಪೆನ್ಡ್ರೈವ್ ಅನ್ನು ಹಂಚಿದ್ದಾರೆ. ದೇವೇಗೌಡರ ಕುಟುಂಬಕ್ಕೆ ವಿಷ ಹಾಕಲು ಹೊರಟಿದ್ದವರನ್ನು ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ. ಮತ್ತು ಪಾದಯಾತ್ರೆ ಬಗ್ಗೆ ನಮಗೆ ಯಾವದೇ ಮಾಹಿತಿಯನ್ನು ನೀಡಿಲ್ಲ , ಪಾದಯಾತ್ರೆಗೆ ನಮ್ಮ ಬೆಂಬಲವಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಬಿಜೆಪಿ ಹೈಕಮಾಂಡ್ ರಾಜಿ ಸಂಧಾನ
ಪಾದಯಾತ್ರೆಗೆ ಸಂಬಂಧಿಸಿದಂತೆ ಆರಂಭದಲ್ಲೇ ಎದುರಾಗಿದ್ದ ವಿಘ್ನಕ್ಕೆ ಎಚ್ಚೆತ್ತುಕ್ಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಹೆಚ್ಡಿ ಕುಮಾರಸ್ವಾಮಿ ಅವರನ್ನು ದೆಹಲಿಗೆ ಕರೆಸಿಕೊಂಡು ರಾಜಿಸಂಧಾನ ಮಾಡಿದರು. ಈ ವೇಳೆ ಹೆಚ್ಡಿ ಕುಮಾರಸ್ವಾಮಿ ಹೈಕಮಾಂಡ್ ಮುಂದೆ ಪ್ರೀತಂ ಗೌಡ ಪಾದಯಾತ್ರೆಯಲ್ಲಿ ಭಾಗಿಯಾಗದಂತೆ ಷರತ್ತು ವಿಧಿಸಿದ್ದರು. ಪ್ರೀತಂಗೌಡ ಮೈಸೂರ ಚಲೋ ಪಾದಯಾತ್ರೆಯಲ್ಲಿ ಭಾಗಿಯಾಗಲಿಲ್ಲ.
ರಾಜ್ಯ @INCKarnataka ಸರಕಾರದ ಮೂಡಾ, ವಾಲ್ಮೀಕಿ ಅಕ್ರಮ ಸೇರಿ ಸರಣಿ ಭ್ರಷ್ಟ ಹಗರಣಗಳ ವಿರುದ್ಧ @JanataDal_S, @BJP4Karnataka ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP, ಶ್ರೀ @BSBommai, ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಶ್ರೀ @AgrawalRMD, ಕೇಂದ್ರ ಸಚಿವರಾದ… pic.twitter.com/9XsIoSQd8b
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 3, 2024
ಇನ್ನಷ್ಟು ಓದಿರಿ:
Mooda scamನಲ್ಲಿ ನನ್ನ ಪಾತ್ರ ಏನು ಇಲ್ಲ CM Siddaramaiah?
Wayanad Landslide: ಕೇರಳ ಜನರ ಪರವಾಗಿ ನಿಂತ ಕರ್ನಾಟಕ ಸರ್ಕಾರ!