spot_img
spot_img

ಆ್ಯಪಲ್​ ಪ್ರಿಯರಿಗೆ ಗೂಡ್‌ ನ್ಯೂಸ್‌ ; iPhone​ 16 ಸರಣಿಯನ್ನು ಮನೆ ಬಾಗಿಲಲ್ಲೇ ವಿತರಿಸುತ್ತೆ ಈ ಫ್ಲಾಟ್​ಫಾರ್ಮ್​!

spot_img
spot_img

Share post:

ಕುಪರ್ಟಿನೋ ಮೂಲಕ ಆ್ಯಪಲ್​ ಕಂಪನಿ ಐಫೋನ್ (Apple company iPhone )​ 16 ಸರಣಿಯನ್ನು ಪರಿಚಯಿಸಿದ್ದು, ಇಂದು ಭಾರತದಲ್ಲಿ ಮಾರಾಟ ಪ್ರಾರಂಭವಾಗಿದೆ. ಬಹುತೇಕರು ನೂತನ ಐಫೋನ್​​ ಖರೀದಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ : ಬೆಳಗಾವಿ ಜಿಲ್ಲೆ ವಿದ್ಯಾರ್ಥಿನಿಯರು ಶೈಕ್ಷಣಿಕ ಜಿಲ್ಲಾ ಮಟ್ಟದ ಬಾಲಕಿಯರ ಪಂದ್ಯಾವಳಿಯಲ್ಲಿ ಭಾಗವಯಹಿ ಕಾಲೇಜಗೆ ಕಿರ್ತೀ ತಂದಿದ್ದಾರೆ.!

ಮುಂಬೈ, ದೆಹಲಿಯಲ್ಲಿ ಶಾಪ್‌ಗಳ ಮುಂದೆ ಜನರು ಕ್ಯೂ ನಿಂತಿರುವ ಘಟನೆಯು ಸಾಕ್ಷಿಯಾಗಿದೆ, ಆ್ಯಪಲ್​​ ಸ್ಟೋರ್​ ತೆರೆಯುವುದಕ್ಕೂ ಮುನ್ನವೇ ಜನರು ಐಫೋನ್​ 16 ಖರೀದಿಸಲು ಸಾಲುಗಟ್ಟಿನಿಂತ ಘಟನೆ ದೃಶ್ಯ ಸಮೇತ ಬೆಳಕಿಗೆ ಬಂದಿದೆ.

ಆದರೆ ಐಫೋನನ್ನು ಬರೀ 10 ನಿಮಿಷದಲ್ಲಿ ಮನೆ ಬಾಗಿಲಲ್ಲೇ ಖರೀದಿಸಬಹುದಾಗಿದೆ. ಅದಕ್ಕೆಂದೇ ಆನ್​ಲೈನ್​​ ಕಿರಾಣಿ ವಿತರಣಾ ವೇದಿಕೆ ಬಿಗ್​ಬಾಸ್ಕೆಟ್​​ ಐಫೋನ್​ 16ಗಾಗಿ ಟಾಟಾ ಕ್ರೋಮಾ ಜೊತೆಗೆ ಪಾಲುದಾರಿಕೆ ಹೊಂದಿದೆ.

ಬಿಗ್​ ಬಾಸ್ಕೆಟ್​​​ನ ಎಲೆಕ್ಟ್ರಾನಿಕ್ಸ್​​ ವರ್ಗಕ್ಕೆ ಭೆಟಿ ನೀಡುವ ಮೂಲಕ ಐಫೋನ್​ 16 ಸರಣಿ ಖರೀದಿಸಬಹುದಾಗಿದೆ. ಕಂಪನಿಯು ಬರೀ 10 ನಿಮಿಷದಲ್ಲಿ ವಿತರಿಸುವ ಭರವಸೆಯನ್ನು ನೀಡಿದೆ. ಬೆಂಗಳೂರು, ದೆಹಲಿ, ಮುಂಬೈ ಆ್ಯಪಲ್​ ಪ್ರಿಯರು ಖರೀದಿಸಬಹುದಾಗಿದೆ.

ಐಫೋನ್​​ಗಾಗಿ ಕ್ಯೂ ನಿಂತ ಜನರು

ಮುಂಬೈನ ಬಿಕೆಸಿಯಲ್ಲಿರುವ ಮಳಿಗೆಯಲ್ಲಿ ಐಫೋನ್​ 16 ಸರಣಿ ಖರೀದಿಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಕಂಡಿದ್ದು, ಬೆರಗುಗೊಳಿಸುವಂತೆ ಮಾಡಿದೆ. ಅತ್ತ ದೆಹಲಿಯಲ್ಲಿ ಇಂತಹದ್ದೇ ದೃಶ್ಯ ಕಂಡುಬಂದಿದೆ.

ಇದನ್ನೂ ಓದಿ : ಬಾಂಗ್ಲಾಗೆ ಶಾಕ್‌ ಕೊಟ್ಟ ಆರ್ ಅಶ್ವಿನ್ ಹಾಗಲ್ಲ ; ಇತಿಹಾಸ ನೆನಪಿಸಿದ ಸ್ಟಾರ್ ಆಲ್​​ರೌಂಡರ್..!​ ಏನದು

ಆ್ಯಪಲ್​ ಸ್ಟೋರ್​​ ತೆರೆಯುವ ಮುನ್ನವೇ ಪೋನ್‌ ಶಾಪ್‌ಗಳ ಮುಂದೆ ಜನರು ಸೇರಿದ್ದಾರೆ. ಕ್ಯೂ ನಿಂತು ಐಫೋನ್​​ 16 ಸರಣಿ ಖರೀದಿಸಲು ಮುಂದಾಗಿದ್ದಾರೆ. ಕಳೆದ ವರ್ಷ ಐಫೋನ್​ 15 ಮಾರಾಟದ ಸಮಯದಲ್ಲೂ ಇಂತಹದ್ದೇ ದೃಶ್ಯ ಕಂಡುಬಂದಿದೆ.

ದೆಹಲಿ ಸಾಕೇತ್​​ನಲ್ಲಿರುವ ಆ್ಯಪಲ್​​ ಸ್ಟೋರ್(Apple Store )​ ಹೊರಗಡೆಯು ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ. ಸದ್ಯ ನೂತನ ಐಫೋನ್​ ಖರೀದಿಸಲು ಇಷ್ಟೊಂದು ಜನರು ಕುತೂಹಲ ಭರಿತರಾಗಿದ್ದಾರೆ ಎಂಬುದು ಅಚ್ಚರಿಗೆ ದೂಡಿದೆ.

 

spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...