ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಶೋ ಬಿಗ್ಬಾಸ್ ಸೀಸನ್ 11, 10ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಈ ವಾರ ಇಡೀ ಬಿಗ್ಬಾಸ್ ಮನೆ ಸಾಮ್ರಾಜ್ಯವಾಗಿ ಬದಲಾಗಿ ಬಿಟ್ಟಿತ್ತು. ಆದರೆ ಇದರ ಮಧ್ಯೆ ಈ ವಾರದ ಕಳಪೆ ಪಟ್ಟವನ್ನು ವೈಲ್ಡ್ ಕಾರ್ಡ್ ಸ್ಪರ್ಧಿಗೆ ಕೊಟ್ಟಿದ್ದಾರೆ.
ಹೌದು, ಇದೇ ಮೊದಲ ಬಾರಿಗೆ ಬಿಗ್ಬಾಸ್ ಮನೆಯ ಎಲ್ಲ ಸ್ಪರ್ಧಿಗಳು ಕಳಪೆ ಪಟ್ಟವನ್ನು ಶೋಭಾ ಶೆಟ್ಟಿಗೆ ಕೊಟ್ಟಿದ್ದಾರೆ. ಅದರಲ್ಲೂ ಧನರಾಜ್ ಅವರು ನೀಡಿದ ಕಾರಣಕ್ಕೆ ಶೋಭಾ ಶೆಟ್ಟಿ ಕೆಂಡಾಮಂಡಲರಾಗಿದ್ದಾರೆ. ನಿಜಕ್ಕೂ ನೀವು ಏಕೆ ನನ್ನನ್ನೂ ಟಾರ್ಗೆಟ್ ಮಾಡ್ತಾ ಇದ್ದೀರಿ ಅಂತ ಗೊತ್ತಿಲ್ಲ. ಲೈಫ್ನಲ್ಲಿ ಏನೇನೋ ಫೇಸ್ ಮಾಡಿದ್ದೀನಿ. ಆದರೆ 24 ಗಂಟೆ ಜೈಲು ನನಗೇನೂ ಅಲ್ಲ ಅಂತ ಹೇಳಿ ಎದ್ದು ಹೋಗಿದ್ದಾರೆ.
ಇದಾದ ಬಳಿಕ ತಮ್ಮ ತಾಯಿಗೆ ಅಳುತ್ತಲೇ ಸಂದೇಶ ಕೊಟ್ಟಿದ್ದಾರೆ. ಅಮ್ಮ ಇವತ್ತು ನಾನು ಜೈಲಿಗೆ ಹೋಗುತ್ತಿದ್ದೇನೆ. ಇದನ್ನೂ ನೋಡಿ ಅಳಬೇಡ ನೀನು ಅಂತ ಹೇಳಿದ್ದಾರೆ. ನಂತರ ಜೈಲಿಗೆ ಹೋಗಿ ಕಣ್ಣೀರು ಹಾಕಿದ್ದಾರೆ. ನನಗೆ ಕಳಪೆ ಕೋಡುತ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ ಅಂತ ಮಾತಾಡಿಕೊಂಡಿದ್ದಾರೆ.
ಕಳೆದ ವಾರ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ರಜತ್ ಕಿಶನ್ಗೆ ಸ್ಪರ್ಧಿಗಳು ಕಳಪೆ ಪಟ್ಟ ಕೊಟ್ಟಿದ್ದರು. ಆದರೆ ಈ ವಾರವು ಇದು ಮತ್ತೆ ರಿಪಿಟ್ ಆಗಿದೆ. ಈ ವಾರ ಸಖತ್ ಸ್ಟ್ರಾಂಗ್ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿಗೆ ಕಳಪೆ ಪಟ್ಟ ಕೊಟ್ಟಿದ್ದಾರೆ. ಹೀಗಾಗಿ ಶೋಭಾ ಶೆಟ್ಟಿ ಜೈಲಿನಲ್ಲೇ ಕಣ್ಣೀರು ಹಾಕಿದ್ದಾರೆ.