ಬೆಂಗಳೂರು: ಬಿಪಿಎಲ್ ಕಾರ್ಡ್ ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ. ಬಡವರು ಆತಂಕ ಪಡಬೇಕಾಗದ ಅಗತ್ಯವಿಲ್ಲ.
ಸರ್ಕಾರ ಅನರ್ಹರ ಬಿಪಿಎಲ್ ಕಾರ್ಡ್ ರದ್ದು ಪಡಿಸುತ್ತಿದ್ದು, ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗುತ್ತಿದೆ. ಇದಕ್ಕೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ನಾವು ಬಡವರ ಪರವಾಗಿಯೇ ಇರೋದು.
ಅರ್ಹ ಬಿಪಿಎಲ್ ಕಾರ್ಡ್ ದಾರರಿಗೆ ಅನ್ಯಾಯವಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನೀಡುತ್ತಿದ್ದ ಏಳು ಕೆಜಿ ಅಕ್ಕಿಯನ್ನ ಐದು ಕೆಜಿಗೆ ಇಳಿಸಿದ್ದು ಬಿಜೆಪಿಗರು.
ಬಡವರ ಪರವಾಗಿ ಇರೋದು ನಾವು. ಗ್ಯಾರಂಟಿ ಯೋಜನೆ ಮಾಡಿದ್ದು ನಾವು. ಇಂದಿರಾ ಕ್ಯಾಂಟೀನ್ ಮಾಡಿದ್ದು ನಾವು. ಬಿಜೆಪಿ ಅಧಿಕಾರ ಇರೋ ರಾಜ್ಯಗಳಲ್ಲಿ ಇದ್ಯಾ ಎಂದು ಪ್ರಶ್ನಿಸಿದರು.
ಎಸ್ ಸಿ ಪಿ ಟಿಎಸ್ ಪಿ ಹಣ ಇಟ್ಟಿದ್ದೇವೆ. ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ 1 ಕೋಟಿ 22 ಲಕ್ಷ ಕುಟುಂಬದ ಮನೆ ಯಜಮಾನಿಗೆ 2000 ಸಾವಿರ ಹಣ ಕೊಡುತ್ತಿದ್ದೇವೆ. ಇದಕ್ಕಾಗಿ ಸರ್ಕಾರ 32 ಸಾವಿರ ಕೋಟಿ ಖರ್ಚು ಮಾಡುತ್ತಿದೆ ಎಂದರು.
ಐದು ಗ್ಯಾರಂಟಿ ಯೋಜನೆಗಳಿಗೆ ಒಟ್ಟು 57 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ ಎಂದ ಅವರು, ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ.
ಯಾವುದೇ ಕಾರಣಕ್ಕೂ ಅರ್ಹ ಬಿಪಿಎಲ್ ಕಾರ್ಡ್ ಹೊಂದಿದವರುಗೆ ಸಮಸ್ಯೆ ಅಗಬಾರದು. ಅನರ್ಹರಾಗಿರವವರು ಒಬ್ಬರೋ ಇಬ್ಬರೋ ಸೇರಿಕೊಂಡ್ರೂ ಪರವಾಗಿಲ್ಲ. ಆದರೆ ಅರ್ಹರಿಗೆ ಅನ್ಯಾಯ ಆಗಬಾರದು ಎಂದರು.
ನಾವು ಬಡವರ ಪರವಾಗಿಯೇ ಇರೋದು. ಬಿಜೆಪಿಯಿಂದ ನಾವು ಪಾಠ ಕಲಿಯಬೇಕಿಲ್ಲ. ಅವರು ಮೇಲ್ಜಾತಿಯ, ಶ್ರೀಮಂತರ ಪರ ಇರೋದು.
ಇನ್ನು ಡಿಕೆ ಶಿವಕುಮಾರ್ ಇದೇ ಸಂದರ್ಭದಲ್ಲಿ ಮಾತನಾಡಿ, ಬಿಜೆಪಿ, ಕುಮಾರಸ್ವಾಮಿ ಇಬ್ಬರೂ ಅವರ ಕಾಲದಲ್ಲಿ ಏನೇನು ಅನ್ಯಾಯ ಮಾಡಬೇಕೋ ಮಾಡಿದ್ದಾರೆ.
ಯಾರು ಬಡವರು ಇದ್ದಾರೊ ಅವರಿಗೆ ಬಿಪಿಎಲ್ ಕಾರ್ಡ್ ಸಿಗಲಿದೆ. ಕೆಲವರು ಆದಾಯ ತೆರಿಗೆ ಪಾವತಿದಾರರಿದ್ದಾರೆ ಹಾಗೂ ಜಿಎಸ್‌ಟಿ ಕಟ್ಟುವವರು ಇದ್ದಾರೆ. ಅಂತಹಾ ಹೆಸರುಗಳನ್ನು ತೆಗೆಯಬೇಕು ಎಂದು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಅಕಸ್ಮಾತ್ ಯಾರಾದ್ರೂ ಬಡವರ ಹೆಸರು ಕೈ ಬಿಟ್ಟಿದ್ರೆ, ಮತ್ತೆ ಅರ್ಜಿ ಹಾಕಿ ಪಡೆದುಕೊಳ್ಳಬಹುದು ಎಂದ ಅವರು, ಇದೇ ಸಂದರ್ಭದಲ್ಲಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿ, ಕುಮಾರಸ್ವಾಮಿ ಅವರಿಗೆ ಮಾಡಲು ಕೆಲಸ ಇಲ್ಲ. ಮೋದಿ ಏನೋ ಕೆಲಸ ಕೊಟ್ಟಿದ್ದಾರಲ್ಲ ಅದನ್ನು ಮಾಡಲಿ.
ಅದೇನೋ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರಲ್ಲ ಮಾಡಲಿ ಎಂದು ಸವಾಲು ಹಾಕಿದರು.ಅವರು ಬಡವರ, ಮೀಸಲಾತಿಯ ಪರ ಮಾತನಾಡಿದ್ದಾರಾ? ಎಂದು ಪ್ರಶ್ನಿಸಿದರು.