ನಿನ್ನೆ 83,603.04 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದ್ದ ಸೆನ್ಸೆಕ್ಸ್ ಇಂದು 865.14 ಅಂಕಗಳ ಏರಿಕೆಯೊಂದಿಗೆ 84,049.94 ಅಂಕಗಳಿಗೆ ಏರಿ ಇತಿಹಾಸದಲ್ಲಿ ಮೊದಲ ಬಾರಿಗೆ 84 ಸಾವಿರ ಗಡಿದಾಟಿ ದಾಖಲೆ ಬರೆದಿದೆ.
ಇದನ್ನೂ ಓದಿ : ಆ್ಯಪಲ್ ಪ್ರಿಯರಿಗೆ ಗೂಡ್ ನ್ಯೂಸ್ ; iPhone 16 ಸರಣಿಯನ್ನು ಮನೆ ಬಾಗಿಲಲ್ಲೇ ವಿತರಿಸುತ್ತೆ ಈ ಫ್ಲಾಟ್ಫಾರ್ಮ್!
ಮುಂಬೈ: ಅಮೆರಿಕ ಫೆಡರಲ್ ಬ್ಯಾಂಕ್ ದರ ಕಡಿತದ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಚೇತೋಹಾರಿ ವಹಿವಾಟು ನಡೆಯುತ್ತಿದ್ದು ಇಂದು ಷೇರುಮಾರುಕಟ್ಟೆ ಆರಂಭದಲ್ಲೇ ಏರಿಕೆಯಲ್ಲಿ ವಹಿವಾಟು ನಡೆಸುತ್ತಿದೆ.
ಹೌದು.. ನಿನ್ನೆ 83,603.04 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದ್ದ ಸೆನ್ಸೆಕ್ಸ್ ಇಂದು 865.14 ಅಂಕಗಳ ಏರಿಕೆಯೊಂದಿಗೆ 84,049.94 ಅಂಕಗಳಿಗೆ ಏರಿ ಇತಿಹಾಸದಲ್ಲಿ ಮೊದಲ ಬಾರಿಗೆ 84 ಸಾವಿರ ಗಡಿದಾಟಿ ದಾಖಲೆ ಬರೆದಿದೆ.
ಇದನ್ನೂ ಓದಿ: ಬಾಂಗ್ಲಾಗೆ ಶಾಕ್ ಕೊಟ್ಟ ಆರ್ ಅಶ್ವಿನ್ ಹಾಗಲ್ಲ ; ಇತಿಹಾಸ ನೆನಪಿಸಿದ ಸ್ಟಾರ್ ಆಲ್ರೌಂಡರ್..! ಏನದು
ಅಂತೆಯೇ ನಿಫ್ಟಿಕೂಡ ಆರಂಭಿಕ ವಹಿವಾಟಿನಲ್ಲಿ 261.10 ಅಂಶಗಳ ಏರಿಕೆಕಂಡು 25,676.90 ಅಂಕಗಳಿಗೆ ಏರಿಕೆಯಾಗಿದೆ.
ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಕಡಿತಗೊಳಿಸುವ ನಿರ್ಧಾರದ ನಂತರ ಜಾಗತಿಕ ಮಾರುಕಟ್ಟೆಯು ಏರುಗತಿಯಲ್ಲಿ ಸಾಗಿದೆ. ವಾರದ ಕೊನೆಯ ವಹಿವಾಟಿನ ದಿನವಾದ ಇಂದು ಅಂದರೆ ಶುಕ್ರವಾರ ನಿಫ್ಟಿ, ಸೆನ್ಸೆಕ್ಸ್ ಏರಿಕೆಯೊಂದಿಗೆ ವಹಿವಾಟು ಆರಂಭಿಸಿವೆ. ಭಾರತೀಯ ಷೇರುಗಳು ಹೆಚ್ಚು ಮೌಲ್ಯಯುತವಾಗಿದ್ದು, ಭಾರತೀಯ ಮಾರುಕಟ್ಟೆಗಳಲ್ಲಿ ದೇಶೀಯ ಹೂಡಿಕೆದಾರರ ಬೆಂಬಲ ಮುಂದುವರಿದಿದೆ.
ಇದನ್ನೂ ಓದಿ : ಬೆಳಗಾವಿ ಜಿಲ್ಲೆ ವಿದ್ಯಾರ್ಥಿನಿಯರು ಶೈಕ್ಷಣಿಕ ಜಿಲ್ಲಾ ಮಟ್ಟದ ಬಾಲಕಿಯರ ಪಂದ್ಯಾವಳಿಯಲ್ಲಿ ಭಾಗವಯಹಿ ಕಾಲೇಜಗೆ ಕಿರ್ತೀ ತಂದಿದ್ದಾರೆ.!
ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ ಅಮೆರಿಕ ಬಡ್ಡಿದರ ಕಡಿತ
ಇನ್ನು ಇಂದಿನ ವಹಿವಾಟಿನ ಮೇಲೆ ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿದರ ಕಡಿತಗೊಳಿಸಿದ್ದು ಪರಿಣಾಮ ಬೀರಿದೆ. ಕಳೆದ 4 ವರ್ಷಗಳಲ್ಲಿ ಒಮ್ಮೆಯೂ ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿದರ ಕಡಿತಗೊಳಿಸಿರಲಿಲ್ಲ. ಇದೇ ಮೊದಲ ಬಾರಿಗೆ ಬಡ್ಡಿದರ ಕಡಿತ ಮಾಡಿದ್ದು, ಇದು ಷೇರುಮಾರುಕಟ್ಟೆ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.