ಕುಪರ್ಟಿನೋ ಮೂಲಕ ಆ್ಯಪಲ್ ಕಂಪನಿ ಐಫೋನ್ (Apple company iPhone ) 16 ಸರಣಿಯನ್ನು ಪರಿಚಯಿಸಿದ್ದು, ಇಂದು ಭಾರತದಲ್ಲಿ ಮಾರಾಟ ಪ್ರಾರಂಭವಾಗಿದೆ. ಬಹುತೇಕರು ನೂತನ ಐಫೋನ್ ಖರೀದಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ : ಬೆಳಗಾವಿ ಜಿಲ್ಲೆ ವಿದ್ಯಾರ್ಥಿನಿಯರು ಶೈಕ್ಷಣಿಕ ಜಿಲ್ಲಾ ಮಟ್ಟದ ಬಾಲಕಿಯರ ಪಂದ್ಯಾವಳಿಯಲ್ಲಿ ಭಾಗವಯಹಿ ಕಾಲೇಜಗೆ ಕಿರ್ತೀ ತಂದಿದ್ದಾರೆ.!
ಮುಂಬೈ, ದೆಹಲಿಯಲ್ಲಿ ಶಾಪ್‌ಗಳ ಮುಂದೆ ಜನರು ಕ್ಯೂ ನಿಂತಿರುವ ಘಟನೆಯು ಸಾಕ್ಷಿಯಾಗಿದೆ, ಆ್ಯಪಲ್ ಸ್ಟೋರ್ ತೆರೆಯುವುದಕ್ಕೂ ಮುನ್ನವೇ ಜನರು ಐಫೋನ್ 16 ಖರೀದಿಸಲು ಸಾಲುಗಟ್ಟಿನಿಂತ ಘಟನೆ ದೃಶ್ಯ ಸಮೇತ ಬೆಳಕಿಗೆ ಬಂದಿದೆ.
ಆದರೆ ಐಫೋನನ್ನು ಬರೀ 10 ನಿಮಿಷದಲ್ಲಿ ಮನೆ ಬಾಗಿಲಲ್ಲೇ ಖರೀದಿಸಬಹುದಾಗಿದೆ. ಅದಕ್ಕೆಂದೇ ಆನ್ಲೈನ್ ಕಿರಾಣಿ ವಿತರಣಾ ವೇದಿಕೆ ಬಿಗ್ಬಾಸ್ಕೆಟ್ ಐಫೋನ್ 16ಗಾಗಿ ಟಾಟಾ ಕ್ರೋಮಾ ಜೊತೆಗೆ ಪಾಲುದಾರಿಕೆ ಹೊಂದಿದೆ.
ಬಿಗ್ ಬಾಸ್ಕೆಟ್ನ ಎಲೆಕ್ಟ್ರಾನಿಕ್ಸ್ ವರ್ಗಕ್ಕೆ ಭೆಟಿ ನೀಡುವ ಮೂಲಕ ಐಫೋನ್ 16 ಸರಣಿ ಖರೀದಿಸಬಹುದಾಗಿದೆ. ಕಂಪನಿಯು ಬರೀ 10 ನಿಮಿಷದಲ್ಲಿ ವಿತರಿಸುವ ಭರವಸೆಯನ್ನು ನೀಡಿದೆ. ಬೆಂಗಳೂರು, ದೆಹಲಿ, ಮುಂಬೈ ಆ್ಯಪಲ್ ಪ್ರಿಯರು ಖರೀದಿಸಬಹುದಾಗಿದೆ.
ಐಫೋನ್ಗಾಗಿ ಕ್ಯೂ ನಿಂತ ಜನರು
ಮುಂಬೈನ ಬಿಕೆಸಿಯಲ್ಲಿರುವ ಮಳಿಗೆಯಲ್ಲಿ ಐಫೋನ್ 16 ಸರಣಿ ಖರೀದಿಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಕಂಡಿದ್ದು, ಬೆರಗುಗೊಳಿಸುವಂತೆ ಮಾಡಿದೆ. ಅತ್ತ ದೆಹಲಿಯಲ್ಲಿ ಇಂತಹದ್ದೇ ದೃಶ್ಯ ಕಂಡುಬಂದಿದೆ.
ಇದನ್ನೂ ಓದಿ : ಬಾಂಗ್ಲಾಗೆ ಶಾಕ್ ಕೊಟ್ಟ ಆರ್ ಅಶ್ವಿನ್ ಹಾಗಲ್ಲ ; ಇತಿಹಾಸ ನೆನಪಿಸಿದ ಸ್ಟಾರ್ ಆಲ್ರೌಂಡರ್..! ಏನದು
ಆ್ಯಪಲ್ ಸ್ಟೋರ್ ತೆರೆಯುವ ಮುನ್ನವೇ ಪೋನ್ ಶಾಪ್‌ಗಳ ಮುಂದೆ ಜನರು ಸೇರಿದ್ದಾರೆ. ಕ್ಯೂ ನಿಂತು ಐಫೋನ್ 16 ಸರಣಿ ಖರೀದಿಸಲು ಮುಂದಾಗಿದ್ದಾರೆ. ಕಳೆದ ವರ್ಷ ಐಫೋನ್ 15 ಮಾರಾಟದ ಸಮಯದಲ್ಲೂ ಇಂತಹದ್ದೇ ದೃಶ್ಯ ಕಂಡುಬಂದಿದೆ.
ದೆಹಲಿ ಸಾಕೇತ್ನಲ್ಲಿರುವ ಆ್ಯಪಲ್ ಸ್ಟೋರ್(Apple Store ) ಹೊರಗಡೆಯು ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ. ಸದ್ಯ ನೂತನ ಐಫೋನ್ ಖರೀದಿಸಲು ಇಷ್ಟೊಂದು ಜನರು ಕುತೂಹಲ ಭರಿತರಾಗಿದ್ದಾರೆ ಎಂಬುದು ಅಚ್ಚರಿಗೆ ದೂಡಿದೆ.