ಭಾರತ ಸರ್ಕಾರದ ರೈಲ್ವೆ ಸಚಿವಾಲಯದಡಿ ಬರುವ ರೈಲ್ವೆ ನೇಮಕಾತಿ ಸೆಲ್ (ಆರ್ಆರ್ಸಿ) ವರ್ಷದಲ್ಲಿ ಇಲಾಖೆಯ ಉದ್ಯೋಗಗಳ ನೇಮಕಾತಿಗೆ ಹಲವು ಪರೀಕ್ಷೆ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈಗಾಗಲೇ ಈ ಉದ್ಯೋಗಗಳಿಗೆ ನೋಟಿಫಿಕೇಶನ್ ಅನ್ನು ರಿಲೀಸ್ ಮಾಡಲಾಗಿದ್ದು, ಅರ್ಜಿ ಕೂಡ ಆರಂಭವಾಗಿವೆ. ಹೀಗಾಗಿ ಅರ್ಹ ಎನಿಸುವ ಅಭ್ಯರ್ಥಿಗಳು ಅಪ್ಲೇ ಮಾಡಬಹುದು.
ಸೌತ್ ಈಸ್ಟರ್ನ್ ರೈಲ್ವೆ ಅಪ್ರೆಂಟಿಸ್ ನೇಮಕಾತಿಗೆ 1791 ಉದ್ಯೋಗಗಳು ಇವೆ. 10ನೇ ತರಗತಿ ಅಥವಾ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. 15 ರಿಂದ 24 ವರ್ಷದ ಒಳಗಿನ ವಯೋಮಿತಿ ಹೊಂದಿರಬೇಕು.
100 ರೂಪಾಯಿ ಅರ್ಜಿ ಶುಲ್ಕವಾಗಿರುತ್ತದೆ. ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ ಹಾಗೂ ದಾಖಲಾತಿ ಪರಿಶೀಲನೆ ಮಾಡುಲಾಗುವುದು ಅದೇ ರೀತಿ
ವೈದ್ಯಕೀಯ ತಪಾಸಣೆಯು ಮಾಡಲಾಗುತ್ತದೆ.
6 ನವೆಂಬರ್ 2024 ರಂದು ನೋಟಿಫಿಕೆಶನ್ ಬಿಡುಗಡೆ ದಿನಾಂಕವಾಗಿದ್ದು, 10- ಡಿಸೆಂಬರ್ 2024 ರಂದು ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಲು ಬಯಸುವ ಯುವಕರಿಗೆ ಉತ್ತಮ ಅವಕಾಶ ಒದಗಿ ಬಂದಿದೆ. ಆಗ್ನೇಯ ರೈಲ್ವೆ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಹೀಗಾಗಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವೆಬ್‌ಸೈಟ್- rrcser.co.in ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.